For Quick Alerts
  ALLOW NOTIFICATIONS  
  For Daily Alerts

  ಪುನೀತ್‌ ಮತ್ತು ಪ್ರಭುದೇವ ಡ್ಯಾನ್ಸ್ ಅತೀ ಶೀಘ್ರದಲ್ಲೇ ನಿಮ್ಮ ಮುಂದೆ!

  |

  ಪುನೀತ್​ ರಾಜ್​ಕುಮಾರ್ ಅವರು ಇಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ. ಹೃದಯಾಘಾತದಿಂದ ಪುನೀತ್‌ ರಾಜ್‌ಕುಮಾರ್ ನಿಧನ ಹೊಂದಿದ್ದಾರೆ. ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿನಿಮಾ ಬಿಟ್ಟು ಹಲವು ಸಿನಿಮಾಗಳಲ್ಲಿ ಅಪ್ಪು ತಮ್ಮನ್ನು ತೊಡಗಿಸಿಕೊಂಡಿದ್ದರು.

  ಹೀಗೆ ಪುನೀತ್‌ ರಾಜ್‌ಕುಮಾರ್ ಅವರು ಒಪ್ಪಿಕೊಂಡು ಅಭಿನಯಿಸಿದ ಸಿನಿಮಾಗಳಲ್ಲಿ 'ಲಕ್ಕಿ ಮ್ಯಾನ್' ಸಿನಿಮಾ ಕೂಡ ಒಂದು. ಲಕ್ಕಿ ಮ್ಯಾನ್ ಚಿತ್ರದಲ್ಲಿ ನಟ ಪುನೀತ್‌ ರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಲಕ್ಕಿ ಮ್ಯಾನ್ ಸಿನಿಮಾದ ಹಾಡಿನ ತುಣುಕೊಂದು ವೈರಲ್ ಆಗಿದೆ.

  'ಲಕ್ಕಿಮ್ಯಾನ್' ಆಗಿ ದರ್ಶನ ನೀಡಲಿದ್ದಾರೆ ಪುನೀತ್‌ ರಾಜ್‌ಕುಮಾರ್!

  'ಲಕ್ಕಿಮ್ಯಾನ್' ಆಗಿ ದರ್ಶನ ನೀಡಲಿದ್ದಾರೆ ಪುನೀತ್‌ ರಾಜ್‌ಕುಮಾರ್!

  ಪುನೀತ್​ ನಟಿಸುತ್ತಿದ್ದ ಕೆಲವು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಆ ಪೈಕಿ 'ಲಕ್ಕಿ ಮ್ಯಾನ್' ಸಿನಿಮಾ ಕೂಡ ಒಂದು. 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ನಟ ಪುನೀತ್‌ ರಾಜ್‌ಕುಮಾರ್ ವಿಶೇಷ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಅವರು ಡಾನ್ಸ್ ಮಾಡಿರುವ ವೀಡಿಯೋ ಕೂಡ ಸಿಕ್ಕಾ ಪಟ್ಟೆ ವೈರಲ್‌ ಆಗಿತ್ತು. ಈಗ ಆದೇ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ.

  ಪ್ರಭುವೇದ ಜೊತೆಗೆ ಅಪ್ಪು ಅದ್ಭುತ ಡಾನ್ಸ್!

  ಪ್ರಭುವೇದ ಜೊತೆಗೆ ಅಪ್ಪು ಅದ್ಭುತ ಡಾನ್ಸ್!

  ಡಾನ್ಸ್‌ ಎಂದರೆ ಅಪ್ಪು, ಅಪ್ಪು ಎಂದರೆ ಡಾನ್ಸ್ ಎನ್ನುವುದು ಕನ್ನಡ ಸಿನಿಮಾ ರಂಗದಲ್ಲಿ ಸರ್ವೇ ಸಾಮಾನ್ಯ ಆಗಿತ್ತು. ಹೀಗಿರುವಾಗ ನಟ ಪುನೀತ್‌ ಮತ್ತು ಡಾನ್ಸ್‌ ಕಿಂಗ್ ಪ್ರಭುದೇವ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ ಅಂದರೆ ಅದು ಅದ್ದೂರಿತನಕ್ಕೆ ಮತ್ತೊಂದು ಉದಾಹರಣೆ.

  'ಲಕ್ಕಿ ಮ್ಯಾನ್' ಸಿನಿಮಾದ ಈ ಹಾಡಿನ ತುಣುಕು ನೋಡಿದವರು ಯಾವಾಗ ಅಪ್ಪು ಅವರ ಈ ಸಂಪೂರ್ಣ ಡಾನ್ಸ್ ಕಣ್ತುಂಬಿ ಕೊಳ್ಳುತ್ತೇವೆ ಎಂದು ಕಾಯುತ್ತಿದ್ದರು. ಈಗ ಆ ಸಮಯ ಹತ್ತಿರ ಬಂದಿದೆ. ಲಕ್ಕಿ ಮ್ಯಾನ್ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತಂಡ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಿದೆ.

  ಡಾ.ರಾಜ್‌ಕುಮಾರ್‌ ಕುರಿತಾದ ಹಾಡಿನಲ್ಲಿ ಅಪ್ಪು ಡಾನ್ಸ್!

  ಡಾ.ರಾಜ್‌ಕುಮಾರ್‌ ಕುರಿತಾದ ಹಾಡಿನಲ್ಲಿ ಅಪ್ಪು ಡಾನ್ಸ್!

  ಪರ್ಸಾ ಪಿಕ್ಚರ್ಸ್ ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್​ ಕೆಲಸಗಳು ನಡೆಯುತ್ತಿವೆ. 'ಲಕ್ಕಿ ಮ್ಯಾನ್​' ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್​ಕುಮಾರ್‌ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪುನೀತ್ ರಾಜ್​ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್​ಕುಮಾರ್ ಅವರ ಮೇಲೆ ರಚಿಸಲಾದ ಈ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್​ ಮಾಡಿದ್ದಾರೆ. ಇದು ಭಾರಿ ನಿರೀಕ್ಷೆಗೆ ಕಾರಣವಾಗಿದೆ.

  'ಲಕ್ಕಿ ಮ್ಯಾನ್'ಗೆ ಡಾರ್ಲಿಂಗ್ ಕೃಷ್ಣ ನಾಯಕ!

  'ಲಕ್ಕಿ ಮ್ಯಾನ್'ಗೆ ಡಾರ್ಲಿಂಗ್ ಕೃಷ್ಣ ನಾಯಕ!

  ಲಕ್ಕಿ ಮ್ಯಾನ್​ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಹಿಣಿ ಪ್ರಕಾಶ್ ದ್ವಿತೀಯ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಅವಿನಾಶ್​ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

  ಶೂಟಿಂಗ್​ ಕೂಡ ಪೂರ್ಣಗೊಂಡಿದೆ. ಆ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರ ತಂಡದಿಂದ ಮಾಹಿತಿ ಹೊರಬಿದ್ದಿದೆ. ಡಿಸೆಂಬರ್​ ಅಥವಾ ಜನವರಿಯಲ್ಲಿ 'ಲಕ್ಕಿ ಮ್ಯಾನ್' ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡಕ್ಕೆ ಇದೆ. ಹಾಗಾಗಿ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ.

  English summary
  Puneeth Rajkumar Starrer Lucky Man Film Will Be Release Soon, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X