For Quick Alerts
  ALLOW NOTIFICATIONS  
  For Daily Alerts

  'ಮೈ ಹೀರೋ' ದರ್ಶನ್: ದಚ್ಚುಗೆ ರಚ್ಚು ಸ್ಪೆಷಲ್ ವಿಶ್!

  |

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 45ನೇ ಹುಟ್ಟಹಬ್ಬ. ದರ್ಶನ್ ಅವರ ಹುಟ್ಟುಹಬ್ಬ ಅಂದರೆ ಅಭಿಮಾನಿಗೆ ದೊಡ್ಡ ಹಬ್ಬ. ದರ್ಶನ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇದ್ದರೂ. ದರ್ಶನ್ ಅವರ ಅಭಿಮಾನಿಗಳಿಂದ ದರ್ಶನ್ ಹುಟ್ಟುಹಬ್ಬದ ಹ್ಯಾಶ್‌ ಟ್ಯಾಗ್ ಟ್ರೆಂಡಿಂಗ್‌ನಲ್ಲಿ ಇದೆ. ಇನ್ನು ದಾಸನಿಗೆ ಅಭಿಮಾನಿಗಳ ಶುಭಾಶಯ ಒಂದು ಕಡೆ ಆದರೆ, ಸಿನಿಮಾ ಸ್ನೇಹಿತರು ಕೂಡ ತಮ್ಮದೇ ಶೈಲಿಯಲ್ಲಿ ಶುಭಕೋರಿದ್ದಾರೆ.

  ನಟ ದರ್ಶನ್ ಸಿನಿಮಾರಂಗಕ್ಕೆ ಬಂದು 20 ವರ್ಷ ಆಗಿದೆ. ಈ ಪಯಣದಲ್ಲಿ ಅವರು ಸಾಕಷ್ಟು ಸಿನಿಮಾ ಸ್ನೇಹಿತರನ್ನು ಪಡೆದಿದ್ದಾರೆ. ದರ್ಶನ್ ಅವರನ್ನು ಹಲವರು ತಮ್ಮದೇ ಆದ ಕಾರಣಕ್ಕೆ ಇಷ್ಟ ಪಡುತ್ತಾರೆ. ದರ್ಶನ್ ಅವರು ಹುಟ್ಟುಹಬ್ಬವನ್ನು ವಿಶೇಷವಾಗಿ, ಅಭಿಮಾನಿಗಳೊಂದಿಗೆ ದೊಡ್ಡದಾಗಿ ಸಂಭ್ರಮಿಸುತ್ತಿಲ್ಲ. ಅದರೂ ಸಾಮಾಜಿಕ ಜಾಲತಾಣದಲ್ಲಿ ಹ್ಯಾಪಿ ಬರ್ತ್ ಡೇ ದರ್ಶನ್ ಎನ್ನುವ ನಾದ ಮೊಳಗುತ್ತಿದೆ.

  Kranti first look: ತಾಯಿ ನುಡಿ ಕಲಿಸಿದ ಕನ್ನಡ ತಾಯಿಗೆ ಚಿರಋಣಿ ಎಂದ ದರ್ಶನ್: ಫಸ್ಟ್ ಲುಕ್ ಟೀಸರ್‌ನಲ್ಲಿ ಅಕ್ಷರ 'ಕ್ರಾಂತಿ' Kranti first look: ತಾಯಿ ನುಡಿ ಕಲಿಸಿದ ಕನ್ನಡ ತಾಯಿಗೆ ಚಿರಋಣಿ ಎಂದ ದರ್ಶನ್: ಫಸ್ಟ್ ಲುಕ್ ಟೀಸರ್‌ನಲ್ಲಿ ಅಕ್ಷರ 'ಕ್ರಾಂತಿ'

  ಇನ್ನು ಸಿನಿಮಾ ತಾರೆಯರು ಕೂಡ ದರ್ಶನ್ ಅವರಿಗೆ ಶುಭಕೋರಿದ್ದಾರೆ. ಕೆಲವರು ಹಳೆಯ ನೆನಪುಗಳನ್ನು ಹಂಚಿಕೊಂಡು ದಾಸನಿಗೆ ಶುಭ ಕೋರಿದ್ದಾರೆ. ಇನ್ನು ಕೆಲವರು ತಮ್ಮದೇ ಶೈಲಿಯಲ್ಲಿ ಹ್ಯಾಪಿ ಬರ್ತ್ ಡೇ ದರ್ಶನ್ ಎಂದಿದ್ದಾರೆ. ಇಂದು ಯಾವೆಲ್ಲಾ ತಾರೆಯರು ದರ್ಶನ್ ಅವರಿಗೆ ಹೇಗೆಲ್ಲಾ ಶುಭಕೋರಿದ್ದಾರೆ ಎನ್ನುವುದನ್ನು ಮುಂದೆ ಓದಿ...

  Happy Birthday Darshan: ನಟ ದರ್ಶನ್‌ಗೆ ಹುಟ್ಟುಹಬ್ಬದ ಸಂಭ್ರಮ: 45ನೇ ವಸಂತಕ್ಕೆ ಕಾಲಿಟ್ಟ ದಾಸ!Happy Birthday Darshan: ನಟ ದರ್ಶನ್‌ಗೆ ಹುಟ್ಟುಹಬ್ಬದ ಸಂಭ್ರಮ: 45ನೇ ವಸಂತಕ್ಕೆ ಕಾಲಿಟ್ಟ ದಾಸ!

