For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರಸ್ವಾಮಿಯ ಮೆಚ್ಚಿನ ನಟ ಯಾರು ಗೊತ್ತೆ?

  |

  ರಾಜಕೀಯ-ಸಿನಿಮಾ ಎರಡರಲ್ಲೂ ಸಕ್ರಿಯರಾಗಿದ್ದಾರೆ ನಿಖಿಲ್ ಕುಮಾರಸ್ವಾಮಿ. ರಾಜಕೀಯದಿಂದ ತುಸು ಬಿಡುವು ಪಡೆದು ಸಿನಿಮಾದಲ್ಲಿ ಮತ್ತೆ ತೊಡಗಿಸಿಕೊಂಡಿದ್ದಾರೆ.

  ಲಾಕ್‌ಡೌನ್ ಅವಧಿಯಲ್ಲಿ ಕತೆ ಕೇಳುವ ಕಾರ್ಯದಲ್ಲಿ ನಿರತರಾಗಿದ್ದ ನಿಖಿಲ್ ಕೆಲವಾರು ಕತೆಗಳನ್ನನು ಓಕೆ ಸಹ ಮಾಡಿದ್ದಾರಂತೆ. ಎರಡು ಸಿನಿಮಾದ ಚಿತ್ರೀಕರಣ ಸಹ ನಡೆಯುತ್ತಿದೆ.

  ಪತ್ನಿ ರೇವತಿಯನ್ನು ಹೊಗಳಿ ಕಾಲೆಳೆದ ನಿಖಿಲ್ ಕುಮಾರಸ್ವಾಮಿ

  ಚಿತ್ರರಂಗದಲ್ಲಿ ದೊಡ್ಡ ಎತ್ತರಕ್ಕೆ ಏರಬೇಕೆನ್ನುವ ಇರಾದೆ ಇಟ್ಟುಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಹಿರಿಯ ನಟರೊಬ್ಬರನ್ನು ಮನಸಾರೆ ಇಷ್ಟಪಡುತ್ತಾರೆ ಅವರೇ ಡಾ.ರಾಜ್‌ಕುಮಾರ್. ಈ ವಿಷಯವನ್ನು ಅನುಶ್ರೀ ಅವರೊಂದಿಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಆದರೆ ತಮ್ಮ ಸಮಕಾಲೀನ ನಟರಲ್ಲಿ ಯಾರು ಇಷ್ಟ ಎಂದಾಗ ನಿಖಿಲ್ ಹೆಸರಿಸಿದ್ದು ಪುನೀತ್ ರಾಜ್‌ಕುಮಾರ್ ಅನ್ನು.

  ಯುವ ನಟ ನಿಖಿಲ್ ಕುಮಾರಸ್ವಾಮಿ ಮೆಚ್ಚಿನ ನಟ

  ಯುವ ನಟ ನಿಖಿಲ್ ಕುಮಾರಸ್ವಾಮಿ ಮೆಚ್ಚಿನ ನಟ

  ಹೌದು, ಯುವ ನಾಯಕ ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಮೊದಲಿಗೆ ಡಾ.ರಾಜ್‌ಕುಮಾರ್ ಬಹಳ ಇಷ್ಟವಂತೆ. ಈಗಿನ ಕಾಲದ ನಾಯಕ ನಟರಲ್ಲಿ ಅಚ್ಚುಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್. ಇದಕ್ಕೆ ಕಾರಣವನ್ನೂ ನೀಡಿದ್ದಾರೆ ನಿಖಿಲ್.

  ಪುನೀತ್ ಒಬ್ಬ ನಿಜವಾದ ಸೂಪರ್ ಸ್ಟಾರ್: ನಿಖಿಲ್

  ಪುನೀತ್ ಒಬ್ಬ ನಿಜವಾದ ಸೂಪರ್ ಸ್ಟಾರ್: ನಿಖಿಲ್

  'ನನ್ನ ಪ್ರಕಾರ ಪುನೀತ್ ಅವರು ಒಬ್ಬ ಸೂಪರ್ ಸ್ಟಾರ್. ಆದರೆ ಅವರು ಎಂದೂ ತಾವೊಬ್ಬ ಸೂಪರ್ ಸ್ಟಾರ್ ಎಂದು ಹೇಳಿಕೊಳ್ಳುವುದಿಲ್ಲ. ಬಹಳ ಸರಳವಾಗಿ, ವಿನಯವಂತರಾಗಿ ಇರುತ್ತಾರೆ. ಅವರ ಆ ಗುಣ ನನಗೆ ಬಹಳ ಇಷ್ಟ. ಅವರೊಬ್ಬ ಅದ್ಭುತ ನಟ' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.

