For Quick Alerts
  ALLOW NOTIFICATIONS  
  For Daily Alerts

  ರಾಯನ್ ರಾಜ್ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ; ವಿಶೇಷ ವಿಡಿಯೋ ಹಂಚಿಕೊಂಡ ಮೇಘನಾ

  |

  ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ ಇಂದು ( ಅಕ್ಟೋಬರ್ 22 ) 3ನೇ ವಸಂತಕ್ಕೆ ಕಾಲಿಟ್ಟಿದ್ದಾನೆ. ನಟಿ ಮೇಘನಾ ರಾಜ್ ಈ ವಿಶೇಷ ದಿನದಂದು ತಮ್ಮ ಮತ್ತು ತಮ್ಮ ಮಗ ರಾಯನ್ ರಾಜ್ ಸರ್ಜಾನ ಸೆಲ್ಫಿ ಚಿತ್ರಗಳನ್ನೊಳಗೊಂಡ ಎಡಿಟೆಡ್ ವಿಡಿಯೋವೊಂದನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  'ನಮ್ಮ ಮುದ್ದು ಹುಡುಗ 2 ವರ್ಷ ಪೂರೈಸಿದ್ದಾನೆ' ಎಂದು ಬರೆದುಕೊಂಡಿರುವ ಮೇಘನಾ ರಾಜ್ ಚಿರಂಜೀವಿ ಸರ್ಜಾ ಅವರ ಇನ್ ಸ್ಟಾಗ್ರಾಂ ಖಾತೆಯನ್ನು ಇದರಲ್ಲಿ ಉಲ್ಲೇಖಿಸಿದ್ದಾರೆ. ಮೇಘನಾ ರಾಜ್ ಹಂಚಿಕೊಂಡಿರುವ ಈ ವಿಡಿಯೋಗೆ ಹಲವಾರು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ದೇವರ ಆಶೀರ್ವಾದ ನಿನ್ನ ಮೇಲಿರಲಿ ಎಂದು ರಾಯನ್ ರಾಜ್ ಸರ್ಜಾಗೆ ಹರಸಿದ್ದಾರೆ.

  ಇನ್ನು ಮೇಘನಾ ರಾಜ್ 5 ದಿನಗಳ ಹಿಂದಷ್ಟೇ ತಮ್ಮ ಪತಿ ಚಿರಂಜೀವಿ ಸರ್ಜಾ ಅವರ ಜನ್ಮದಿನದ ಪ್ರಯುಕ್ತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. 'ಹ್ಯಾಪಿ ಬರ್ತ್ ಡೇ ಮೈ ಹ್ಯಾಪಿನೆಸ್.. ಎಷ್ಟೇ ಜನರಿದ್ದರೂ ನಾನೂ ನಗಲು ನೀನೇ ಕಾರಣ ನನ್ನ ಮುದ್ದಿನ ಗಂಡ. ನಾ ನಿನ್ನ ಪ್ರೀತಿಸುವೆ' ಎಂದು ಮೇಘನಾ ರಾಜ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

  ಸದ್ಯ ಮತ್ತೆ ಕಿರುತೆರೆ ಹಾಗೂ ಬೆಳ್ಳಿತೆರೆಯತ್ತ ಮುಖ ಮಾಡಿರುವ ಮೇಘನಾ ರಾಜ್ ಕೆಲವೊಂದಿಷ್ಟು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು ಹಾಗೂ ಸೃಜನ್ ಲೋಕೇಶ್ ನಾಯಕತ್ವದ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಎಂಬ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

  English summary
  Raayan Raj Sarja 2nd Year Birthday; Meghana Raj Sarja Shares Special Video . Read on
  Saturday, October 22, 2022, 12:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X