twitter
    For Quick Alerts
    ALLOW NOTIFICATIONS  
    For Daily Alerts

    ದೊಡ್ಮನೆ ಹುಡ್ಗ ಚಿತ್ರಕ್ಕೆ 6 ವರ್ಷಗಳ ಸಂಭ್ರಮ; ಅಬ್ಬಬ್ಬಾ ಈ ಚಿತ್ರ ಮಾಡಿದ್ದ ದಾಖಲೆ ಒಂದೆರಡಲ್ಲ!

    |
    Puneeth Rajkumars Doddmane Hudga completes 6 years: Checkout the record created by the movie

    ಪುನೀತ್ ರಾಜ್ ಕುಮಾರ್ ಅಡಲ್ಟ್ ಲೀಡ್ ಆ್ಯಕ್ಟರ್ ಆದ ನಂತರ ನಟಿಸಿದ 25ನೇ ಸಿನಿಮಾ ದೊಡ್ಮನೆ ಹುಡ್ಗ. ಅಪ್ಪು ಮತ್ತು ದುನಿಯಾ ಸೂರಿ ಕಾಂಬಿನೇಷನ್ ಅಡಿಯಲ್ಲಿ ಮೂಡಿಬಂದಿದ್ದ ಈ ಮೂರನೇ ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಹೈಪ್ ಹುಟ್ಟಿಹಾಕಿತ್ತು. ಕಾರಣಾಂತರಗಳಿಂದ ಬಿಡುಗಡೆಯಲ್ಲಿ ಪದೇ ಪದೇ ವಿಳಂಬವಾದ ದೊಡ್ಮನೆ ಹುಡ್ಗ ಚಿತ್ರೀಕರಣ ಆರಂಭವಾದಾಗ ಪುನೀತ್ ಅಭಿನಯದ 24ನೇ ಚಿತ್ರವಾಗಿತ್ತಾದರೂ ಬಿಡುಗಡೆ ವೇಳೆಗೆ 25ನೇ ಸಿನಿಮಾವಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ ( ಸೆಪ್ಟೆಂಬರ್ 30 ) 6 ವರ್ಷಗಳು ಕಳೆದಿವೆ.

    ಈ ಚಿತ್ರದಲ್ಲಿ ಅಪ್ಪು ಅವರಿಗೆ ನಾಯಕಿಯಾಗಿ ರಾಧಿಕಾ ಪಂಡಿತ್ ಎರಡನೇ ಬಾರಿ ತೆರೆ ಹಂಚಿಕೊಂಡಿದ್ದರು. ಪುನೀತ್ ಉತ್ತರ ಕರ್ನಾಟಕದ ಹೈದನಾಗಿ ಮಿಂಚಿದ್ರು. ಚಿತ್ರದಲ್ಲಿ ಅಪ್ಪು ತಂದೆ ತಾಯಿಯಾಗಿ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಮತ್ತು ಅತ್ತೆಯಾಗಿ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದರು. ಸಾಮಾನ್ಯ ಕಮರ್ಷಿಯಲ್ ಕೌಟುಂಬಿಕ ಚಿತ್ರವಾಗಿದ್ದ ದೊಡ್ಮನೆ ಹುಡ್ಗ ಪುನೀತ್ ಅಭಿನಯದ 25ನೇ ಚಿತ್ರ ಎಂಬ ಕಾರಣಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿತ್ತು.

    ಹಲವು ದಿನಗಳ ನಂತರ ಪುನೀತ್ ಅವರನ್ನು ರಗಡ್ ಹಳ್ಳಿಹೈದನ ಪಾತ್ರದಲ್ಲಿ ವೀಕ್ಷಿಸಿದ ಪುನೀತ್ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗಿತ್ತು. ಕುಟುಂಬ ಸಮೇತರಾಗಿ ಸಿನಿರಸಿಕರು ಸಹ ಚಿತ್ರಮಂದಿರಗಳಿಗೆ ಬಂದು ಚಿತ್ರವನ್ನು ವೀಕ್ಷಿಸಿದ್ದರು. ಹೀಗಾಗಿಯೇ ದೊಡ್ಮನೆ ಹುಡ್ಗ ಚಿತ್ರ ಸಾಕಷ್ಟು ದಾಖಲೆಗಳನ್ನು ಗಲ್ಲಾಪೆಟ್ಟಿಗೆಯಲ್ಲಿ ಮಾಡಿತ್ತು. ಕೇವಲ ಬಾಕ್ಸ್ ಆಫೀಸ್ ಮಾತ್ರವಲ್ಲದೆ ಯೂಟ್ಯೂಬ್ ಮತ್ತು ಟಿವಿ ವಿಚಾರಗಳಲ್ಲಿಯೂ ದೊಡ್ಮನೆ ಹುಡುಗ ದಾಖಲೆ ಮೇಲೆ ದಾಖಲೆ ಬರೆದಿದ್ದ.

    ರಾಜ್ಯಾದ್ಯಂತ ಅತಿಹೆಚ್ಚು ಸೆಲೆಬ್ರೇಟ್ ಆಗಿದ್ದ ಸಿನಿಮಾ, ಕಟ್ಔಟ್ ದಾಖಲೆ

    ರಾಜ್ಯಾದ್ಯಂತ ಅತಿಹೆಚ್ಚು ಸೆಲೆಬ್ರೇಟ್ ಆಗಿದ್ದ ಸಿನಿಮಾ, ಕಟ್ಔಟ್ ದಾಖಲೆ

    ಪುನೀತ್ ಅಭಿನಯದ ಜೇಮ್ಸ್ ಚಿತ್ರಕ್ಕೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಸಂಭ್ರಮಾಚರಣೆ ಮಾಡಲಾಗಿತ್ತು. ಇದಕ್ಕೂ ಮೀರಿದ ಸಂಭ್ರಮಾಚರಣೆಯನ್ನು ದೊಡ್ಮನೆ ಹುಡುಗ ಚಿತ್ರ ಬಿಡುಗಡೆಯಾದಾಗಲೇ ಮಾಡಲಾಗಿತ್ತು. ಹೌದು, ದೊಡ್ಮನೆ ಹುಡ್ಗ ಅಪ್ಪು 25ನೇ ಸಿನಿಮಾ ಎಂಬ ಕಾರಣಕ್ಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ಬೈಕ್ ಮತ್ತು ಆಟೋ ಜಾಥಾಗಳನ್ನು ಮಾಡಿ ಅಪ್ಪುಗೆ ಜೈಕಾರ ಹಾಕಿದ್ರು ದೊಡ್ಮನೆ ಅಭಿಮಾನಿಗಳು. ಇನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದ ಮುಂದೆ ಪುನೀತ್ ಅವರ 10 ಕಟ್ ಔಟ್ ನಿಲ್ಲಿಸಲಾಗಿತ್ತು. ಹೀಗೆ ಚಿತ್ರ ಬಿಡುಗಡೆಯ ದಿನ ನಟನೋರ್ವನ ಇಷ್ಟು ಸಂಖ್ಯೆಯ ಕಟ್ ಔಟ್‌ಗಳನ್ನು ನಿಲ್ಲಿಸಿದ್ದು ಅದೇ ಮೊದಲು ಹಾಗೂ ಅದೇ ಕೊನೆ.

    ಬೆಳ್ಳಂಬೆಳಿಗ್ಗೆ ಅತಿಹೆಚ್ಚು ಪ್ರದರ್ಶನಗಳು ಹಾಗೂ ಬಾಕ್ಸಾಫೀಸ್ ಚಿಂದಿ

    ಬೆಳ್ಳಂಬೆಳಿಗ್ಗೆ ಅತಿಹೆಚ್ಚು ಪ್ರದರ್ಶನಗಳು ಹಾಗೂ ಬಾಕ್ಸಾಫೀಸ್ ಚಿಂದಿ

    ಇನ್ನು ದೊಡ್ಮನೆ ಹುಡ್ಗ ಬೆಳಗಿನ ಜಾವದಿಂದಲೇ ರಾಜ್ಯಾದ್ಯಂತ ಪ್ರದರ್ಶನಗೊಂಡಿತ್ತು. ಅದರಲ್ಲಿಯೂ ಬಳ್ಳಾರಿ, ಹೊಸಪೇಟೆ ಶಿವಮೊಗ್ಗ ಹಾಗೂ ದಾವಣಗೆರೆ ನಗರಗಳಲ್ಲಿ ಮಧ್ಯರಾತ್ರಿಯಿಂದಲೇ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಹಲವೆಡೆ ಅಭಿಮಾನಿಗಳು ನಿಂತುಕೊಂಡೇ ಚಿತ್ರವನ್ನು ವೀಕ್ಷಿಸಿದ್ದರು. ಹೀಗೆ ದೊಡ್ಡ ಮಟ್ಟದ ಕ್ರೇಜ್ ಹೊಂದಿದ್ದ ದೊಡ್ಮನೆ ಹುಡುಗ ಚಿತ್ರ ಬೆಳ್ಳಂಬೆಳಿಗ್ಗೆ ಬಿಡುಗಡೆಯ ದಿನ ಅತಿ ಹೆಚ್ಚು ಪ್ರದರ್ಶನಗಳನ್ನು ಕಂಡ ಕನ್ನಡ ಚಿತ್ರ ಹಾಗೂ ಮೊದಲನೇ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿತ್ತು ಮತ್ತು ಆ ವರ್ಷ ದೊಡ್ಮನೆ ಹುಡ್ಗ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ಹೊರಹೊಮ್ಮಿತ್ತು.

    ಯೂಟ್ಯೂಬ್ ಮತ್ತು ಟಿಆರ್‌ಪಿಯಲ್ಲಿ ಮಹತ್ವದ ದಾಖಲೆ

    ಯೂಟ್ಯೂಬ್ ಮತ್ತು ಟಿಆರ್‌ಪಿಯಲ್ಲಿ ಮಹತ್ವದ ದಾಖಲೆ

    ದೊಡ್ಮನೆ ಹುಡ್ಗ ಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಹತ್ತು ಲಕ್ಷ ವೀಕ್ಷಣೆಗಳನ್ನು ಪಡೆದುಕೊಳ್ಳುವುದರ ಮೂಲಕ ದಾಖಲೆ ಬರೆದಿತ್ತು. ಯೂಟ್ಯೂಬ್ ವೇದಿಕೆಯಲ್ಲಿ 1 ಮಿಲಿಯನ್ ವೀಕ್ಷಣೆ ದಾಟಿದ ಮೊದಲ ಕನ್ನಡ ಸಿನಿಮಾದ ಟ್ರೈಲರ್ ಎಂಬ ದಾಖಲೆ ಈ ಚಿತ್ರದ ಮೂಲಕ ನಿರ್ಮಾಣವಾಯಿತು. ಇನ್ನು ದೊಡ್ಮನೆ ಹುಡ್ಗ ಟಿವಿಯಲ್ಲಿ ಪ್ರಸಾರವಾದಾಗ 20.7 ಟಿವಿಆರ್ ಅಂಕಗಳನ್ನು ಪಡೆದಿತ್ತು. ಇದು ಇಂದಿಗೂ ಸಹ ದಾಖಲೆಯಾಗಿದೆ. ಕನ್ನಡದ ಧಾರಾವಾಹಿ ಇರಲಿ ಅಥವಾ ಸಿನಿಮಾವಿರಲಿ, ಯಾವುದೇ ಕಾರ್ಯಕ್ರಮವಿರಲಿ ಇಷ್ಟು ಟಿವಿಯ ಅಂಕಗಳನ್ನು ಪಡೆದುಕೊಂಡಿಲ್ಲ.

    English summary
    Puneeth Rajkumar's Doddmane Hudga completes 6 years: Checkout the record created by the movie
    Saturday, October 1, 2022, 10:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X