For Quick Alerts
  ALLOW NOTIFICATIONS  
  For Daily Alerts

  ಉಡುಪಿಯಲ್ಲಿ ಯೋಧರ ತ್ಯಾಗ ನೆನೆದ ನಟ ಪುನೀತ್

  |

  ಭಾರತದ 49 ಯೋಧರು ಪುಲ್ವಾಮಾ ದಾಳಿಗೆ ಬಲಿಯಾಗಿದ್ದಾರೆ. ಉಗ್ರರ ದಾಳಿಯಿಂದ ನಿಧನರಾದ ಯೋಧರು ಭಾರತಾಂಬೆಯ ಅಮರ ಮಕ್ಕಳಾಗಿದ್ದಾರೆ. ಈ ಪೈಕಿ ಕರ್ನಾಟಕದ ಯೋಧ ಗುರು ಪಾರ್ಥಿವ ಶರೀರ ಮಂಡ್ಯವನ್ನು ತಲುಪುತ್ತಿದೆ.

  ನಟ ಪುನೀತ್ ರಾಜ್ ಕುಮಾರ್ ಇದೀಗ ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡಿದ್ದಾರೆ. ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ವೇಳೆ ಪುನೀತ್ ಈ ಬಗ್ಗೆ ಹೇಳಿಕೆ ನೀಡಿದರು.

  ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?

  ''ನಮಗೋಸ್ಕರ ಅವರು ಗಡಿ ಭಾಗದಲ್ಲಿ ನಿಂತು ಕಷ್ಟ ಪಡುತ್ತಾರೆ. ಅಲ್ಲಿ ಭಾಗಿಯಾದ ಎಲ್ಲರೂ ಭಾರತೀಯರು. ನಾನು ಅವರ ಬಗ್ಗೆ ಏನು ಮಾತನಾಡಿದರು ಕಡಿಮೆ ಆಗುತ್ತದೆ. ನಾವು ಅವರಿಗೆ ಏನು ಮಾಡಿದರೂ ಅದು ಕಡಿಮೆಯೇ. ಇದು ನಮ್ಮ ಪಾಲಿಗೆ ಕರಾಳ ದಿನ'' ಎಂದು ಯೋಧರ ಕಾರ್ಯವನ್ನು ನೆನೆದಿದ್ದಾರೆ. ಇನ್ನು ದಾಳಿ ನಡೆದ ದಿನ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಮೂಲಕ ಯೋಧರಿಗೆ ಸೆಲ್ಯೂಟ್ ಹೊಡೆದಿದ್ದರು.

  ಅಂದಹಾಗೆ, ಪುನೀತ್ ಸದ್ಯ ತಮ್ಮ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಶೂಟಿಂಗ್ ಕೆಲಸಗಳ ನಡುವೆ ಉಡುಪಿಗೆ ಭೇಡಿ ನೀಡಿ ಕೃಷ್ಣನ ದರ್ಶನ ಪಡೆದುಕೊಂಡು ಹೋಗಿದ್ದಾರೆ.

  ಇಂದು ನಟ ದರ್ಶನ್ ಹುಟ್ಟುಹಬ್ಬವಿದ್ದು, ಪುನೀತ್ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭಾಶಯ ತಿಳಿಸಿದ್ದಾರೆ.

  English summary
  Kannada actor Puneeth Rajkumar's reaction about Pulwama terrorist attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X