twitter
    For Quick Alerts
    ALLOW NOTIFICATIONS  
    For Daily Alerts

    ಪ್ರೇಕ್ಷಕರನ್ನು ಸೆಳೆಯಲು ಪಿವಿಆರ್ ಸಖತ್ ಆಫರ್

    |

    ಚಿತ್ರಮಂದಿರಗಳು ಪುನರ್‌ ಕಾರ್ಯಾರಂಭ ಮಾಡಿ ಮೂರು ವಾರಗಳಾಗಿವೆ. ಆದರೆ ಜನರು ಇನ್ನೂ ಚಿತ್ರಮಂದಿರಗಳತ್ತ ಬರುವ ಮನಸ್ಸು ಮಾಡಿಲ್ಲ.

    ಕೊರೊನಾ ಭೀತಿ ಮೊದಲ ಕಾರಣವಾದರೆ, ಹೊಸ ಸಿನಿಮಾಗಳು ಬಿಡುಗಡೆ ಆಗದಿರುವುದು ಸಹ ಮತ್ತೊಂದು ಪ್ರಮುಖ ಕಾರಣ.

    ಬೇಡಿಕೆ ಈಡೇರಿಸುವ ವರೆಗೆ ಚಿತ್ರಪ್ರದರ್ಶನ ಇಲ್ಲ: ಚಿತ್ರ ಪ್ರದರ್ಶಕರ ಮಂಡಳಿಬೇಡಿಕೆ ಈಡೇರಿಸುವ ವರೆಗೆ ಚಿತ್ರಪ್ರದರ್ಶನ ಇಲ್ಲ: ಚಿತ್ರ ಪ್ರದರ್ಶಕರ ಮಂಡಳಿ

    ಹಲವಾರು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಇನ್ನೂ ತೆರೆದೇ ಇಲ್ಲ. ಆದರೆ ಬಹುತೇಕ ಮಲ್ಟಿಫ್ಲೆಕ್ಸ್‌ಗಳು ತೆರೆದಿದ್ದು, ಸಿನಿಮಾ ಪ್ರದರ್ಶನ ಮಾಡುತ್ತಿವೆ. ಆದರೆ ಅಲ್ಲೂ ಸಹ ಪ್ರೇಕ್ಷಕರ ಸಂಖ್ಯೆ ತೀವ್ರ ಕಡಿಮೆ. ಈ ನಡುವೆ ಮಲ್ಟಿಫ್ಲೆಕ್ಸ್ ದಿಗ್ಗಜ ಪಿವಿಆರ್, ಪ್ರೇಕ್ಷಕರನ್ನು ಸೆಳೆಯಲು ಸಖತ್ ಆಫರ್ ಅನ್ನು ನೀಡಿದೆ.

    ದುಬಾರಿ ಬೆಲೆಯಲ್ಲಿ ಕಡಿತ ಮಾಡಿದ ಪಿವಿಆರ್‌

    ದುಬಾರಿ ಬೆಲೆಯಲ್ಲಿ ಕಡಿತ ಮಾಡಿದ ಪಿವಿಆರ್‌

    ದುಬಾರಿ ಟಿಕೆಟ್ ಬೆಲೆ ಹೊಂದಿದ್ದ ಪಿವಿಆರ್‌, ತನ್ನ ಟಿಕೆಟ್ ಬೆಲೆಯಲ್ಲಿ ಭಾರಿ ಕಡಿತ ಮಾಡಿದೆ. ಅಷ್ಟೇ ಅಲ್ಲ, ಕೆಲವೇ ಸಾವಿರಗಳಲ್ಲಿ ಹಲವು ಟಿಕೆಟ್‌ಗಳನ್ನು ಒಟ್ಟಿಗೆ ಬುಕ್‌ ಮಾಡಿಕೊಳ್ಳುವ ಸೌಲಭ್ಯವನ್ನೂ ನೀಡುತ್ತಿದೆ.

    ಪಿವಿಆರ್ ಗೋಲ್ಡ್‌ ಕ್ಲಾಸ್‌ ಬೆಲೆ?

    ಪಿವಿಆರ್ ಗೋಲ್ಡ್‌ ಕ್ಲಾಸ್‌ ಬೆಲೆ?

    ಪಿವಿಆರ್‌ನ ಗೋಲ್ಡ್ ಕ್ಲಾಸ್‌ನಲ್ಲಿ ಸಿನಿಮಾ ನೋಡುವುದು ಸಾಮಾನ್ಯರಿಗೆ ಸಾಧ್ಯವೇ ಆಗುತ್ತಿರಲಿಲ್ಲ, 1500ಕ್ಕೂ ಹೆಚ್ಚು ಬೆಲೆ ತೆರಬೇಕಿತ್ತು. ಆದರೆ ಈಗ ಪಿವಿಆರ್‌ ಗೋಲ್ಡ್‌ ಕ್ಲಾಸ್ ಟಿಕೆಟ್ ಬೆಲೆ ಕೇವಲ 199 ರು. ಹೆಚ್ಚು ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಸೆಳೆಯಲು ಈ ಆಫರ್ ನೀಡಲಾಗುತ್ತಿದೆ.

    ಮೊದಲ ವಾರದಲ್ಲಿ ಏಳು ಕನ್ನಡ ಸಿನಿಮಾ ರಿಲೀಸ್, ಯಾವುವು?ಮೊದಲ ವಾರದಲ್ಲಿ ಏಳು ಕನ್ನಡ ಸಿನಿಮಾ ರಿಲೀಸ್, ಯಾವುವು?

    85 ರು. ನಿಂದ ಟಿಕೆಟ್ ಬೆಲೆ ಆರಂಭ!

    85 ರು. ನಿಂದ ಟಿಕೆಟ್ ಬೆಲೆ ಆರಂಭ!

    ಗೋಲ್ಡ್ ಕ್ಲಾಸ್ ಮಾತ್ರವಲ್ಲದೆ ಕ್ಲಾಸಿಕ್, ಪ್ರೀಮಿಯಂ, ಗೋಲ್ಡ್, ಗೋಲ್ಡ್ ಪ್ರೈಂ ಮತ್ತು ಸಾಮಾನ್ಯ ಟಿಕೆಟ್ ಬೆಲೆಯನ್ನೂ ಸಹ ಇಳಿಸಿದೆ ಪಿವಿಆರ್. ಈಗ ಪಿವಿಆರ್‌ ನ ಟಿಕೆಟ್ ಬೆಲೆ ಕೇವಲ 85 ರು. ನಿಂದ ಪ್ರಾರಂಭವಾಗುತ್ತಿದೆ. ಆದರೆ ಕಂಡಿಶನ್ಸ್‌ ಅಪ್ಲೈ ಎಂದು ಹೇಳಿದೆ ಪಿವಿಆರ್‌

    Recommended Video

    DIRECTOR'S DIARY : ಬೆಳೆಯೋ ಟೈಮ್ ನಲ್ಲಿ ನನ್ನ ವಿರುದ್ಧ ರವಿ ಬೆಳಗೆರೆ ಪತ್ರಿಕೆಯಲ್ಲಿ ಆರ್ಟಿಕಲ್ ಬಂದಿತ್ತು| Part 1
    30 ಟಿಕೆಟ್‌ಗೆ ಕೇವಲ 2500 ರು

    30 ಟಿಕೆಟ್‌ಗೆ ಕೇವಲ 2500 ರು

    ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಣೆ ಮಾಡಲಿಚ್ಛಿಸುವವರಿಗೆ ವಿಶೇಷ ಆಫರ್ ಅನ್ನು ನೀಡುತ್ತಿದೆ ಪಿವಿಆರ್. ಗೋಲ್ಡ್ ಕ್ಲಾಸ್‌ನ 15 ಟಿಕೆಟ್‌ಗೆ ಕೇವಲ 2500 ಪಾವತಿಸಬೇಕಾಗಿದೆ. ಪ್ರೀಮಿಯಂ ಕ್ಲಾಸ್‌ನ 30 ಟಿಕೆಟ್‌ಗೆ 2500 ಬೆಲೆ ನಿಗದಿಪಡಿಸಲಾಗಿದೆ.

    ಚಿತ್ರಮಂದಿರಗಳು ಓಪನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರಚಿತ್ರಮಂದಿರಗಳು ಓಪನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

    English summary
    PVR multiplex theater cut short its ticket price. To attract more people its giving big discounts.
    Monday, November 2, 2020, 15:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X