ದರ್ಶನ್ 'ತಾರಕ್' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್?
ದರ್ಶನ್ ನಟನೆಯ 'ತಾರಕ್' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿದ ಪುನೀತ್ ಮತ್ತು ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಆದ್ರೆ, ಇದೆಲ್ಲಾ ಸುಳ್ಳು ಸುದ್ದಿ ಎಂಬುದು ಬಹಿರಂಗವಾಗಿದೆ.
'ತಾರಕ್' ಚಿತ್ರದಲ್ಲಿ ಪುನೀತ್ ಕಾಣಿಸಿಕೊಳ್ಳುವ ಬಗ್ಗೆ ನಿರ್ದೇಶಕ ಮಿಲನ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಪುನೀತ್ ಈ ಚಿತ್ರದಲ್ಲಿ ನಟಿಸುವ ಸುದ್ದಿ ಜಸ್ಟ್ ಗಾಸಿಪ್ ಅಷ್ಟೇ ಎನ್ನುವ ಮೂಲಕ ಪ್ರಕಾಶ್ ಎಲ್ಲ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಈ ಹಿಂದೆ ಪುನೀತ್ ನಟನೆಯ 'ಅರಸು' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುನೀತ್ ನಟನೆಯ 'ಮಿಲನ' ಚಿತ್ರವನ್ನು ಪ್ರಕಾಶ್ ನಿರ್ದೇಶನ ಮಾಡಿದ್ದರು. ಈ ಕಾರಣದಿಂದ ಈಗ ಪುನೀತ್ 'ತಾರಕ್' ಚಿತ್ರದಲ್ಲಿ ವಿಶೇಷ ಪಾತ್ರವನ್ನ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಉದ್ಬವವಾಗಿತ್ತು.
More from Filmibeat
English summary
Puneeth Rajkumar will Not Be A Part Of Darshan's 'Tarak' Movie. Says Director Milana Prakash
puneeth rajkumar darshan prakash sruthi hariharan sandalwood ಪುನೀತ್ ರಾಜ್ ಕುಮಾರ್ ದರ್ಶನ್ ಪ್ರಕಾಶ್ ಶ್ರುತಿ ಹರಿಹರನ್ ಸ್ಯಾಂಡಲ್ ವುಡ್


Click it and Unblock the Notifications