  ದರ್ಶನ್‌ಗೆ ಮೈ ಹೀರೋ ಎಂದ ರಚ್ಚು!

  ನಟಿ ರಚಿತಾ ಅವರು ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ದರ್ಶನ್ ಅವರೊ ಜೊತೆಗಿನ ಸೆಲ್ಫಿ ಫೊಟೊ ಹಂಚಿಕೊಂಡು, ಮಯ ಹೀರೋ ದರ್ಶನ್ ಎಂದು ಬರೆದು ಹಾರ್ಟ್ ಸಿಂಬಲ್ ಹಾಕಿದ್ದಾರೆ. ಅದರ ಜೊತೆಗೆ ಹ್ಯಾಪಿ ಬರ್ತ್ ಡೇ ಡಿ ಬಾಸ್ ಎನ್ನುವ ಹ್ಯಾಶ್ ಟ್ಯಾಗ್ ಹಂಚಿಕೊಂಡಿದ್ದಾರೆ. ಈ ರೀತಿಯಾಗಿ ನಟಿ ರಚಿತಾ ರಾಮ್ ಅವರು ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

  ಮುನಿಸು ಮರೆತು ದರ್ಶನ್‌ರನ್ನು ಹರಸಿದ ನಿರ್ದೇಶಕ ಪ್ರೇಮ್!

  ಇತ್ತೀಚೆಗೆ ದರ್ಶನ್ ಅವರ ಒಂದು ಹೇಳಿಕೆಯಿಂದ ಪ್ರೇಮ್ ಅವರ ವಿರುದ್ಧ ಗುಡುಗಿದ್ದರು. ಆದರೆ ಈಗ ಅದೆಲ್ಲವನ್ನು ಮರೆತು, ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಅವರಿ ಶುಭಕೋರಿದ್ದಾರೆ. ಈ ಮೂಲಕ ಕರಿಯ ಸಿನಿಮಾವನ್ನು ಕೂಡ ನೆನಪಿಸಿಕೊಂಡಿದ್ದಾರೆ. ದರ್ಶನ್ ಮತ್ತು ಅವರ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು #ಕರಿಯ ದರ್ಶನ್, ಸಂತಸ ಮತ್ತು ಯಶಸ್ಸಿನೊಂದಿಗೆ ದೇವರು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ. ಹಾಗೆ ಕ್ರಾಂತಿ ಚಿತ್ರಕ್ಕೂ ಕೂಡ ಶುಭಕೋರಿದ್ದಾರೆ.

  D56 ಪೋಸ್ಟರ್ ಜೊತೆ ಶುಭಕೋರಿದ ತರುಣ್ ಸುಧೀರ್!

  ಇನ್ನು ನಿರ್ದೇಶಕ ತರುಣ್ ಸುಧೀರ್ ಅವರು ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅವರ ಮುಂದಿನ ಚಿತ್ರ ಡಿ 56 ಚಿತ್ರದ ಪೋಸ್ಟರ್ ಹಂಚಿಕೊಂಡು ಶುಭಕೋರಿದ್ದಾರೆ. ಇನ್ನು ನನ್ನ ಮುಂದಿನ ಚಿತ್ರದ ಪೋಸ್ಟರ್ ದರ್ಶನ್ ಮತ್ತು ರಾಕ್‌ಲೈನ್ ಅವರ ಜೊತೆಗೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಟ ದರ್ಶನ್ ಅವರಿಗೆ ಶುಭಕೋರಿದ್ದಾರೆ.

  ದರ್ಶನ್‌ಗೆ ಶುಭಕೋರಿದ ರಕ್ಷಿತ್ ಶೆಟ್ಟಿ, ಹಲವು ತಾರೆಯರು!

  ನಟ ರಕ್ಷಿತ್ ಶೆಟ್ಟಿ ವಿಶೇಷ ಸಂದೇಶದ ಮೂಲಕ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. "ನೀವು ಯಶಸ್ಸಿನ ಏಣಿಯನ್ನು ಏರುತ್ತಾ, ಅದರಿಂದ ಸಾಕಷ್ಟು ಮಂದಿಗೆ ಸ್ಫೂರ್ತಿ ಆಗಿದ್ದಿರಿ. ಹುಟ್ಟುಹಬ್ಬದ ಶುಭಾಶಯಗಳು ದರ್ಸನ್ ಸರ್. ಈ ವರ್ಷ ಸಂತಸ, ಪಾಸಿಟಿವಿಟಿ ನಿಮ್ಮ ಬದುಕಲ್ಲಿ ತುಂಬಿರಲಿ." ಎಂದು ಬರೆದುಕೊಂಡಿದ್ದಾರೆ. ಇನ್ನುಳಿದಂತೆ ನಟ ಶ್ರೀನಗರ ಕಿಟ್ಟಿ, ಅನೀಶ್, ಧನ್ವೀರ್ ಸೇರಿದಂತೆ ಹಲವರು ಶುಭಕೋರಿದ್ದಾರೆ.

  English summary
  Rachita Ram And Other Special Wish To Challenging Star Darshan
  Wednesday, February 16, 2022, 13:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X