  'ಪೈಲ್ವಾನ್' ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ನಿರ್ದೇಶಕ ಕೃಷ್ಣ, ಹೀರೋ ಯಾರು?

  ಪುನೀತ್‌ಗೆ ಹಣಕಾಸು ಸಚಿವ ಸ್ಥಾನ ಕೊಟ್ಟ ನಿಖಿಲ್!

  ಪುನೀತ್‌ಗೆ ಹಣಕಾಸು ಸಚಿವ ಸ್ಥಾನ ಕೊಟ್ಟ ನಿಖಿಲ್!

  ಯಾವ ನಟರಿಗೆ ಯಾವ ಸಚಿವ ಸ್ಥಾನಕೊಡುತ್ತೀರಿ ಎಂಬ ಅನುಶ್ರೀಯ ತರ್ಲೆ ಪ್ರಶ್ನೆಗೆ ಉತ್ತರಿಸಿದ ನಿಖಿಲ್, ಹಣಕಾಸು ಖಾತೆಯನ್ನು ಪುನೀತ್‌ಗೆ, ವಿದೇಶಾಂಗ ವ್ಯವಹಾರ ಖಾತೆಯನ್ನು ಯಶ್‌ಗೆ, ವಿದೇಶಾಂಗ ಸಚಿವ ಸುದೀಪ್‌ಗೆ, ರಕ್ಷಣಾ ಸಚಿವ ದರ್ಶನ್‌ಗೆ ಹಾಗೂ ಕೊನೆಗೆ ಪ್ರಧಾನಿ ಸ್ಥಾನವನ್ನು ಶಿವಣ್ಣಗೆ ಕೊಡುತ್ತಾರಂತೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ರಚಿತಾ ರಾಮ್ ಗೆ ಕೊಡ್ತಾರಂತೆ ನಿಖಿಲ್.

  DIRECTORS DIARY | ಕೋಣನಕುಂಟೆ ರಮ್ಯಾ ಬಾರ್ ನಲ್ಲಿ ಡೈಲಿ ಮಲಗುತ್ತಿದ್ದೆ | R. Chandru | Filmibeat Kannada
  ಅಭಿಷೇಕ್ ಅಂಬರೀಶ್ ಬಗ್ಗೆ ನಿಖಿಲ್ ಮಾತು

  ಅಭಿಷೇಕ್ ಅಂಬರೀಶ್ ಬಗ್ಗೆ ನಿಖಿಲ್ ಮಾತು

  ಬಿಯರ್ ಅಥವಾ ವೈನ್ ಯಾವುದು ಇಷ್ಟ ಎಂದು ಅನುಶ್ರೀ ಕೇಳಿದ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ನಿಖಿಲ್, 'ನಾನು ಕುಡಿಯುವುದು ಬಿಟ್ಟು ಒಂಬತ್ತು ವರ್ಷವಾಯಿತು ಎಂದರು. ಇದರ ಹೊರತಾಗಿ ಅಭಿಷೇಕ್ ಅಂಬರೀಶ್ ಬಗ್ಗೆಯೂ ಮಾತನಾಡಿದ ಅವರು, ನಾನೂ ಅಭಿಷೇಕ್ ಮೊದಲಿನಿಂದಲೂ ಸ್ನೇಹಿತರೇನೂ ಆಗಿರಲಿಲ್ಲ. ಪರಸ್ಪರ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸೂಕ್ತವಲ್ಲ ಎನಿಸುತ್ತದೆ ಎಂದು ಸುಮ್ಮನಾದರು ನಿಖಿಲ್.

  English summary
  Puneeth Rajkumar is real super star said Nikhil Kumaraswamy. He said he admires him very much.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X