For Quick Alerts
  ALLOW NOTIFICATIONS  
  For Daily Alerts

  ಅಪ್ಪನ ನೋಡಲು ಒಬ್ಬಂಟಿಯಾಗಿ ಸಾಗರ ದಾಟಿ ಬಂದ ಮಗಳು ಧೃತಿ

  |

  ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ ಸತತ 20 ಕ್ಕೂ ಹೆಚ್ಚು ಗಂಟೆ ಪ್ರಯಾಣದ ಬಳಿಕ ಬೆಂಗಳೂರಿಗೆ ಆಗಮಿಸಿದ್ದಾರೆ.

  ಪುನೀತ್ ರಾಜ್‌ಕುಮಾರ್ ಪ್ರಥಮ ಪುತ್ರಿ ಧೃತಿ ನ್ಯೂಯಾರ್ಕ್‌ನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ತಂದೆಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನ್ಯೂಯಾರ್ಕ್‌ನಿಂದ ಒಬ್ಬರೇ ದೀರ್ಘ ಅವಧಿಯ ಪ್ರಯಾಣ ಬೆಳೆಸಿ ಇದೀಗ ಬೆಂಗಳೂರು ತಲುಪಿದ್ದಾರೆ.

  ಬೆಂಗಳೂರಿನಿಂದ ಕಾರಿನಲ್ಲಿ ನೇರವಾಗಿ ಕಂಠೀರವ ಸ್ಟೇಡಿಯಂಗೆ ಬರುತ್ತಿದ್ದಾರೆ. ಕಾರಿನಲ್ಲಿ ಧೃತಿ ಜೊತೆಗೆ ಆಕೆಯ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಘವೇಂದ್ರ ಇದ್ದಾರೆ. ಎಸ್ಕಾರ್ಟ್‌ ಮೂಲಕ ಸಿಗ್ನಲ್‌ ರಹಿತವಾಗಿ ಅವರು ಕಂಠೀರವ ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ.

  ಪುನೀತ್‌ ನಿಧನದ ಸುದ್ದಿ ಹೊರಬಿದ್ದಾಗಿನಿಂದಲೂ ಅವರ ಕುಟುಂಬಕ್ಕೆ ದ್ರುತಿಯದ್ದೇ ಚಿಂತೆಯಾಗಿತ್ತು. ಆಕೆ ಒಬ್ಬರೇ 24 ಗಂಟೆ ಸುದೀರ್ಘ ಅವಧಿಯ ಪ್ರಯಾಣವನ್ನು ಇಂಥಹಾ ದುಃಖಕರ ಸನ್ನಿವೇಶದಲ್ಲಿ ಹೇಗೆ ಮಾಡುತ್ತಾರೆ ಎಂದು ಚಿಂತಿತರಾಗಿದ್ದರು. ರಾಘವೇಂದ್ರ ರಾಜ್‌ಕುಮಾರ್ ಅಂತೂ, ಧೃತಿ ಬರುತ್ತಾಳೆ, ಪಪ್ಪ ಎಲ್ಲಿ ಎಂದು ನನ್ನನ್ನು ಪ್ರಶ್ನೆ ಮಾಡುತ್ತಾಳೆ, ಆ ಮಗುವಿಗೆ ಏನು ಹೇಳಲಿ'' ಎಂದು ಗದ್ಗದಿತರಾಗಿದ್ದರು.

  ವಿಮಾನ ನಿಲ್ದಾಣದಿಂದ ನೇರವಾಗಿ ಸದಾಶಿವನಗರದ ತಮ್ಮ ನಿವಾಸಕ್ಕೆ ಪುನೀತ್ ಮಗಳು ಧೃತಿ ತೆರಳಿದ್ದಾರೆ. ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ದ್ರುತಿ ಬಂದರು.

  ವಿಮಾನ ನಿಲ್ದಾಣದಿಂದ ನೇರವಾಗಿ ಸದಾಶಿವನಗರದ ತಮ್ಮ ನಿವಾಸಕ್ಕೆ ಪುನೀತ್ ಮಗಳು ಧೃತಿ ತೆರಳಿದ್ದಾರೆ. ಅಲ್ಲಿಂದ ಹಲವು ಪೊಲೀಸ್ ಜೀಪ್‌ಗಳ ಭದ್ರತೆಯಲ್ಲಿ ಕಂಠೀರವ ಸ್ಟೇಡಿಯಂಗೆ ಬಂದರು. ಧೃತಿಯ ಜೊತೆಗೆ ಅವರ ಕುಟುಂಬದ ಹಲವು ಜನರು ಸ್ಟೇಡಿಯಂಗೆ ಬಂದರು. ಹಾದಿಯುದ್ದಕ್ಕೂ ದ್ರುತಿಯ ಕೈಹಿಡಿದು ಸಮಾಧಾನ ಮಾಡುತ್ತಿದ್ದ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದವು.

  ಕಂಠೀರವ ಸ್ಟೇಡಿಯಂಗೆ ಆಗಮಿಸಿದ ಧೃತಿ ತನ್ನ ತಾಯಿ ಅಶ್ವಿನಿ, ತಂಗಿಯ ಜೊತೆಗೆ ಅಪ್ಪನ ದರ್ಶನ ಮಾಡಲು ಪಾರ್ಥಿವ ಶರೀರ ಇಟ್ಟಿದ್ದ ಸ್ಥಳಕ್ಕೆ ಬಂದರು. ಮಗಳನ್ನು ಶಿವರಾಜ್ ಕುಮಾರ್ ಭುಜ ಹಿಡಿದುಕೊಂಡು ಅಪ್ಪನ ಪಾರ್ಥಿವ ಶರೀರದ ಮುಂದೆ ಬಿಟ್ಟರು. ಅಪ್ಪನ ಮುಖ ನೋಡುತ್ತಿದ್ದಂತೆ ಬಿಕ್ಕಳಿಸುತ್ತಾ ಅಳಲು ಪ್ರಾರಂಭಿಸಿದರು ದ್ರುತಿ. ಹಿಂದೆ ನಿಂತಿದ್ದ ತಾಯಿ, ತಂಗಿಯೂ ಮತ್ತೆ ಅಳಲು ಆರಂಭಿಸಿದರು.

  ಮಗಳು ಧೃತಿ ಅಪ್ಪನನ್ನು ಕೊನೆಯ ಬಾರಿ ಸ್ಪರ್ಷಿಸಲೆಂದು ಪುನೀತ್ ದೇಹದ ಮೇಲೆ ಹೊದಿಸಿದ್ದ ಗಾಜಿನ ಪೆಟ್ಟಿಗೆಯನ್ನು ಸರಿಸಲಾಯಿತು. ಅಪ್ಪನ ತಲೆ ಮುಟ್ಟಿ ಮತ್ತೆ ಬಿಕ್ಕಳಿಸಿದರು ಧೃತಿ.

  English summary
  Actor Puneeth Rajkumar's daughter Dhruthi came from America to see her father. She escorted by family members.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X