»   » ಪತ್ನಿ ಅಶ್ವಿನಿಗೆ ಅಚ್ಚರಿಯ ಉಡುಗೊರೆ ನೀಡಿದ ಅಪ್ಪು

ಪತ್ನಿ ಅಶ್ವಿನಿಗೆ ಅಚ್ಚರಿಯ ಉಡುಗೊರೆ ನೀಡಿದ ಅಪ್ಪು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ಅಂತ 'ಪವರ್ ಹೌಸ್' ಅಭಿಮಾನಿಗಳಿಗೆ ಗೊತ್ತು. ಆದ್ರೆ, ಇದೇ ಪುನೀತ್ ಮುದ್ದಿನ ಮಡದಿ ಜನ್ಮದಿನ ಯಾವಾಗ ಅನ್ನೋದು ಅನೇಕರಿಗೆ ಗೊತ್ತಿಲ್ಲ.

ಪುನೀತ್ ರಾಜ್ ಕುಮಾರ್ ಮತ್ತು ಪತ್ನಿ ಅಶ್ವಿನಿ ಹುಟ್ಟುಹಬ್ಬಕ್ಕೆ ಕೇವಲ ಮೂರು ದಿನಗಳ ಅಂತರವಷ್ಟೇ. ಅಪ್ಪು ಹುಟ್ಟುಹಬ್ಬವನ್ನ ಇಡೀ ಕರ್ನಾಟಕ ಆಚರಿಸುತ್ತೆ. ಆದ್ರೆ, ಮನದೊಡತಿಯ ಜನ್ಮದಿನವನ್ನ ಅಪ್ಪು ಸರ್ಪೈಸ್ ಪ್ಲಾನ್ ಮಾಡಿ ಹೇಗೆ ಸೆಲೆಬ್ರೇಟ್ ಮಾಡ್ತಾರೆ ಅನ್ನೋದಕ್ಕೆ ಇಲ್ಲಿದೆ ನೋಡಿ ಪ್ರತ್ಯಕ್ಷ ಸಾಕ್ಷಿ.

Puneeth Rajkumar celebrates his wife Ashwini's birthday

ಹೌದು, ನಿನ್ನೆ (ಮಾರ್ಚ್ 14) ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಜನುಮದಿನ. ಮನೆಯಲ್ಲೇ ಸಿಂಪಲ್ಲಾಗಿ ಪಾರ್ಟಿ ಪ್ಲಾನ್ ಮಾಡಿದ್ದ ಅಪ್ಪು, ಬಂಧು-ಬಳಗ ಮತ್ತು ಆಪ್ತ ಸ್ನೇಹಿತರೊಂದಿಗೆ ಪತ್ನಿಯ ಬರ್ತಡೆಯನ್ನ ಆಚರಿಸಿದ ಪರಿ ಇದು.

ಅಶ್ವಿನಿ ಇಷ್ಟ ಪಡುವ ಚಾಕಲೇಟ್ ಫ್ಲೇವರ್ ಕೇಕ್ ನ ಸ್ಪೆಷಲ್ ಆಗಿ ರೆಡಿಮಾಡಿಸಿದ ಅಪ್ಪು, ಖುದ್ದು ಪತ್ನಿ ಪಕ್ಕ ನಿಂತು ಜೊತೆ ಜೊತೆಯಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. [ಮುಂಚಿನಂತೆ ಈಗಿಲ್ಲ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್!]

ಅಶ್ವಿನಿಗಾಗಿ ಅಪ್ಪು ಮಾಡಿಸಿರುವ ಸ್ಪೆಷಲ್ ಕೇಕ್ ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ, ಸುತ್ತಲೂ ಚಿಕ್ಕ ಚಿಕ್ಕ ಕಪ್ ಕೇಕ್ ಗಳ ಮಧ್ಯೆ ಕಿರೀಟ ತೊಟ್ಟಿರುವ ಕ್ವೀನ್ ಕೇಕ್. ನೋಡಿದ ತಕ್ಷಣ ಯುವರಾಣಿ ಅಂತ ಭಾಸವಾಗುವುದು ಖಂಡಿತ ಅಲ್ವಾ.?

Puneeth Rajkumar celebrates his wife Ashwini's birthday

1999ರಲ್ಲಿ ಅಪ್ಪು ಕೈಹಿಡಿದ ಅಶ್ವಿನಿ, ದೊಡ್ಮನೆ ಕುಟುಂಬದ ಯುವರಾಣಿ. ಪತ್ನಿಯನ್ನ ರಾಣಿಯಂತೆ ನೋಡಿಕೊಳ್ಳುವ ಅಪ್ಪು, ಅದನ್ನ ಬಿಂಬಿಸುವುದಕ್ಕೆ ಈ ಸರ್ಪೈಸ್ ಪ್ಲಾನ್ ಮಾಡಿದ್ರು. ಇದನ್ನ ಕಂಡ ಅಶ್ವಿನಿ ದಿಲ್ ಖುಷ್ ಆಗಿದ್ದಾರೆ.

ಮನೆಮಂದಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅಶ್ವಿನಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

    English summary
    Kannada Actor Puneeth Rajkumar's wife Ashwini celebrated her birthday on March 14th. The Actor celebrated his wife's birthday at his residence in a simple manner. The photo of Appu-Ashwini clicked at the celebration is here.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada