For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಬರ್ತ್ ಡೇ ಪಾರ್ಟಿಯಲ್ಲಿ ರಚಿತಾ ರಾಮ್ ಮಸ್ತ್ ಡ್ಯಾನ್ಸ್

  |
  Rachitha Ram Danced in Prem Birthday party | FILMIBEAT KANNADA

  ನಿರ್ದೇಶಕ ಜೋಗಿ ಪ್ರೇಮ್ ಇಂದು (ಅಕ್ಟೋಬರ್ 22) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ನಿನ್ನೆ ರಾತ್ರಿಯೇ ಅವರ ಬರ್ತ್ ಡೇ ಪಾರ್ಟಿ ಜೋರಾಗಿ ನಡೆದಿದೆ.

  ವಿಶೇಷವಾಗಿ ನಟಿ ರಚಿತಾ ರಾಮ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರಕ್ಷಿತಾಗೆ ಆಪ್ತ ಗೆಳತಿಯಾಗಿರುವ ರಚಿತಾ ಈ ಖುಷಿಯ ಸಂದರ್ಭದಲ್ಲಿ ಜೊತೆಗೆ ಇದ್ದರು. ಪಾರ್ಟಿಯಲ್ಲಿ ರಕ್ಷಿತಾ ಹಾಗೂ ರಚಿತಾ ಇಬ್ಬರು ಸುಂಟರಗಾಳಿ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದರು. 'ದಿ ವಿಲನ್' ಸಿನಿಮಾದ ಹಾಡನ್ನೂ ರಚಿತಾ ಹಾಡಿದರು.

  ರಚಿತಾ ರಾಮ್ ಆಡಿದ್ದ ಈ ಮಾತಿನಿಂದ ನಿರ್ದೇಶಕ ಪಿ ವಾಸು ಬೇಸರರಚಿತಾ ರಾಮ್ ಆಡಿದ್ದ ಈ ಮಾತಿನಿಂದ ನಿರ್ದೇಶಕ ಪಿ ವಾಸು ಬೇಸರ

  ಪ್ರೇಮ್ ಹಾಗೂ ರಕ್ಷಿತಾ ಕುಟುಂಬ, ಸ್ನೇಹಿತರು, ರಚಿತಾ ರಾಮ್, ಗಾಯಕ ನವೀನ್ ಸಜ್ಜು, ಕಾಮಿಡಿ ಕಿಲಾಡಿಗಳು ಕಲಾವಿದರು ಹಾಗೂ ಪ್ರೇಮ್ ತಂಡ ಸೇರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿದರು. ಕೇಕ್ ಕಟ್ ಮಾಡಿ ಪ್ರೇಮ್ ಸಂಭ್ರಮ ಪಟ್ಟರು.

  ಹುಟ್ಟುಹಬ್ಬದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ರಕ್ಷಿತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಯ ಪತಿಗೆ ರಕ್ಷಿತಾ ಶುಭಾಶಯ ತಿಳಿಸಿದ್ದಾರೆ.

  ಮೆಟ್ರೋ ಪ್ರಯಾಣ ಮಾಡಿ, ಆಸೆ ಈಡೇರಿಸಿಕೊಂಡ ರಚಿತಾಮೆಟ್ರೋ ಪ್ರಯಾಣ ಮಾಡಿ, ಆಸೆ ಈಡೇರಿಸಿಕೊಂಡ ರಚಿತಾ

  'ದಿ ವಿಲನ್' ಸಿನಿಮಾದ ನಂತರ ಪ್ರೇಮ್ 'ಏಕ್ ಲವ್ ಯಾ' ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ರಕ್ಷಿತಾ ಸಹೋದರ ರಾಣಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾವಾಗಿದೆ. ಉಳಿದಂತೆ, ಪ್ರೇಮ್ ನಟನೆಯ 'ಗಾಂಧಿಗಿರಿ' ಸಿನಿಮಾದ ಬಿಡುಗಡೆ ಇನ್ನು ಬಾಕಿ ಇದೆ.

  English summary
  Actress Rachita Ram and Rakshita danced in director Prem's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X