»   » 'ದೊಡ್ಮನೆ ಹುಡ್ಗ'ನ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿ

'ದೊಡ್ಮನೆ ಹುಡ್ಗ'ನ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿ

Posted By:
Subscribe to Filmibeat Kannada

ನೋ ಡೌಟ್, ಸೆಟ್ಟೇರಿದಾಗಿನಿಂದಲೂ 'ದೊಡ್ಮನೆ ಹುಡ್ಗ' ಸಿನಿಮಾ ಗಾಂಧಿನಗರದಲ್ಲಿ ಸೆನ್ಸೇಷನ್ ಹುಟ್ಟುಹಾಕಿದೆ. 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಇರುವ ಅನೇಕ ವಿಶೇಷತೆಗಳು ಇದುವರೆಗೂ 'ಬಿಗ್ ಬ್ರೇಕಿಂಗ್ ನ್ಯೂಸ್' ಆಗುತ್ತಲೇ ಬಂದಿದೆ.

ಪುನೀತ್ ರಾಜ್ ಕುಮಾರ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ರಾಧಿಕಾ ಪಂಡಿತ್, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಸ್ಯಾಂಡಲ್ ವುಡ್ ನ 'ದೊಡ್ಡ' ತಾರಾಬಳಗ ಈ ಚಿತ್ರದಲ್ಲಿ ಇರುವುದು ನಿಮಗೆ ಗೊತ್ತೇ ಇದೆ.


ಪುನೀತ್ ರಾಜ್ ಕುಮಾರ್ ಅಪ್ಪ-ಅಮ್ಮನ ಪಾತ್ರದಲ್ಲಿ ಅಂಬರೀಶ್-ಸುಮಲತಾ ನಟಿಸಿದ್ದಾರೆ. ಎರಡು ವಿಭಿನ್ನ ಶೇಡ್ ಗಳಲ್ಲಿ ರಾಧಿಕಾ ಪಂಡಿತ್ ನಟಿಸಿರುವುದು ಕೂಡ ಹಳೇ ಸುದ್ದಿ. ಈಗ 'ದೊಡ್ಮನೆ ಹುಡ್ಗ' ಚಿತ್ರದ ಕುರಿತಾಗಿ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿ ಬಯಲಾಗಿದೆ. ಮುಂದೆ ಓದಿ.....


ಪುನೀತ್ ರಾಜ್ ಕುಮಾರ್ ಪಾತ್ರ ಏನು ಗೊತ್ತಾ?

'ದೊಡ್ಮನೆ ಹುಡ್ಗ' ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ. ಆದ್ರೆ, ಅದೇ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಅಪ್ಪು ಮಾಡುವ ಕೆಲಸ ಏನು ಅಂತ ನಿಮಗೆ ಗೊತ್ತಿದ್ಯಾ?


ಅಪ್ಪು ಬಿರಿಯಾನಿ ಮಾರುವ ಹುಡುಗ ಕಣ್ರೀ.!

ಎಲ್ಲರೂ ಕಣ್ಣರಳಿಸುವ ಸುದ್ದಿ ಅಂದ್ರೆ ಇದೇ ನೋಡಿ....'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ 'ಬಿರಿಯಾನಿ ತಯಾರಕ'. ರಸ್ತೆ ಬದಿಯಲ್ಲಿ ಬಿರಿಯಾನಿ ಅಂಗಡಿ ನಡೆಸುವ ಯುವಕನ ಪಾತ್ರದಲ್ಲಿ ಅಪ್ಪು ಅಭಿನಯಿಸಿದ್ದಾರೆ.! ['ದೊಡ್ಮನೆ ಹುಡ್ಗ' ನೋಡೋರಿಗೆ ಬಿರಿಯಾನಿ, 'ರಾಜ್‌ಕುಮಾರ್' ಲಾಡು ಫ್ರೀ!]


ಫೋಟೋ ನೋಡಿ....

