For Quick Alerts
  ALLOW NOTIFICATIONS  
  For Daily Alerts

  ಪುನೀತ್-ಸೂರಿ ಜೋಡಿಯ 'ಜಾಕಿ' ಚಿತ್ರಕ್ಕೆ ಹತ್ತು ವರ್ಷದ ಸಂಭ್ರಮ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯಲ್ಲಿ ಮೂಡಿಬಂದಿದ್ದ ಜಾಕಿ ಚಿತ್ರ ಅಕ್ಟೋಬರ್ 14ಕ್ಕೆ ಹತ್ತು ವರ್ಷ ಪೂರೈಸಲಿದೆ. ಅಪ್ಪು ವೃತ್ತಿ ಜೀವನದ ಸೂಪರ್ ಹಿಟ್ ಚಿತ್ರ ದಶಕದ ಸಂಭ್ರಮವನ್ನು ಪುನೀತ್ ಅಭಿಮಾನಿಗಳು ಅದ್ಧುರಿಯಾಗಿ ಆಚರಿಸುತ್ತಿದ್ದಾರೆ.

  ಜಾಕಿ ದಶಕದ ಸಂಭ್ರಮಕ್ಕೂ ಒಂದು ದಿನ ಮುಂಚೆ ಕಾಮನ್ ಡಿಪಿ ಬಿಡುಗಡೆ ಮಾಡಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡ್ತಿದ್ದಾರೆ.

  'ಯುವರತ್ನ' ಚಿತ್ರೀಕರಣ ಮುಕ್ತಾಯ: ಅಪ್ಪು ಎಂಟ್ರಿಗೆ ಅಭಿಮಾನಿಗಳು ರೆಡಿಯಾಗಿ'ಯುವರತ್ನ' ಚಿತ್ರೀಕರಣ ಮುಕ್ತಾಯ: ಅಪ್ಪು ಎಂಟ್ರಿಗೆ ಅಭಿಮಾನಿಗಳು ರೆಡಿಯಾಗಿ

  ದುನಿಯಾ ಸೂರಿ ಈ ಚಿತ್ರ ನಿರ್ದೇಶನ ಮಾಡಿದ್ದು, ಮೊದಲ ಸಲ ಪುನೀತ್ ಅವರಿಗೆ ಆಕ್ಷನ್ ಕಟ್ ಹೇಳಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗಿತ್ತು. ಪುನೀತ್ ಪಾಲಿಗೆ ದೊಡ್ಡ ಹಿಟ್ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಚಿತ್ರ ಇದು. ಶತದಿನ ಸಹ ಆಚರಿಸಿಕೊಂಡಿತ್ತು.

  ಜಾಕಿ ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿತ್ತು, ಐದು ಹಾಡುಗಳಿದ್ದು, ಎಲ್ಲ ಹಾಡಿಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದರು. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು.

  ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ಭಾವನಾ ನಾಯಕಿಯಾಗಿ ನಟಿಸಿದ್ದರು. ಭಾವನಾ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ಈ ಸಿನಿಮಾದ ಬಳಿಕ 'ಜಾಕಿ ಭಾವನಾ' ಎಂದೇ ಖ್ಯಾತಿ ಗಳಿಸಿಕೊಂಡರು.

  Puneeth Rajkumars Jackie Completed 10 Year

  Recommended Video

  ಲಾಕ್ ಡೌನ್ ನಲ್ಲಿ Puneet Raj Kumar ಮಾಡಿದ್ದು ಇದನ್ನೆ | Filmibeat Kannada

  ಇನ್ನು ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ಬುಲೆಟ್ ಪ್ರಕಾಶ್, ಮಿತ್ರ, ವಿಕಾಸ್ ಸೇರಿದಂತೆ ಹಲವು ಕಲಾವಿದರು ಜಾಕಿ ಚಿತ್ರದಲ್ಲಿ ನಟಿಸಿದ್ದರು. ಜಾಕಿ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಸೂರಿ ಮತ್ತು ಅಪ್ಪು ಅಣ್ಣಾಬಾಂಡ್ ಹಾಗೂ ದೊಡ್ಮನೆ ಹುಡ್ಗ ಚಿತ್ರಗಳನ್ನು ಸಹ ಮಾಡಿದರು.

  English summary
  Powerstar Puneeth Rajkumar starrer Mega Blockbuster movie jackie celebrating 10th Anniversary. the movie directed by Duniya soori.
  Wednesday, October 14, 2020, 10:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X