For Quick Alerts
  ALLOW NOTIFICATIONS  
  For Daily Alerts

  ಪತ್ನಿ ಜೊತೆ ಮಾತಾಡಲು ಬೆಟ್ಟ ಹತ್ತಿದ್ದ ಅಪ್ಪು: 'ಗಂಧದ ಗುಡಿ'ಯಲ್ಲಿ ಅಶ್ವಿನಿ ಸರ್ಪ್ರೈಸ್ ಎಂಟ್ರಿ!

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ದರ್ಶನಕ್ಕೆ ಅಭಿಮಾನಿಗಳು ಸಾಕ್ಷಿಯಾಗುತ್ತಿದೆ. ಇನ್ನುಕೆಲವೇ ಕ್ಷಣಗಳಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಕಣ್ಮುಂದೆ ಬರಲಿದ್ದಾರೆ. ಈ ಅಮೂಲ್ಯ ಘಳಿಗೆಯನ್ನು ಕಣ್ತುಂಬಿಕೊಳ್ಳಲು ವೇದಿಕೆ ಸಜ್ಜಾಗುತ್ತಿದೆ.

  ಅಪ್ಪು ಕನಸಿನ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಂದೂ ವಿಸ್ತಾರವಾಗಿ ಮಾತಾಡಿರಲಿಲ್ಲ. ಇದೇ ಮೊದಲ ಬಾರಿಗೆ 'ಗಂಧದ ಗುಡಿ' ಮೇಕಿಂಗ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. 'ಗಂಧದ ಗುಡಿ' ಟೈಟಲ್ ಇಟ್ಟಿದ್ದೇಗೆ? ಎಲ್ಲೆಲ್ಲಿ ಶೂಟ್ ಆಗುತ್ತೆ ಅನ್ನೋದನ್ನು ನೆನಪಿಸಿಕೊಂಡಿದ್ದಾರೆ.

  "ಒಂದು ಕಡೆ ಬೇಸರ.. ಮತ್ತೊಂದು ಕಡೆ ಖುಷಿ ಕೂಡ ಇದೆ": ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೊದಲ ಸಂದರ್ಶನ

  ಈ ಸಿನಿಮಾ ಶೂಟ್ ಮಾಡುವಾಗ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಒತ್ತಡ ಹೇರಿ ಕರೆಸಿಕೊಂಡಿದ್ದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಅದಕ್ಕಾಗಿ ಅಪ್ಪು ಮಾಡಿದ ಹರಸಾಹಸವನ್ನು ನೆನಪಿಸಿಕೊಂಡಿದ್ದಾರೆ.

   ಅಶ್ವಿನಿ ಜೊತೆ ಮಾತಾಡಲು ಬೆಟ್ಟ ಏರಿದ್ದ ಅಪ್ಪು

  ಅಶ್ವಿನಿ ಜೊತೆ ಮಾತಾಡಲು ಬೆಟ್ಟ ಏರಿದ್ದ ಅಪ್ಪು

  ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ' ಸಿನಿಮಾ ಶೂಟ್ ಮಾಡುವಾಗ ಪತ್ನಿ ಜೊತೆ ಒಂದು ಇಡೀ ದಿನ ಮಾತಾಡಿರಲಿಲ್ಲ. ನೆಟ್‌ವರ್ಕ್ ಸಿಗದ ಕಾರಣ ಬೆಟ್ಟ ಹತ್ತಿ ಪೋನ್ ಮಾಡಿದ್ದರು. ಆ ಕ್ಷಣವನ್ನೇ ನೆನಪಿಸಿಕೊಂಡಿದ್ದಾರೆ. " ನಾನು ಕಾಳಿ ನದಿಯಲ್ಲಿ ಶೂಟ್ ಮಾಡುವಾಗ ಹೋಗಿದ್ದೆ. ಎರಡು ದಿನ ಮುನ್ನ ಫೋನ್ ಮಾಡಿದ್ದರು. ಈ ಕಾಳಿ ನದಿಗೆ ಬಂದಿದ್ದೀವಿ. ಒಂದು ಬೆಟ್ಟ ಹತ್ತಬೇಕಾಯ್ತು ಈ ಫೋನ್ ಕಾಲ್ ಮಾಡುವುದಕ್ಕೆ ಅಂತ ಹೇಳಿದ್ದರು. ಅವತ್ತು ಇಡೀ ದಿನ ಫೋನ್ ಮಾಡಿರಲಿಲ್ಲ. ಈ ಕಾಲ್ ಮಾಡುವುದಕ್ಕೆ ಒಂದು ಬೆಟ್ಟ ಹತ್ತಿದ್ದೀನಿ ನೋಡು ಅಂತ ಹೇಳಿದ್ದರು." ಎಂದು ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

   'ಬರ್ಲೇಬೇಕು, ಐ ಡೋಂಟ್ ಕೇರ್ ಅಂದಿದ್ರು'

  'ಬರ್ಲೇಬೇಕು, ಐ ಡೋಂಟ್ ಕೇರ್ ಅಂದಿದ್ರು'

  "ನೀನು ಇಲ್ಲಿಗೆ ಬರಲೇಬೇಕು. ಐ ಡೋಂಟ್ ಕೇರ್ ಅಂದಿದ್ದರು. ನಾನು ಸುಮ್ಮನೆ ಸಡನ್‌ ಆಗಿ ಹಾಗೆ ಬರೋಕೆ ಆಗಲ್ಲ ಅಂತ ಹೇಳಿದ್ದೆ. ಇಲ್ಲ ಬರಲೇಬೇಕು ಅಂತ ಹೇಳಿದ್ದರು. ಸರಿ ಅಂತ ಎರಡು ದಿನ ಆದ್ಮೇಲೆ ಹೋದೆ. ಮತ್ತೆ ಅದೇ ಅಲ್ಲಿ ಬಂದು ಏನು ಮಾಡೋದು ಅಂತ ಹೇಳಿದೆ. ಇಲ್ಲಾ ಬರಲೇಬೇಕು ಅಂತ ಹೇಳಿದ್ದರು. ನನ್ನ ಜೊತೆ ಟ್ರೆಕ್ಕಿಂಗ್ ಮಾಡು ಅಂತ ಹೇಳಿದ್ದರು. ಟೈಗರ್ ರಿಸರ್ವ್ ಫಾರೆಸ್ಟ್ ಅದು ಪರ್ಮಿಷನ್ ಸಿಕ್ಕಿದೆ ಅಂತ ಹೇಳಿದ್ದರು." ಎಂದು ಸಂತೋಷ್ ಆನಂದ್‌ರಾಮ್ ಜೊತೆಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ.

   ಅಪ್ಪು ಜೊತೆ ಅಶ್ವಿನಿ ಟ್ರಕ್ಕಿಂಗ್

  ಅಪ್ಪು ಜೊತೆ ಅಶ್ವಿನಿ ಟ್ರಕ್ಕಿಂಗ್

  "ನಾನು ಹೋದೆ ಅಲ್ಲಿಗೆ. ಅವರೊಂದಿಗೆ ಟ್ರೆಕ್ ಮಾಡಿದೆ. ಅವರು ಅಮೋಘ್ ಮತ್ತು ಇಡೀ ತಂಡದೊಂದಿಗೆ ಟ್ರೆಕ್ ಮಾಡಿದೆ. ಬೆಳಗ್ಗೆ ನಾಲ್ಕುವರೆ ಹಾಗೇ ಶುರು ಮಾಡಿದ್ದು, ಆರೂವರೆವರೆಗೂ ಮಾಡಿದ್ವಿ. ಅದೊಂದು ಅದ್ಬುತ ಅನುಭವ. ಅಲ್ಲಿಂದ ಬಂದ ಮೇಲೆ ಪಾತುಕುಡಿ ಅಂತ ಹಳ್ಳಿ. ಅಲ್ಲಿಗೆ ಹೋಗಿ, ಊಟ ಮಾಡಿಕೊಂಡು ಬಂದ್ವಿ." ಎಂದು ಕ್ಷಣವನ್ನುರಿ ಕಾಲ್ ಮಾಡಿಕೊಂಡಿದ್ದಾರೆ.

   ಎಲ್ಲೆಲ್ಲಿ 'ಗಂಧದ ಗುಡಿ' ಶೂಟಿಂಗ್?

  ಎಲ್ಲೆಲ್ಲಿ 'ಗಂಧದ ಗುಡಿ' ಶೂಟಿಂಗ್?

  'ಗಂಧದ ಗುಡಿ' ಸುಮಾರು ಏಳೆಂಟು ಜಾಗಗಳಲ್ಲಿ ಶೂಟಿಂಗ್ ಆಗಿದೆ. ಬಂಡೀಪುರದಲ್ಲಿ ಶೂಟಿಂಗ್ ಆಗಿದೆ. ನಾಗರ ಹೊಳೆಯಲ್ಲಿ ಶೂಟ್ ಆಗಿದೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಆಗಿದೆ. ಮುರುಡೇಶ್ವರದ ನೇತ್ರಾಣಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಳಿ ನದಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಡಾ.ರಾಜ್‌ಕುಮಾರ್ ಹುಟ್ಟೂರು ಗಾಜನೂರಿನಲ್ಲಿ ಆಗಿದೆ. ಇನ್ನೂ ಕೆಲವೆಡೆ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಇದನ್ನು ಅಕ್ಟೋಬರ್ 27 ಸಂಜೆಯಿಂದಲೇ ಕಣ್ತುಂಬಿಕೊಳ್ಳಬಹುದು.

  English summary
  Puneeth Rajkumar Forced Ashwini To Trekk With Him During Gandhada Gudi Making, Know More
  Thursday, October 27, 2022, 15:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X