For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ ಹುಡ್ಗ' ಪುನೀತ್ ರಾಜ್ ಕುಮಾರ್ ಆಡಿದ ದೊಡ್ಡ ಮಾತು

  By Harshitha
  |

  ನಿಜ ಜೀವನದಲ್ಲೂ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ 'ದೊಡ್ಮನೆ ಹುಡ್ಗ' ಅಂತಲೇ ಹೆಸರುವಾಸಿ.

  'ಅಭಿಮಾನಿಗಳೇ ದೇವರುಗಳು' ಅಂತ ಡಾ.ರಾಜ್ ಕುಮಾರ್ ಹೇಳ್ತಿದ್ರು, ಈಗ 'ದೊಡ್ಮನೆ ಹುಡ್ಗ' ಚಿತ್ರದ ಮೂಲಕ 'ಅಭಿಮಾನಿಗಳೇ ನಮ್ಮನೆ ದೇವ್ರು..' ಎನ್ನುತ್ತಿದ್ದಾರೆ ಪುನೀತ್ ರಾಜ್ ಕುಮಾರ್.

  ಹಾಗಾದ್ರೆ, ತಮ್ಮ ನಿಜ ಜೀವನಕ್ಕೂ - 'ದೊಡ್ಮನೆ ಹುಡ್ಗ' ಚಿತ್ರಕ್ಕೂ ಏನಾದರೂ ಲಿಂಕ್ ಇದ್ಯಾ ಅಂತ ಕೇಳಿದಕ್ಕೆ ಪವರ್ ಸ್ಟಾರ್ ಬಾಯಿಂದ ಬಂದ ಉತ್ತರ ಬೇರೆ. ['ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್]

  'ದೊಡ್ಮನೆ ಹುಡ್ಗ' ಚಿತ್ರದ ಬಗ್ಗೆ ಪುನೀತ್ ರಾಜ್ ಕುಮಾರ್ ಬಾಯಿಂದ ಬಂದ ದೊಡ್ಡ ಮಾತುಗಳು ಇಲ್ಲಿವೆ. ಓವರ್ ಟು ಪುನೀತ್ ರಾಜ್ ಕುಮಾರ್.....

  'ದೊಡ್ಮನೆ ಹುಡ್ಗ' ಟೈಟಲ್ ಕುರಿತು

  'ದೊಡ್ಮನೆ ಹುಡ್ಗ' ಟೈಟಲ್ ಕುರಿತು

  ''ಇದು ತುಂಬಾ ದೊಡ್ಡ ಸ್ಟಾರ್ ಕಾಸ್ಟ್ ಇರುವ ಸಿನಿಮಾ. ಹೀಗಾಗಿ ಇದಕ್ಕೆ 'ದೊಡ್ಮನೆ ಹುಡ್ಗ' ಅಂತ ಹೆಸರಿಡಲಾಗಿದೆ ಅಷ್ಟೆ. ನನ್ನ ನಿಜ ಜೀವನಕ್ಕೂ ಇದಕ್ಕೂ ಸಂಬಂಧ ಇಲ್ಲ'' - ಪುನೀತ್ ರಾಜ್ ಕುಮಾರ್ [ಡಾ.ರಾಜ್ ಮತ್ತು ಪುನೀತ್ ಬಗ್ಗೆ ಅಂಬರೀಶ್ ಮಾಡಿದ ಕಾಮೆಂಟ್ ಏನು?]

  ಸಂತೋಷ ಪಡುವ ವಿಷಯ ಸಾಕಷ್ಟಿದೆ

  ಸಂತೋಷ ಪಡುವ ವಿಷಯ ಸಾಕಷ್ಟಿದೆ

  ''ಸಿನಿಮಾ ಶುರು ಆಗಿ ಒಂದು ವರ್ಷ ನಾಲ್ಕು ತಿಂಗಳು ಆಯ್ತು. ಆಗ್ಲಿಂದ 'ದೊಡ್ಮನೆ' ನಡೆಯುತ್ತಾ ಬರ್ತಿದೆ. ನನಗೆ ತುಂಬಾ ಸಂತೋಷ ಪಡುವ ವಿಷಯ ಸಾಕಷ್ಟಿದೆ'' - ಪುನೀತ್ ರಾಜ್ ಕುಮಾರ್ [ಅಂದು ತಂದೆಗೆ ನಾಯಕಿ, ಇಂದು ಮಗನಿಗೆ ತಾಯಿ: ಸುಮಲತಾ ದಿಲ್ ಖುಷ್!]

