For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್ ಮಾಡುತ್ತಿರುವ ಈ ಕಾರ್ಯ ಎಲ್ಲ ನಟರಿಗೂ ಮಾದರಿ

  |

  ಪುನೀತ್ ರಾಜ್‌ಕುಮಾರ್ ನಟನೆಯಿಂದ ಮಾತ್ರವಲ್ಲ ತಮ್ಮ ಸಾಮಾಜಿಕ ಕಳಕಳಿಯಿಂದಲೂ ಪರಿಚಿತರು. ತಮ್ಮ ತಾಯಿ-ತಂದೆಯ ಹೆಸರಿನಲ್ಲಿ ಈಗಾಗಲೇ ಅನೇಕ ಸಾಮಾಜ ಸೇವೆಗಳನ್ನು ಅವರು ಮಾಡಿದ್ದಾರೆ.

  ಪುನೀತ್ ರಾಜ್ ಕುಮಾರ್ ಇದೀಗ ಹೊಸ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ರೈತರನ್ನು ಉಳಿಸಲು ಮಾಡುತ್ತಿರುವ ಪ್ರಯತ್ನಕ್ಕೆ ಪುನೀತ್ ರಾಜ್‌ಕುಮಾರ್ ಬೆನ್ನೆಲುಬಾಗಿ ನಿಂತಿದ್ದಾರೆ.

  ರೈತರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲೆಂದು ಪ್ರಾರಂಭಿಸಲಾಗಿರುವ 'ಫೀಡ್‌ ಯುವರ್ ಫಾರ್ಮರ್' ಕಾರ್ಯದಲ್ಲಿ ಪುನೀತ್ ರಾಜ್‌ಕುಮಾರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ರೈತರಿಗೆ ನೆರವಾಗಲು 'ಫೀಡ್ ಯುವರ್ ಫಾರ್ಮರ್'

  ರೈತರಿಗೆ ನೆರವಾಗಲು 'ಫೀಡ್ ಯುವರ್ ಫಾರ್ಮರ್'

  ಶ್ರೀವತ್ಸ ವಾಜಪೇಯಿ ಎನ್ನುವರು ಪ್ರಾರಂಭಿಸುತ್ತಿರುವ 'ಫೀಡ್ ಯುವರ್ ಫಾರ್ಮರ್' ರಾಜ್ಯದ ರೈತರ ಅಭಿವೃದ್ಧಿಯ ದೃಷ್ಟಿಯಿಂದ ಮಾಡಲಾಗುತ್ತಿರುವ ಸೇವಾ ಕಾರ್ಯಕ್ರಮ ಆಗಿದ್ದು, ಕೆಲವೇ ದಿನಗಳಲ್ಲಿ ದೊಡ್ಡದಾಗಿ ಲೋಕಾರ್ಪಣೆ ಆಗಲಿದೆ.

  ನಗರ ವಾಸಿಗಳು ರೈತರ ಸಹಾಯ ಮಾಡುವ ಯೋಜನೆ

  ನಗರ ವಾಸಿಗಳು ರೈತರ ಸಹಾಯ ಮಾಡುವ ಯೋಜನೆ

  ಹಳ್ಳಿಯಿಂದ ನಗರಕ್ಕೆ ಬಂದು ಸೆಟಲ್ ಆಗಿರುವವರು ತಾವು ಗಳಿಸಿದ ದುಡ್ಡಿನಲ್ಲಿ ಸ್ವಲ್ಪ ಹಣವನ್ನು ರೈತರ ಹಿತಕ್ಕಾಗಿ ನೀಡುವ ಯೋಜನೆ ಇದಾಗಿದ್ದು, ವಾಜಪೇಯಿ ಫೌಂಡೇಶನ್ಸ್ ಮೂಲಕ ಈ ಕಾರ್ಯಕ್ರಮ ಅನುಷ್ಠಾನವಾಗಲಿದೆ.

  ಪುನೀತ್ ರಾಜ್‌ಕುಮಾರ್ ರಾಯಭಾರಿ

  ಪುನೀತ್ ರಾಜ್‌ಕುಮಾರ್ ರಾಯಭಾರಿ

  ಈ ಕಾರ್ಯಕ್ರಮದ ಸಂಸ್ಥಾಪಕ ಶ್ರೀವತ್ಸ ವಾಜಪೇಯಿ ಆಗಿದ್ದು, ಪುನೀತ್ ರಾಜ್‌ಕುಮಾರ್ ಅವರು ಕಾರ್ಯಕ್ರಮದ ರಾಯಭಾರಿ ಆಗಿರಲಿದ್ದಾರೆ. ಈ ಕಾರ್ಯಕ್ರಮದ ಹಿಂದೆ ಹಲವು ಯುವಕರು ಶ್ರಮವಿದೆ.

  ಶಿವಣ್ಣ ಸಹ ಮೆಚ್ಚುಗೆಯ ಮಾತನ್ನಾಡಿದ್ದಾರೆ

  ಶಿವಣ್ಣ ಸಹ ಮೆಚ್ಚುಗೆಯ ಮಾತನ್ನಾಡಿದ್ದಾರೆ

  ಪುನೀತ್ ರಾಜ್‌ಕುಮಾರ್ ಮಾತ್ರವಲ್ಲದೆ ಇನ್ನೂ ಕೆಲವು ಸಿನಿಮಂದಿ ಈ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಬಿ.ಸುರೇಶ್, ಸಿಹಿ-ಕಹಿ ಚಂದ್ರು, ಕೆ.ಕಲ್ಯಾಣ್ ಸೇರಿದಂತೆ ಇನ್ನೂ ಹಲವರು ಇದರಲ್ಲಿ ತೊಡಿಗಿಸಿಕೊಂಡಿದ್ದಾರೆ. ಶಿವಣ್ಣ ಸಹ 'ಫೀಡ್ ಯುವರ್ ಫಾರ್ಮರ್' ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

  ಪುನೀತ್ ಮಾಡುತ್ತಿರುವ ಸಮಾಜ ಸೇವೆಗಳು

  ಪುನೀತ್ ಮಾಡುತ್ತಿರುವ ಸಮಾಜ ಸೇವೆಗಳು

  ಮಕ್ಕಳಿಗೆ ಉಚಿತ ಶಿಕ್ಷಣ, ಉನ್ನತ ವ್ಯಾಸಂಗ ಮಾಡುವವರಿಗೆ ಶಿಕ್ಷಣ ಸಹಾಯ, ರೈತಪರ ಹೋರಾಟ, ಅನಾಥಾಶ್ರಮಗಳಿಗೆ ಧನ ಸಹಾಯ, ಸಾವಿರಾರು ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ, ಹೀಗೆ ಹಲವು ರಾಜ್‌ಕುಮಾರ್‌ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ.

  English summary
  Star actor Puneeth Rajkumar joined hands with Vajapeyi foundation which helping farmer's by 'Feed your farmer' program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X