»   » ಯೂಟ್ಯೂಬ್ ನಲ್ಲಿ ಪುನೀತ್ ರಾಜ್ ಕುಮಾರ್ ನಂಬರ್ 1

ಯೂಟ್ಯೂಬ್ ನಲ್ಲಿ ಪುನೀತ್ ರಾಜ್ ಕುಮಾರ್ ನಂಬರ್ 1

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಈಗಷ್ಟೇ ಆಡಿಯೋ ರಿಲೀಸ್ ಮಾಡಿ, ಬಿಡುಗಡೆಗೆ ಸಜ್ಜಾಗುತ್ತಿದೆ. ಮತ್ತೊಂದೆಡೆ ಕಿರುತೆರೆಗೂ ಕಾಲಿಟ್ಟಿರುವ ಅಪ್ಪು ಫ್ಯಾಮಿಲಿ ಪವರ್ ಮೂಲಕ ಟಿವಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇಂತಹ ಸಂದರ್ಭದಲ್ಲಿ ಪವರ್ ಸ್ಟಾರ್ ಅಭಿಮಾನಿಗಳಿಗೆ ಸಂತಸದ ಸುದ್ಧಿಯೊಂದು ಸಿಕ್ಕಿದೆ. ಹೌದು, ಯೂಟ್ಯೂಬ್ ನಲ್ಲಿ ಪುನೀತ್ ರಾಜ್ ಕುಮಾರ್ ನಂಬರ್ ವನ್ ಸ್ಥಾನ ಪಡೆದುಕೊಂಡಿದ್ದಾರೆ.

ತಮಿಳು, ತೆಲುಗು, ಮಲಯಾಳಂ ನಟರನ್ನ ಹಿಂದಿಕ್ಕಿರುವ ಅಪ್ಪು ಟಾಪ್ ಸ್ಥಾನಕ್ಕೆ ಜಿಗಿದಿದ್ದಾರೆ. ಹಾಗಿದ್ರೆ, ಪುನೀತ್ ಯೂಟ್ಯೂಬ್ ನಲ್ಲಿ ಕಿಂಗ್ ಆಗಲು ಕಾರಣವೇನು? ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.....

'ಅಂಜನಿಪುತ್ರ' ಟ್ರೆಂಡಿಂಗ್

ಅಂಜನಿಪುತ್ರ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು. ಇದೀಗ, ಅಪ್ಪು ಸಿನಿಮಾ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿದೆ.

ವಿಡಿಯೋ : ಹನುಮಂತನ ಭಕ್ತನಾದ 'ಅಂಜನೀಪುತ್ರ' ಪುನೀತ್

ಮೂರು ದಿನದಲ್ಲಿ ಎಷ್ಟು ಲೈಕ್ಸ್

ಮೂರ ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ 'ಅಂಜನಿಪುತ್ರ' ಟ್ರೈಲರ್ ಇಲ್ಲಿಯವರೆಗೂ 1.1 ಮಿಲಿಯನ್ (11 ಲಕ್ಷಕ್ಕಿಂತ ಹೆಚ್ಚು) ವೀಕ್ಷಕರನ್ನ ಹೊಂದಿದೆ. ಸುಮಾರು 28 ಸಾವಿರ ಲೈಕ್ಸ್ ಇದ್ರೆ, 10 ಸಾವಿರ ಡಿಸೈಕ್ಸ್ ಇದೆ.

ವಿಡಿಯೋ : ಬಂದೇ ಬಿಡ್ತು ಅಪ್ಪು 'ಅಂಜನೀಪುತ್ರ' ಹಾಡುಗಳು

ಪಿ.ಆರ್.ಕೆ ಚಾನಲ್ ನಲ್ಲಿ ರಿಲೀಸ್

ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಪಿ.ಆರ್.ಕೆ ಯೂಟ್ಯೂಬ್ ಚಾನಲ್ ಸ್ಥಾಪಿಸಿದ್ದು, ತಮ್ಮದೇ ಸ್ವಂತ ಚಾನಲ್ ಮೂಲಕ ಅಂಜನಿಪುತ್ರ ಟ್ರೈಲರ್ ನ ಪರಿಚಯಿಸಿದ್ದಾರೆ.

ಬೇರೆ ಸ್ಥಾನದಲ್ಲಿ ಯಾವ ವಿಡಿಯೋ ಇದೆ

ಮೊದಲ ಸ್ಥಾನದಲ್ಲಿ 'ಅಂಜನಿಪುತ್ರ' ಟ್ರೈಲರ್ ಇದ್ರೆ, ಎರಡನೇ ಸ್ಥಾನದಲ್ಲಿ ತಮಿಳಿನ 'ರಿಚ್ಚಿ' ('ಉಳಿದವರು ಕಂಡಂತೆ' ರೀಮೇಕ್) ಇದೆ. ಮೂರು ಹಾಗೂ ನಾಲ್ಕರಲ್ಲಿ 'ನರಕಾಸುರನ್' ಮತ್ತು 'ಟಿಕ್ ಟಿಕ್ ಟಿಕ್' ತಮಿಳು ಚಿತ್ರದ ಟ್ರೈಲರ್ ಇದೆ.

'ಅಂಜನೀಪುತ್ರ' ಆಡಿಯೋ ಕ್ವಿಕ್ ರೌಂಡ್ ಅಪ್: ಮಂಡ್ಯ, ಹುಬ್ಬಳ್ಳಿ ಫ್ಯಾನ್ಸ್ ಗಿದೆ ಸರ್ಪೈಸ್!

English summary
Power star Puneeth Rajkumar starrer Anjaniputra movie trailer is no 1 trending in youtube. ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರದ ಟ್ರೈಲರ್ ಯ್ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲನೇ ಸ್ಥಾನದಲ್ಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada