For Quick Alerts
  ALLOW NOTIFICATIONS  
  For Daily Alerts

  ನಮ್ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು: ನಟಿ ಜಯಂತಿ ಬಗ್ಗೆ ಪುನೀತ್ ಮಾತು

  |

  'ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾದಂಥವರು, ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅಪ್ಪಾಜಿ ಕಾಡಿಗೆ ಹೋಗಿದ್ದಂತಹ ಸಂದರ್ಭದಲ್ಲಿ, ದಿನ ಕರೆ ಮಾಡಿ ನಮ್ಮ ಕುಟುಂಬ ಯೋಗಕ್ಷೇಮ ವಿಚಾರಿಸುತ್ತಿದ್ದರು' ಎಂದು ಪುನೀತ್ ರಾಜ್ ಕುಮಾರ್ ಹಿರಿಯ ನಟಿ ಜಯಂತಿ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ.

  Recommended Video

  ನಾನು ತುಂಬಾ ಚಿಕ್ಕೋನು ಆದ್ರೆ..?

  ಇಂದು ಬೆಳಗ್ಗೆ ನಿಧನ ಹೊಂದಿದ ಹಿರಿಯ ನಟಿ ಜಯಂತಿ ಅವರ ಅಗಲಿಗೆ ಚಿತ್ರರಂಗಕ್ಕೆ ಆಘಾತತಂದಿದೆ. ಅಭಿನಯ ಶಾರದೆಯ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಜಯಂತಿ ಅವರ ಅಗಲಿಗೆ ತುಂಬಾ ನೋವು ತಂದಿದೆ ಎಂದು ಪುನೀತ್ ರಾಜ್ ಕುಮಾರ್ ಸಹ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

  "ಜಯಂತಿ ಅಮ್ಮಾವ್ರು ಭಾರತೀಯ ಚಿತ್ರರಂಗದಲ್ಲಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಮ್ಮ ತಂದೆಯವರ ಜೊತೆ ಮುವತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾದಂಥವರು, ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅಪ್ಪಾಜಿ ಕಾಡಿಗೆ ಹೋಗಿದ್ದಂತಹ ಸಂದರ್ಭದಲ್ಲಿ, ದಿನ ಕರೆ ಮಾಡಿ ನಮ್ಮ ಕುಟುಂಬ ಯೋಗಕ್ಷೇಮ ವಿಚಾರಿಸುತ್ತಿದ್ದರು. ನಮಗೆ ಒಳ್ಳೆಯದಾಗಲಿ ಅಂತ ಪೂಜೆಗಳನ್ನು ಮಾಡಿಸುತ್ತಿದ್ರು" ಎಂದಿದ್ದಾರೆ.

  "ಅವರ ಜೊತೆ ನಾನು ರಾಜ್ ಸಿನಿಮಾದಲ್ಲಿ ಅಭಿನಯಿಸಿದ್ದು ನನ್ನ ಭಾಗ್ಯ. ಇವತ್ತು ಅವರನ್ನು ಕಳೆದುಕೊಂಡಿರುವುದು ನನಗೆ ಮತ್ತು ನಮ್ಮ ಕುಟುಂಬಕ್ಕೆ ತುಂಬಾ ನೋವುಂಟು ಮಾಡಿದೆ. ಅವರ ನೆನಪುಗಳು ನಮ್ಮೊಂದಿಗೆ ಸದಾ ಜೀವಂತ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ. ಓಂ ಶಾಂತಿ" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಜಯಂತಿ ಅವರು ಡಾ.ರಾಜ್ ಕುಮಾರ್ ಕುಟುಂಬದ ಜೊತೆ ತುಂಬಾ ಆತ್ಮೀಯವಾದ ಸಂಬಂಧ ಹೊಂದಿದ್ದರು. ಡಾ.ರಾಜ್ ಕುಮಾರ್ ಜೊತೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ನಟಿ ಜಯಂತಿ. 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜ್ ಕುಮಾರ್ ಜೊತೆ ನಟಿಸಿದ್ದಾರೆ. ಡಾ. ರಾಜ್ ಕುಮಾರ್ ಅವರನ್ನು ರಾಜ್ ಎಂದು ಕರೆಯುತ್ತಿದ್ದ ಏಕೈಕ ನಟಿ ಜಯಂತಿ. ರಾಜ್ ಕುಮಾರ್ ನಿಧನದ ಬಳಿಕವು ಅವರ ಕುಟುಂಬದ ಜೊತೆಗಿನ ಜಯಂತಿ ಅವರ ಸ್ನೇಹ ಬಾಂಧವ್ಯ ಹಾಗೆ ಮುಂದುವರೆದಿತ್ತು.

  English summary
  Puneeth Rajkumar express condolence to Veteran Actress Jayanthi Death; remembers the actress memories with Dr Rajkumar. Read on.
  Monday, July 26, 2021, 15:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X