  ಅಂಬಿ ಮಾಮ ಜೊತೆ ಮೊದಲ ಬಾರಿ

  ಅಂಬಿ ಮಾಮ ಜೊತೆ ಮೊದಲ ಬಾರಿ

  ''ನನ್ನ ಮೊದಲ ಸಿನಿಮಾ ಇದು ಅಂಬರೀಶ್ ಮಾಮ ಜೊತೆ. ತುಂಬಾ ತುಂಬಾ ಖುಷಿ ಆಯ್ತು, ಅವರ ಜೊತೆ ಪಾತ್ರ ಮಾಡೋಕೆ. ಯಾಕೋ ಇಷ್ಟು ವರ್ಷ ಆಗ್ಬಂದಿರ್ಲಿಲ್ಲ, ಅದು ದೊಡ್ಮನೆ ಮೂಲಕ ಆಗ್ಬಂತು. ಎಲ್ಲಕ್ಕಿಂತ ಹೆಚ್ಚಾಗಿ ಅಂಬರೀಶ್ ಮಾಮ ಯಾವತ್ತು ಸೆಟ್ ನಲ್ಲಿ ಇರ್ತಿದ್ರೋ, ಅವತ್ತು ರಾಜ ಭೋಜನ. ಜೊತೆಗೆ ಸಂತೋಷದ ಮಾತುಗಳು'' - ಪುನೀತ್ ರಾಜ್ ಕುಮಾರ್

  ಸುಮಲತಾ ಜೊತೆ ಮೊದಲ ಸಿನಿಮಾ

  ಸುಮಲತಾ ಜೊತೆ ಮೊದಲ ಸಿನಿಮಾ

  ''ಸುಮಲತಾ ಮೇಡಂ ಅವರ ಜೊತೆ ಕೂಡ ಇದು ನನ್ನ ಮೊದಲ ಸಿನಿಮಾ. ಅವರನ್ನ ನಮ್ಮ ತಂದೆ ಜೊತೆ ಹೀರೋಯಿನ್ ಆಗಿ ನೋಡಿದ್ದೆ. ಈಗ ನನ್ನ ತಾಯಿ ಆಗಿ ನೋಡೋಕೆ ತುಂಬಾ ಖುಷಿ ಆಯ್ತು'' - ಪುನೀತ್ ರಾಜ್ ಕುಮಾರ್

  ಖುಷಿ ಕೊಡುವ ಟೀಮ್ ಇದು

  ಖುಷಿ ಕೊಡುವ ಟೀಮ್ ಇದು

  ''ಸೂರಿ ಸರ್ ಜೊತೆ ಇದು ಮೂರನೇ ಸಿನಿಮಾ, ರಾಧಿಕಾ ಪಂಡಿತ್ ಜೊತೆ ಎರಡನೇ ಸಿನಿಮಾ. ವಿ.ಹರಿಕೃಷ್ಣ ಜೊತೆ ಲೆಕ್ಕ ಹಾಕಿಲ್ಲ. ಸತ್ಯ ಹೆಗಡೆ ಜೊತೆ ನಾಲ್ಕನೇ ಸಿನಿಮಾ. ತುಂಬಾ ಖುಷಿ ಕೊಡುವ ಟೀಮ್ ಇದು. ತುಂಬಾ ಎಂಜಾಯ್ ಮಾಡಿದ್ದೀವಿ'' - ಪುನೀತ್ ರಾಜ್ ಕುಮಾರ್

  ಮರೆಯಲಾಗದ ಎಕ್ಸ್ ಪೀರಿಯೆನ್ಸ್

  ಮರೆಯಲಾಗದ ಎಕ್ಸ್ ಪೀರಿಯೆನ್ಸ್

  ''ಯೋಗರಾಜ್ ಭಟ್ ಬರೆದಿರುವ 'ಅಭಿಮಾನಿಗಳೇ ನಮ್ಮನೆ ದೇವ್ರು' ಹಾಡನ್ನ ನಾನು ಹಾಡಿದ್ದೇನೆ. ಇದು ನನ್ನ ಲೈಫ್ ನ ಮರೆಯಲಾರದ ಎಕ್ಸ್ ಪೀರಿಯೆನ್ಸ್. ನಾಲ್ಕು ಊರುಗಳಲ್ಲಿ ಈ ಹಾಡನ್ನ ಶೂಟ್ ಮಾಡಿದ್ವಿ. ಅಲ್ಲಿನ ಜನ ತುಂಬಾ ಸಪೋರ್ಟ್ ಮಾಡಿದ್ರು. ಅವರಿಗೆಲ್ಲ ನನ್ನ ಧನ್ಯವಾದಗಳು'' - ಪುನೀತ್ ರಾಜ್ ಕುಮಾರ್

  English summary
  Kannada Actor Power Star Puneeth Rajkumar spoke about 'Doddmane Hudga' specialities during the Press meet held at Hotel Citadel on August 25th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X