ಪ್ಲೇಟ್ ಲೆಕ್ಕದಲ್ಲಿ ಬಿರಿಯಾನಿ, ಎಗ್ ರೈಸ್, ಆಮ್ಲೆಟ್ ಮಾರುವ 'ದೊಡ್ಮನೆ ಹುಡ್ಗ' ಹೇಗ್ ಕಾಣ್ಬಹುದು ಅಂತ ಕುತೂಹಲ ಇದ್ರೆ ಈ ಫೋಟೋ ನೋಡಿ....


ಇದು 'ದೊಡ್ಮನೆ ಹುಡ್ಗ'ನ ಕೆಲಸವೇ?

'ದೊಡ್ಮನೆ ಹುಡ್ಗ' ಅಂದಕೂಡಲೆ ಶ್ರೀಮಂತ, ದೊಡ್ಡ ಹೆಸರಿನ ಕುಟುಂಬದ ಮಗ ಇರಬಹುದು ಅಂತ ಸಹಜವಾಗಿ ಎಲ್ಲರೂ ಭಾವಿಸಿದ್ದರು. ಆದ್ರೆ, 'ದೊಡ್ಮನೆ ಹುಡ್ಗ'ನಾಗಿ ಅಪ್ಪು 'ಬಿರಿಯಾನಿ' ಮಾರುತ್ತಾರೆ ಅಂದ್ರೆ....??? ['ದೊಡ್ಮನೆ ಹುಡ್ಗ' ಚಿತ್ರದ ಬಗ್ಗೆ ಕೇಳಿಬಂದಿರುವ ಹೊಸ ಗಾಸಿಪ್ ಇದೇ...]


ಅಭಿಮಾನಿಗಳು 'ದೊಡ್ಮನೆ ಬಿರಿಯಾನಿ' ಹಂಚಲಿದ್ದಾರೆ.!

'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಅಪ್ಪು ಬಿರಿಯಾನಿ ಮಾರುತ್ತಾರೆ ಅಂತ ಗೊತ್ತಾದ ಕೂಡಲೆ, ಸೆಪ್ಟೆಂಬರ್ 30 ರಂದು ಬೆಂಗಳೂರಿನ ಮುಖ್ಯ ಚಿತ್ರಮಂದಿರದಲ್ಲಿ 'ದೊಡ್ಮನೆ ಹುಡ್ಗ' ನೋಡುವ ಪ್ರೇಕ್ಷಕರಿಗೆ 'ದೊಡ್ಮನೆ ಬಿರಿಯಾನಿ' ಹಂಚಲು ತೀರ್ಮಾನಿಸಿದ್ದಾರೆ.


ಹಲವು ಕುತೂಹಲಗಳಿವೆ....

ಚಿತ್ರಕ್ಕೆ 'ದೊಡ್ಮನೆ ಹುಡ್ಗ' ಅಂತ ದುನಿಯಾ ಸೂರಿ ಯಾಕೆ ಹೆಸರಿಟ್ಟರು. ಅಪ್ಪುಗೆ 'ಬಿರಿಯಾನಿ' ಮಾರುವ ಕಸುಬು ಏಕೆ? ಅಂಬರೀಶ್ ರವರ ಪಾತ್ರ ಏನು? ರಾಧಿಕಾ ಪಂಡಿತ್ ದ್ವಿಪಾತ್ರ ಏಕೆ? ಎಂಬ ಹಲವು ಕುತೂಹಲಗಳಿಗೆ ಸೆಪ್ಟೆಂಬರ್ 30 ರಂದು ಉತ್ತರ ಸಿಗಲಿದೆ. ಯಾಕಂದ್ರೆ 'ದೊಡ್ಮನೆ ಹುಡ್ಗ' ಬಿಡುಗಡೆ ಆಗುವುದು ಅವತ್ತೇ.!


English summary
Kannada Actor Puneeth Rajkumar plays Biriyani Maker in Kannada Movie 'Dodmane Hudga' which is all set to release on September 30th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada