For Quick Alerts
  ALLOW NOTIFICATIONS  
  For Daily Alerts

  ತಮನ್ನಾಗೂ ಮುಂಚೆ 'ಕೆಜಿಎಫ್' ಹಾಡಿನಲ್ಲಿ ಈ ನಟಿ ಕುಣಿಯಬೇಕಿತ್ತು.?

  By Bharath Kumar
  |
  K.G.F Kannada movie : ಕೆ.ಜಿ.ಎಫ್ ಜೋಕೆ ಹಾಡಿಗೆ ಮೊದಲು ಈ ನಟಿ ಸೊಂಟ ಬಳುಕಿಸಬೇಕಿತ್ತಂತೆ..!

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಶೂಟಿಂಗ್ ಮುಗಿದಿದ್ದು, ಅಕ್ಟೋಬರ್ ನಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ. ಕೆಜಿಎಫ್ ಚಿತ್ರದಲ್ಲಿ ಬಹುಭಾಷಾ ನಟಿ ತಮನ್ನಾ ಸ್ಪೆಷಲ್ ನಂಬರ್ ಹಾಡಿಗೆ ಸೊಂಟ ಬಳುಕಿಸಿರುವ ಸುದ್ದಿ ಗೊತ್ತೇ ಇದೆ.

  ಪರೋಪಕಾರಿ ಚಿತ್ರದ 'ಜೋಕೆ....ನಾನು ಬಳ್ಳಿಯ ಮಿಂಚು' ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದಾರೆ. ಯಶ್ ಜೊತೆ ತಮನ್ನಾ ಕುಣಿದಿರುವ ಮೇಕಿಂಗ್ ಚಿತ್ರ ಕೂಡ ಬಹಿರಂಗವಾಗಿತ್ತು.

  ಕೆ.ಜಿ.ಎಫ್ ಹಾಡಿನಲ್ಲಿ ಸೊಂಟ ಬಳುಕಿಸಲು ತಮನ್ನಾ ಪಡೆದ ಸಂಭಾವನೆ ಇಷ್ಟೇನಾ.? ಕೆ.ಜಿ.ಎಫ್ ಹಾಡಿನಲ್ಲಿ ಸೊಂಟ ಬಳುಕಿಸಲು ತಮನ್ನಾ ಪಡೆದ ಸಂಭಾವನೆ ಇಷ್ಟೇನಾ.?

  ಆದ್ರೆ, ತಮನ್ನಾಗೂ ಮುಂಚೆ ಲಕ್ಷ್ಮಿ ರೈಗೆ 'ಕೆಜಿಎಫ್' ಹಾಡಿನಲ್ಲಿ ನೃತ್ಯ ಮಾಡಲು ಆಫರ್ ಮಾಡಲಾಗಿತ್ತಂತೆ. ಹೌದು, ಖುದ್ದು ಈ ವಿಷ್ಯವನ್ನ ಲಕ್ಷ್ಮಿ ರೈ ಹೇಳಿಕೊಂಡಿದ್ದಾರೆ. 'ಕುರುಕ್ಷೇತ್ರ' ಮತ್ತು 'ಕೆಜಿಎಫ್' ಚಿತ್ರದಿಂದ ಕರೆ ಬಂದಿತ್ತು. ಆದ್ರೆ, ಹೆಚ್ಚು ದಿನ ಕಾಲ್ ಶೀಟ್ ಕೇಳಿದ ಪರಿಣಾಮ ಸಾಧ್ಯವಾಗಲಿಲ್ಲ ಎಂದಿದ್ದಾರೆ.

  'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು 'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು

  raai lakshmi rejects kgf song

  ಬಾಲಿವುಡ್ ನಲ್ಲಿ 'ಜೂಲಿ 2' ಸಿನಿಮಾ ಮುಗಿಸಿ ಈಗ 'ಝಾನ್ಸಿ' ಎಂಬ ಹೊಸ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ರಿಯಲ್ ಇನ್ಸಿಡೆಂಟ್ ಬೆಸಿಡ್ ಸಿನಿಮಾ ಇದಾಗಿದೆ. ಇಷ್ಟು ದಿನ ಗ್ಲಾಮರ್ ಲುಕ್ನಲ್ಲಿ ಮಿರಿಮಿರಿ ಮಿಂಚುತ್ತಿದ್ದ ಬೆಳಗಾವಿ ಬಾಲೆ ಈ ಫಸ್ಟ್ ಟೈಮ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಸಿಕೊಳ್ಳುತ್ತಿದ್ದಾರೆ.

  ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.! ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.!

  ಈ ಚಿತ್ರವನ್ನು ಗುರುಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ಕೋಮಲ್ ನಟನೆಯ 'ಮರ್ಯಾದ ರಾಮಣ್ಣ' ಚಿತ್ರವನ್ನು ಮಾಡಿದ್ದರು.' ಝಾನ್ಸಿ' ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್, ಇಂಟ್ರಡಕ್ಷನ್ ಹಾಡಿನಿಂದ ಶುರುವಾಗಿದೆ. ಧನುಕುಮಾರ್ ನೃತ್ಯ ನಿರ್ದೇಶನದಲ್ಲಿ ಲಕ್ಷ್ಮಿ ರೈ ಕುಣಿಯುತ್ತಿದ್ದಾರೆ.

  ಇನ್ನು ಕೆಜಿಎಫ್ ಸಿನಿಮಾ ಕೂಡ ಶೂಟಿಂಗ್ ಮುಗಿಸಿದ್ದು, ಅಕ್ಟೋಬರ್ ತಿಂಗಳಲ್ಲಿ ಟ್ರೈಲರ್ ಬಿಡುಗಡೆ ಮಾಡಲಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ಕೆಜಿಎಫ್ ಸಿನಿಮಾ ತೆರೆಕಾಣಲಿದೆ. ಹೊಂಬಾಳೆ ಫಿಲ್ಮ್ ಬ್ಯಾನರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Popular actress Raai lakshmi has rejects Kgf offer. now she is doing jhansi movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X