For Quick Alerts
  ALLOW NOTIFICATIONS  
  For Daily Alerts

  'ಜೇಮ್ಸ್' ಚಿತ್ರೀಕರಣ ವೇಳೆ ಪುನೀತ್ ರಾಜ್ ಕುಮಾರ್ ಕೈಮುಗಿದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಯುವರತ್ನ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಅಪ್ಪು ಜೇಮ್ಸ್ ಸಿನಿಮಾದಲ್ಲಿ ನಿರತರಾಗಿದ್ದಾರೆ. ಭರ್ಜರಿ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ಹೊಸಪೇಟೆಯ ರೆಸಾರ್ಟ್ ನಲ್ಲಿ ನಡೆಯುತ್ತಿದೆ.

  ಪವರ್ ಸ್ಟಾರ್ ಬಂದಿದ್ದಾರೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ಪವರ್ ಸ್ಟಾರ್ ಗಾಗಿ ಕಾದು ಕುಳಿತಿದ್ದಾರೆ. ಚಿತ್ರೀಕರಣದ ನಡುವೆಯೂ ಅಭಿಮಾನಿಗಳ ಮುಂದೆ ಬಂದ ಪವರ್ ಸ್ಟಾರ್, ಅಭಿಮಾನಿಗಳ ಕೈ ಬೀಸಿದ್ದಾರೆ. ಬಳಿಕ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

  'ಜೇಮ್ಸ್' ಸಿನಿಮಾಗೆ ನಾಯಕಿ ಫಿಕ್ಸ್: ಮತ್ತೆ ಒಂದಾದ 'ರಾಜಕುಮಾರ' ಜೋಡಿ

  ಹೌದು, ಪವರ್ ಸ್ಟಾರ್ ನೋಡುವ ಬರದಲ್ಲಿ ಸಾಕಷ್ಟು ಅಭಿಮಾನಿಗಳು ಮಾಸ್ಕ್ ಧರಿಸದೆ ಬಂದಿದ್ದಾರೆ. ಪುನೀತ್ ರಾಜ್ ಕುಮಾರ್ ಕೈ ಸನ್ನೆ ಮೂಲಕ ದೂರದಿಂದನೆ ಮಾಸ್ಕ್ ಧರಿಸಿ ಎಂದು ಹೇಳಿದ್ದಾರೆ. ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಪ್ಪು ಶೂಟಿಂಗ್ ಮುಗಿಸಿ ಸಂಜೆ ತುಂಗಭದ್ರ ಡ್ಯಾಂ ವೀಕ್ಷಿಸಿದ್ದಾರೆ. ಹೊಸಪೇಟೆ ಶೂಟಿಂಗ್ ಬಳಿಕ ಜೇಮ್ಸ್ ತಂಡ ಗಂಗಾವತಿ ಕಡೆ ಪಯಣ ಬೆಳೆಸಲಿದೆ. ಗಂಗಾವತಿಯಲ್ಲಿ ಜೇಮೇಸ್ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗಿದೆಯಂತೆ. ಜೇಮ್ಸ್ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪ್ರಿಯಾ ಎರಡನೇ ಬಾರಿ ಪುನೀತ್ ರಾಜ್ ಕುಮಾರ್ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ.

  ಉಪಾಧ್ಯಕ್ಷನ ಬೆಂಬಲಕ್ಕೆ ನಿಂತ ರಾಬರ್ಟ್ ನಿರ್ಮಾಪಕ | Upadyaksha | Chikkanna | Umapathy Srinivas

  ಇನ್ನೂ ಚಿತ್ರದಲ್ಲಿ ನಟಿ ಅನು ಪ್ರಭಾಕರ್ ಸಹ ನಟಿಸುತ್ತಿದ್ದಾರೆ. ಅನು ಪ್ರಭಾಕರ್ ಮೊದಲ ಬಾರಿಗೆ ಪುನೀತ್ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಜೊತೆಗೆ ಬಹುಭಾಷ ನಟ ಆದಿತ್ಯ ಮೆನನ್ ಮತ್ತು ತೆಲುಗು ನಟ ಸ್ಟಾರ್ ಶ್ರೀಕಾಂತ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಜೇಮ್ಸ್ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Actor Puneeth Rajkumar has request to fans to wear a mask in James Shooting. Actor Puneeth Rajkumar currently busy in James Shooting in Hospet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X