For Quick Alerts
  ALLOW NOTIFICATIONS  
  For Daily Alerts

  ಮಾಸ್ಟರ್ ಆನಂದ್ ಜೊತೆ ಪವರ್ ಸ್ಟಾರ್ ಪುನೀತ್

  |

  ಪುನೀತ್ ರಾಜ್ ಕುಮಾರ್ ಹಾಗೂ ಮಾಸ್ಟರ್ ಆನಂದ್ ಇಬ್ಬರೂ ಒಂದು ಕಾಲದಲ್ಲಿ ಬಹು ಬೇಡಿಕೆಯ ಬಾಲನಟರಾಗಿದ್ದರು. ಹೀರೋಗಳ ಮಟ್ಟಿಗೆ ಈ ಇಬ್ಬರು ಬಾಲನಟರು ಜನಪ್ರಿಯತೆ ಪಡೆದಿದ್ದರು. ಹೀಗಿರುವಾಗ, ಈ ಇಬ್ಬರು ನಟರು ಈಗ ಒಂದಾಗಿದ್ದಾರೆ.

  ಪುನೀತ್ ರಾಜ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಮಾಸ್ಟರ್ ಆನಂದ್ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರು ನಟರು ಒಟ್ಟಿಗೆ ಇರುವುದನ್ನು ನೋಡಿ, ಪುನೀತ್ ಜೊತೆಗೆ ಮಾಸ್ಟರ್ ಆನಂದ್ ಸಿನಿಮಾ ಮಾಡುತ್ತಿದ್ದಾರ ಎನ್ನುವ ಕುತೂಹಲ ಮೂಡಿತ್ತದೆ.

  'ನಟ ಸಾರ್ವಭೌಮ'ದಲ್ಲಿ ಪುನೀತ್ ಬಳಸಿರೋ ಕ್ಯಾಮರಾ ಬೆಲೆ ಎಷ್ಟು ಗೊತ್ತೆ? 'ನಟ ಸಾರ್ವಭೌಮ'ದಲ್ಲಿ ಪುನೀತ್ ಬಳಸಿರೋ ಕ್ಯಾಮರಾ ಬೆಲೆ ಎಷ್ಟು ಗೊತ್ತೆ?

  ಆದರೆ, ಪುನೀತ್ ಹಾಗೂ ಮಾಸ್ಟರ್ ಆನಂದ್ ಯಾವುದೇ ಸಿನಿಮಾ ಮಾಡುತ್ತಿಲ್ಲ. ಬದಲಿಗೆ ಮಾಸ್ಟರ್ ಆನಂದ್ ಗೆ ಪುನೀತ್ ರಾಜ್ ಕುಮಾರ್ ಒಂದು ಹಾಡು ಹಾಡಿದ್ದಾರೆ.

  ''ಇವತ್ತು ಮಾಸ್ಟರ್ ಆನಂದ್ ಗೆ ಒಂದ್ ಹಾಡ್ ಹಾಡಿದೆ ತುಂಬಾ ಖುಷಿ ಆಯ್ತು ಮಾಸ್ಟರ್ ಆನಂದ್ ನೋಡಿದಾಗ್ಲೆಲ್ಲ ಒಂದೇ ನೆನಪಾಗೋದು ಗಣೇಶನ ಮದುವೆ.. ಅವತ್ತಿನಿಂದ ಇವತ್ತಿನವರೆಗೂ ಒಳ್ಳೆ ಕೆಲಸ ಮಾಡಿದ್ದಾರೆ...... All the best Anand..'' ಎಂದು ಪುನೀತ್ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ಅಂದಹಾಗೆ, ಪುನೀತ್ ಹಾಡಿರುವುದು ಮಾಸ್ಟರ್ ಆನಂದ್ ಅವರ ಸಿನಿಮಾಗೋ ಅಥವಾ ಧಾರಾವಾಹಿಗೋ ಎನ್ನುವುದು ತಿಳಿದಿಲ್ಲ.

  English summary
  Kannada actor Puneeth Rajkumar sings for Master Anand.
  Tuesday, January 29, 2019, 8:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X