»   » ಪುನೀತ್ 'ದೊಡ್ಮನೆ ಹುಡುಗ' ಭರ್ಜರಿ ಆರಂಭ

ಪುನೀತ್ 'ದೊಡ್ಮನೆ ಹುಡುಗ' ಭರ್ಜರಿ ಆರಂಭ

Posted By:
Subscribe to Filmibeat Kannada

ಅಂತೂ ಇಂತೂ 'ದೊಡ್ಮನೆ ಹುಡುಗ' ಚಿತ್ರಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಆಶೀರ್ವಾದದೊಂದಿಗೆ 'ದೊಡ್ಮನೆ ಹುಡುಗ' ಸೆಟ್ಟೇರಿದೆ.

ಹೋಳಿ ಹಬ್ಬದ ಸುಸಂದರ್ಭದಲ್ಲಿ ಇಂದು 'ದೊಡ್ಮನೆ ಹುಡುಗ' ಚಿತ್ರದ ಮುಹೂರ್ತ ನಡೆಯಿತು. ಅಪ್ಪು ನಿವಾಸದಲ್ಲಿರುವ ಗಣಪತಿ ವಿಗ್ರಹದ ಮುಂದೆ 'ದೊಡ್ಮನೆ ಹುಡುಗ' ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು.


Puneeth Rajkumar's Dodmane Huduga launched in grand manner

ಪಾರ್ವತಮ್ಮ ರಾಜ್ ಕುಮಾರ್ ಹಣೆಗೆ ಮುತ್ತು ಕೊಟ್ಟು ''ಅಭಿಮಾನಿಗಳು ನಮ್ಮನೆ ದೇವ್ರು'' ಅಂತ ಡೈಲಾಗ್ ಹೇಳುವ ಮೂಲಕ ಮುಹೂರ್ತದ ಶಾಟ್ ನ ಪುನೀತ್ ರಾಜ್ ಕುಮಾರ್ ಓಕೆ ಮಾಡಿದರು. ಅದಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿ ಹರಸಿದರು. [ಪುನೀತ್ 'ದೊಡ್ಮನೆ ಹುಡುಗ'ನಿಗೆ ಮುಹೂರ್ತ ನಿಗದಿ]


''ಅಭಿಮಾನಿಗಳೇ ದೇವರು'' ಅಂತ ಅಪ್ಪಾಜಿ ಸದಾ ಹೇಳುತ್ತಿದ್ದರು. ಅಣ್ಣಾವ್ರ ಮಗನಾಗಿ ಇದೀಗ ''ಅಭಿಮಾನಿಗಳು ನಮ್ಮನೆ ದೇವ್ರು'' ಅಂತ ಅಪ್ಪು ಹೇಳಿರುವುದರಿಂದ 'ದೊಡ್ಮನೆ ಹುಡುಗ'ನ ವೃತ್ತಾಂತದ ಬಗ್ಗೆ ಕುತೂಹಲ ಕೆರಳಿದೆ. ['ದೊಡ್ಮನೆ ಹುಡುಗ' ಪುನೀತ್ ಡೈಲಾಗ್ ಏನು ಗೊತ್ತಾ?]


Puneeth Rajkumar's Dodmane Huduga launched in grand manner

''ಒಂದು ಊರಿನ ದೊಡ್ಮನೆ ಕುಟುಂಬದ ಮಗನಾಗಿ ನಾನು ಅಭಿನಯಿಸ್ತಿದ್ದೀನಿ. ಪಾತ್ರ ತುಂಬಾ ಚೆನ್ನಾಗಿದೆ'' ಅಂತ ಪುನೀತ್ ಹೇಳಿದ್ದಾರೆ. ಅಷ್ಟು ಬಿಟ್ಟರೆ, ಚಿತ್ರದ ಕಥೆ, ಪುನೀತ್ ಪಾತ್ರ ಇನ್ನೂ ಗುಟ್ಟಾಗಿದೆ.


'ಹುಡುಗ್ರು' ನಂತ್ರ 'ದೊಡ್ಮನೆ ಹುಡುಗ' ಚಿತ್ರದಲ್ಲಿ ರಾಧಿಕಾ ಪಂಡಿತ್ ಮತ್ತೊಮ್ಮೆ ಪುನೀತ್ ಜೋಡಿಯಾಗಿದ್ದಾರೆ. ಹಳ್ಳಿ ಹುಡುಗಿಯಾಗಿ ಮತ್ತು ಮಾರ್ಡನ್ ಗರ್ಲ್ ಆಗಿ ಎರಡು ವಿಭಿನ್ನ ಶೇಡ್ ಗಳಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಳ್ಳುತ್ತಾರಂತೆ. [ಬಂಪರ್ ಆಫರ್ ಗಿಟ್ಟಿಸಿಕೊಂಡ ನಟಿ ರಾಧಿಕಾ ಪಂಡಿತ್]


Puneeth Rajkumar's Dodmane Huduga launched in grand manner

''ಇದು ಹಳ್ಳಿಯೊಂದರ ದೊಡ್ಮನೆ ಕುಟುಂಬದ ಕಥೆ'' ಅಂತಷ್ಟೇ ನಿರ್ದೇಶಕ ದುನಿಯಾ ಸೂರಿ ಹೇಳಿದರು. ಅಂದ್ಹಾಗೆ 'ದೊಡ್ಮನೆ' ಕುಟುಂಬದ ದೊರೆಯಾಗಿ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯಿಸುತ್ತಿದ್ದರೆ, ವಿಶೇಷ ಪಾತ್ರದಲ್ಲಿ ಭಾರತಿ ವಿಷ್ಟುವರ್ಧನ್ ಬಣ್ಣ ಹಚ್ಚಲಿದ್ದಾರೆ.


ನಾಳೆಯಿಂದ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ಶುರುವಾಗಲಿದೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. (Photo courtesy : Chandhan Gowda)

English summary
Power Star Puneeth Rajkumar starrer 'Dodmane Huduga' was launched today (March 05). Muhoortham shot was clapped by Crazy Star V.Ravichandran. The film also features Bharathi Vishnuvardhan, Ambarish and Radhika Pandit. 'Dodmane Huduga' is directed by Duniya Soori.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada