For Quick Alerts
  ALLOW NOTIFICATIONS  
  For Daily Alerts

  ಸಕ್ರೆಬೈಲು ಆನೆ ಬಿಡಾರದಲ್ಲಿ ಪುನಿತ್ ರಾಜ್‌ಕುಮಾರ್: ನಟನ ನೋಡಲು ಅಭಿಮಾನಿಗಳ ದಂಡು

  |

  ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನಿತ್ ರಾಜ್ ಕುಮಾರ್ ಅವರು ಇಂದು (ಸೆಪ್ಟೆಂಬರ್ 01) ಭೇಟಿ ನೀಡಿದ್ದಾರೆ. ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ಅವರು ಬಿಡಾರಕ್ಕೆ ಬಂದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪವರ್ ಸ್ಟಾರ್ ಅಭಿಮಾನಿಗಳು ಆನೆ ಬಿಡಾರದ ಬಳಿ ಸೇರಿದ್ದರು.

  ಸಕ್ರೆಬೈಲಿನಲ್ಲಿ ಪುನೀತ್ ರಾಜ್‌ಕುಮಾರ್ | Puneeth Rajkumar In Sakrebailu For Govt Documentary Shooting |

  ಮಧ್ಯಾಹ್ನ ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನಿತ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಸಾಕ್ಷ್ಯಚಿತ್ರದ ಚಿತ್ರೀಕರಣದ ಸಲುವಾಗಿ ಅವರು ಬಿಡಾರಕ್ಕೆ ಬಂದಿದ್ದಾರೆ. ಬಿಡಾರದ ಕ್ರಾಲ್ ಪ್ರದೇಶದಲ್ಲಿ ಚಿತ್ರೀಕರಣ ಕಾರ್ಯ ನಡೆಸಲಾಯಿತು.

  ಜನರ ಪ್ರವೇಶ ನಿಷಿದ್ಧ

  ಚಿತ್ರೀಕರಣ ನಡೆಯುತ್ತಿದ್ದ ಕಾರಣಕ್ಕೆ ಕ್ರಾಲ್ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅರಣ್ಯಾಧಿಕಾರಿಗಳು, ಬಿಡಾರದ ಸಿಬ್ಬಂದಿಗಳು ಮತ್ತು ಚಿತ್ರೀಕರಣದ ತಂಡಕ್ಕೆ ಮಾತ್ರ ಕ್ರಾಲ್ ಒಳಗೆ ಬಿಡಲಾಯಿತು.

  ಅಭಿಮಾನಿಗಳ ಭೇಟಿಯಾದ ಅಪ್ಪು

  ಇನ್ನು, ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ನಟ ಪುನಿತ್ ರಾಜ್ ಕುಮಾರ್ ಅವರು ಕ್ರಾಲ್ ಪ್ರದೇಶದಿಂದ ಹೊರಗೆ ಬಂದು ಅಭಿಮಾನಿಗಳನ್ನು ಭೇಟಿಯಾದರು. ಅಭಿಮಾನಿಗಳಿಗೆ ಕೈ ಮುಗಿದ ಪುನಿತ್ ರಾಜ್ ಕುಮಾರ್, ಫೋಟೋ ಕ್ಲಿಕ್ಕಿಸಿಕೊಂಡರು.

  ಜಲಾಶಯಕ್ಕೆ ಪುನಿತ್ ಭೇಟಿ

  ಡಾಕ್ಯೂಮೆಂಟರಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಪುನಿತ್ ರಾಜ್ ಕುಮಾರ್ ಅವರು ಗಾಜನೂರಿನ ತುಂಗಾ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ವೇಳೆಗೆ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿನ ವೈಭವ ಕಣ್ತುಂಬಿಕೊಂಡಿದ್ದಾರೆ.

  ನಟ ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾದ ಬಳಿಕ 'ದ್ವಿತ್ವ' ಸಿನಿಮಾದ ಚಿತ್ರೀಕರಣದಲ್ಲಿ ಪುನೀತ್ ಭಾಗವಹಿಸಲಿದ್ದಾರೆ. 'ದ್ವಿತ್ವ' ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಅದರ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ನಿರ್ದೇಶನದ ಸಿನಿಮಾದಲ್ಲಿಯೂ ಪುನೀತ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  English summary
  Actor Puneeth Rajkumar visited sakrebyle elephant camp on September 01. He came there for shooting for a documentary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X