»   » ಕ್ರೇಜ್ ಅಂದ್ರೆ ಇದಪ್ಪಾ.! 'ಬುಕ್ ಮೈ ಶೋ'ನಲ್ಲಿ 'ದೊಡ್ಮನೆ' ದರ್ಬಾರ್

ಕ್ರೇಜ್ ಅಂದ್ರೆ ಇದಪ್ಪಾ.! 'ಬುಕ್ ಮೈ ಶೋ'ನಲ್ಲಿ 'ದೊಡ್ಮನೆ' ದರ್ಬಾರ್

Posted By:
Subscribe to Filmibeat Kannada

'ದೊಡ್ಮನೆ ಹುಡ್ಗ' ಮೂಡಿಸುತ್ತಿರುವ ನಿರೀಕ್ಷೆಯ ಪರಿ ನೋಡ್ತಿದ್ರೆ, ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಸುವರ್ಣ ದಿನಗಳು ಶುರುವಾದ ಹಾಗೆ ಕಾಣ್ತಿದೆ. 'ದೊಡ್ಮನೆ ಹುಡ್ಗ'ನ ಅಬ್ಬರದ ಎದುರು ಪರಭಾಷೆಯ ಸೂಪರ್ ಡ್ಯೂಪರ್ ಸಿನಿಮಾಗಳೂ ಮಕಾಡೆ ಮಲಗುವ ಸೂಚನೆ ಸಿಕ್ಕಿದೆ.

ಹೇಳಿ ಕೇಳಿ 'ದೊಡ್ಮನೆ ಹುಡ್ಗ' ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ. ಬಾಕ್ಸ್ ಆಫೀಸ್ ಬಾದ್ಷಾ ಪುನೀತ್ ರಾಜ್ ಕುಮಾರ್ ಚಿತ್ರ ತೆರೆಗೆ ಬರ್ತಿದೆ ಅಂದ್ರೆ ಗಾಂಧಿನಗರದಲ್ಲಿ ಕುತೂಹಲ ಗರಿಗೆದರಿ ನಿಲ್ಲುತ್ತೆ. ಅಭಿಮಾನಿಗಳ ಎದೆಬಡಿತ ಜೋರಾಗುತ್ತೆ. ಈಗ 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಆಗುತ್ತಿರುವುದು ಸೇಮ್ ಟು ಸೇಮ್ ಇದೇ.! ['ದೊಡ್ಮನೆ ಹುಡ್ಗ'ನ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿ]


ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡ್ಗ' ಚಿತ್ರ ಬಿಡುಗಡೆಗೆ ದಿನಗಣನೆ ಶುರು ಆಗಿದೆ. ಸೆಪ್ಟೆಂಬರ್ 30 ಯಾವಾಗ ಆಗುತ್ತೋ ಅಂತ ಅಪ್ಪು ಭಕ್ತರು ನಿದ್ದೆಗೆಟ್ಟು ಕಾಯ್ತಿದ್ದಾರೆ. ಮುಂದೆ ಓದಿ....


ಫಸ್ಟ್ ಡೇ, ಫಸ್ಟ್ ಶೋ ನೋಡಲು ಕಾತರ.!

'ದೊಡ್ಮನೆ ಹುಡ್ಗ' ಚಿತ್ರದ ಫಸ್ಟ್ ಡೇ, ಫಸ್ಟ್ ಶೋ ಕಣ್ತುಂಬಿಕೊಳ್ಳಲು ಪುನೀತ್ ರಾಜ್ ಕುಮಾರ್ ಅಭಿಮಾನಿಗಳಂತೂ ತುದಿಗಾಲಲ್ಲಿ ನಿಂತಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ವಾರಕ್ಕೂ ಮೊದಲೇ ಬುಕ್ಕಿಂಗ್ ಓಪನ್ ಮಾಡಲಾಗಿದೆ. ['ದೊಡ್ಮನೆ ಹುಡ್ಗ' ನೋಡೋರಿಗೆ ಬಿರಿಯಾನಿ, 'ರಾಜ್‌ಕುಮಾರ್' ಲಾಡು ಫ್ರೀ!]


'ಬುಕ್ ಮೈ ಶೋ' ವೆಬ್ ತಾಣದಲ್ಲಿ ಟ್ರೆಂಡಿಂಗ್.!

ಮುಂದಿನ ಶುಕ್ರವಾರ ಬಿಡುಗಡೆ ಆಗುವ 'ದೊಡ್ಮನೆ ಹುಡ್ಗ' ಚಿತ್ರ ಈಗಾಗಲೇ 'ಬುಕ್ ಮೈ ಶೋ' ವೆಬ್ ತಾಣದಲ್ಲಿ ಟ್ರೆಂಡಿಂಗ್ ಆಗಿದೆ ಅಂದ್ರೆ ನೀವೇ ಊಹಿಸಿಕೊಳ್ಳಿ, ಚಿತ್ರಕ್ಕೆ ಕ್ರೇಜ್ ಎಷ್ಟಿದೆ ಅಂತ. ['ದೊಡ್ಮನೆ ಹುಡ್ಗ' ಚಿತ್ರದ ಬಗ್ಗೆ ಕೇಳಿಬಂದಿರುವ ಹೊಸ ಗಾಸಿಪ್ ಇದೇ...]


ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.!

ಬಾಲಿವುಡ್ ನ 'ಪಿಂಕ್', ಕನ್ನಡದ 'ಮುಂಗಾರು ಮಳೆ-2' ಹಾಗೂ 'ನೀರ್ ದೋಸೆ' ಚಿತ್ರಗಳ ಜೊತೆ 'ಬುಕ್ ಮೈ ಶೋ' ವೆಬ್ ತಾಣದ ಟಾಪ್ 10 ಚಿತ್ರಗಳ ಪಟ್ಟಿಗೆ 'ದೊಡ್ಮನೆ ಹುಡ್ಗ' ಲಗ್ಗೆ ಇಟ್ಟಿದೆ. ['ದೊಡ್ಮನೆ' ಅಂದ್ರೆ ಏನು.? ಸೂರಿ ಬಾಯ್ಬಿಟ್ಟ ದೊಡ್ಡ ಸೀಕ್ರೆಟ್ ಇಲ್ಲಿದೆ.!]


'ಮುಂಗಾರು ಮಳೆ-2' ಗಿಂತ 'ದೊಡ್ಮನೆ ಹುಡ್ಗ' ಫೇವರಿಟ್.!

ಅಚ್ಚರಿ ಅಂದ್ರೆ ಇದೇ ನೋಡಿ...'ಮುಂಗಾರು ಮಳೆ-2' ಚಿತ್ರಕ್ಕೆ 68% ಲೈಕ್ಸ್ ಇದ್ರೆ, ಇನ್ನೂ ಬಿಡುಗಡೆ ಆಗದ 'ದೊಡ್ಮನೆ ಹುಡ್ಗ' ಚಿತ್ರ 'ಬುಕ್ ಮೈ ಶೋ'ನಲ್ಲಿ 79% ಲೈಕ್ಸ್ ಪಡೆದುಕೊಂಡಿದೆ. ['ದೊಡ್ಮನೆ ಹುಡ್ಗ' ಪುನೀತ್ ರಾಜ್ ಕುಮಾರ್ ಆಡಿದ ದೊಡ್ಡ ಮಾತು]


ಬಾಲಾಜಿ ಚಿತ್ರಮಂದಿರದಲ್ಲಿ ಮೊದಲ ಶೋ ಭರ್ತಿ.!

'ಬುಕ್ ಮೈ ಶೋ' ವೆಬ್ ತಾಣದಲ್ಲಿ 'ದೊಡ್ಮನೆ ಹುಡ್ಗ' ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಬೆಂಗಳೂರಿನ ತಾವರೆಕೆರೆ ಬಳಿಯ ಬಾಲಾಜಿ ಚಿತ್ರಮಂದಿರದಲ್ಲಿನ ಸೆಪ್ಟೆಂಬರ್ 30 ರ ಬೆಳಗ್ಗೆ 6 ಗಂಟೆ ಶೋ ಬಹುತೇಕ ಫುಲ್ ಆಗಿದೆ.


ನಿಮ್ಮ ಟಿಕೆಟ್ ನ ಈಗಲೇ ಬುಕ್ ಮಾಡಿ...

ನೀವು ಅಪ್ಪಟ ಅಪ್ಪು ಅಭಿಮಾನಿಯಾಗಿದ್ದು, 'ದೊಡ್ಮನೆ ಹುಡ್ಗ' ಚಿತ್ರವನ್ನ ಮೊದಲ ದಿನವೇ ನೋಡಬೇಕೆನ್ನುವ ಕುತೂಹಲ ನಿಮಗೆ ಇದ್ದರೆ, ಈಗಲೇ ನಿಮ್ಮ ಸೀಟ್ ಕಾಯ್ದಿರಿಸಿ...ತಡ ಮಾಡಿದ್ರೆ, ಎಲ್ಲೂ ಟಿಕೆಟ್ ಸಿಕ್ಕಲ್ಲ.


'ದೊಡ್ಮನೆ ಹುಡ್ಗ' ಚಿತ್ರದ ಕುರಿತು....

ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗ ಇರುವ 'ದೊಡ್ಮನೆ ಹುಡ್ಗ' ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ವಿ.ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ.


English summary
Kannada Actor Puneeth Rajkumar starrer Kannada Movie 'Dodmane Hudga' bookings opened on Book My Show 7 days before Release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada