For Quick Alerts
  ALLOW NOTIFICATIONS  
  For Daily Alerts

  ಶಿರಡಿ ಸಾಯಿಬಾಬಾ ಮತ್ತು ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನ ಪಡೆದ ಪುನೀತ್

  |

  ಕನ್ನಡ ನಟ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ತೆರೆಗೆ ಬರಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಯುವರತ್ನ ರಿಲೀಸ್ ಆಗಲಿದ್ದು, ಅದಕ್ಕೂ ಮುಂಚೆ ಭರ್ಜರಿ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದೆ.

  ಶಿರಡಿ ಸಾಯಿಬಾಬಾ ಮತ್ತು ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನ ಪಡೆದ ಪುನೀತ್ | Filmibeat Kannada

  ಯವರತ್ನ ಸಿನಿಮಾ ಬಿಡುಗಡೆ ಕೇವಲ 27 ದಿನಗಳು ಮಾತ್ರ ಬಾಕಿಯಿದ್ದು, ಕರ್ನಾಟಕ, ಆಂಧ್ರ-ತೆಲಂಗಾಣ ಹಾಗೂ ವಿದೇಶಗಳಲ್ಲಿ ವಿತರಣೆ ಹಕ್ಕು ಸೋಲ್ಡ್ ಆಗಿದೆ. ಖ್ಯಾತ ನಿರ್ಮಾಪಕರುಗಳು ಯುವರತ್ನ ಚಿತ್ರವನ್ನು ಎಲ್ಲ ಕಡೆಯೂ ರಿಲೀಸ್ ಮಾಡಲಿದ್ದಾರೆ.

  ತೆಲುಗಿನ ಖ್ಯಾತ ನಿರ್ಮಾಪಕರ ಪಾಲಾಯ್ತು ಯುವರತ್ನ ವಿತರಣೆ ಹಕ್ಕು

  ಈ ನಡುವೆ ನಟ ಪುನೀತ್ ರಾಜ್ ಕುಮಾರ್ ಕೊಲ್ಲಾಪುರದ ಅಂಬಾಬಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಪುನೀತ್ ಜೊತೆ ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಸಾಥ್ ನೀಡಿದ್ದಾರೆ.

  ಈ ಫೋಟೋವನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ಹಂಚಿಕೊಂಡಿದ್ದು, ''ಕೊಲ್ಲಾಪುರದ ಅಂಬಾಬಾಯಿ ದೇವಸ್ಥಾನಕ್ಕೆ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಜೊತೆ ಭೇಟಿ ನೀಡಿ ಮಹಾಲಕ್ಷ್ಮಿ ಅಮ್ಮನವರ ಆಶೀರ್ವಾದ ಪಡೆದೆವು. 27 ದಿನಗಳಲ್ಲಿ ಥಿಯೇಟರ್ ಪರದೆ ಮೇಲೆ ನಿಮ್ಮನ್ನು ರಂಜಿಸಲು ಯುವರತ್ನ ಬರಲಿದ್ದಾನೆ....'' ಎಂದು ಟ್ವೀಟ್ ಮಾಡಿದ್ದಾರೆ.

  ಇದೇ ವೇಳೆ ಶಿರಿಡಿ ಭೇಟಿ ನೀಡಿ ಸಧ್ಗುರು ಸಾಯಿ ಬಾಬಾ ದರ್ಶನ ಸಹ ಪಡೆದುಕೊಂಡಿದ್ದಾರೆ.

  ಎಸ್ ತಮನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ, ಸಯೇಶಾ ಸೈಗಲ್, ಶರತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

  ಯುವರತ್ನ ಸಿನಿಮಾದ ವಿತರಣೆ ಬಗ್ಗೆ ಮಾಹಿತಿ

  • ವೈಜಾಕ್‌ನಲ್ಲಿ ವಾರಾಹಿ, ನಿಜಾಮ್‌ನಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ನೆಲ್ಲೂರು ಜೆಪಿಆರ್ ಫಿಲಂಸ್, ಗುಂಟೂರು ಧನುಶ್ರೀ ಫಿಲಂಸ್, ಕೃಷ್ಣ ಅನ್ನಪೂರ್ಣ ಸ್ಟುಡಿಯೋಸ್ ಲಿಮಿಟೆಡ್, ಪಶ್ಚಿಮ ಗೋವಾದರಿ ಇಶ್ನಾ ಎಂಟರ್‌ಪ್ರೈಸಸ್ ಹಾಗೂ ಪೂರ್ವ ಗೋವಾದರಿ ಮಹಿಕಾ ಮೂವಿಸ್ ಸಂಸ್ಥೆ ಯುವರತ್ನ ಚಿತ್ರವನ್ನು ರಿಲೀಸ್ ಮಾಡಲಿದೆ.
  • ಉತ್ತರ ಅಮೆರಿಕ ಹಾಗೂ ಕೆನೆಡಾ ದೇಶಗಳಲ್ಲಿ ವೀಕೆಂಡ್ ಸಿನಿಮಾ ಸಂಸ್ಥೆ ಪುನೀತ್ ಚಿತ್ರವನ್ನು ವಿತರಿಸುತ್ತಿದೆ.
  • ಈ ಎರಡು ದೇಶಗಳನ್ನು ಬಿಟ್ಟು ಉಳಿದ ಕಡೆ ಎಪಿ ಇಂಟರ್‌ನ್ಯಾಷನಲ್ ಸಂಸ್ಥೆ ರಿಲೀಸ್ ಮಾಡುತ್ತಿದೆ.
  • ಕರ್ನಾಟಕ ರಾಜ್ಯಾದ್ಯಂತ ಕಾರ್ತಿಕ್ ಗೌಡ ಅವರ ಕೆಆರ್‌ಜಿ ಸ್ಟುಡಿಯೋ ಯುವರತ್ನ ಚಿತ್ರವನ್ನು ರಿಲೀಸ್ ಮಾಡುತ್ತಿದೆ.
  English summary
  Kannada actor Puneeth Rajkumar Visit To Kolhapur Ambabai Temple along with Vijay Kiragandur and santhosh anandaram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X