»   » 'ಬಿಕಿನಿ' ಬಗ್ಗೆ ಮಾತನಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್.!

'ಬಿಕಿನಿ' ಬಗ್ಗೆ ಮಾತನಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್.!

Posted By:
Subscribe to Filmibeat Kannada
ಡಿಂಪಲ್ ಕ್ವೀನ್, ರಚಿತಾ ರಾಮ್ ಬಿಕಿನಿ ಬಗ್ಗೆ ಹೇಳೋದು ಹೀಗೆ | Filmibeat Kannada

ಸಿನಿಮಾ ರಂಗಕ್ಕೂ ಬಿಕಿನಿಗೂ ದೊಡ್ಡ ನಂಟು ಇದೆ. ಹಾಲಿವುಡ್ ಚಿತ್ರದಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೆ ಬಿಕಿನಿ ಸುದ್ದಿ ಬಂದರೆ ಸಾಕು ಎಲ್ಲರ ಕಿವಿ ನೆಟ್ಟಗಾಗುತ್ತದೆ.

ಕನ್ನಡದಲ್ಲಿಯೂ ಈಗಾಗಲೇ ಅನೇಕ ನಟಿಯರು ಬಿಕಿನಿ ಧರಿಸಿ ದೊಡ್ಡ ಸುದ್ದಿ ಮಾಡಿದ್ದಾರೆ. ಆದರೆ ನಟಿ ರಚಿತಾ ರಾಮ್ ಮಾತ್ರ ಇದುವರೆಗೆ ಬಿಕಿನಿ ಹಾಕಿಲ್ಲ. ಜೊತೆಗೆ ಗ್ಲಾಮರ್ ಪಾತ್ರಕ್ಕಿಂತ ಹೆಚ್ಚು ಹೋಮ್ಲಿ ಪಾತ್ರಗಳನ್ನೇ ರಚಿತಾ ಮಾಡಿದ್ದರು. ಹೀಗಿರುವಾಗಲೇ, ರಚಿತಾ ರಾಮ್ ಮೊದಲ ಬಾರಿಗೆ ಬಿಕಿನಿ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ..

ಎನ್.ಆರ್.ಐ ಪಾತ್ರ

''ಜಾನಿ ಜಾನಿ ಎಸ್ ಪಪ್ಪ' ಚಿತ್ರದಲ್ಲಿ ನಾನು ಎನ್.ಆರ್.ಐ ಕುಟುಂಬದ ಪ್ರಿಯಾ ಎನ್ನುವ ಹುಡುಗಿಯ ಪಾತ್ರ ಮಾಡುತ್ತಿದ್ದು, ಈ ಪಾತ್ರ ಸ್ವಲ್ಪ ಗ್ಲಾಮರಸ್ ಆಗಿದೆ'' ಎಂದು ಗ್ಲಾಮರ್ ಬಗ್ಗೆ ರಚಿತಾ ತಮ್ಮ ವ್ಯಾಖ್ಯಾನ ನೀಡಿದರು.

ಗ್ಲಾಮರ್ ಎಂದರೆ ಬಿಕಿನಿ ಅಲ್ಲ

''ಗ್ಲಾಮರ್ ಎಂದರೆ ಅನೇಕರು ಬಿಕಿನಿ ತೊಡುವುದು.. ಮೈಮಾಟ ತೋರಿಸುವುದು ಎಂದು ತಿಳಿದಿದ್ದಾರೆ. ಆದರೆ ನನ್ನ ಪ್ರಕಾರ ಗ್ಲಾಮರ್ ಅಂದರೆ ಅದಲ್ಲ. ನನ್ನ ಪ್ರಕಾರ ಗ್ಲಾಮರ್ ಅಂದರೆ ಅಂದವಾಗಿ ಇರುವುದು. ನಾವು ತೊಡುವ ಬಟ್ಟೆಯಲ್ಲಿ ಕಮ್ಫರ್ಟ್ ಆಗಿ ಇರುವುದು'' - ರಚಿತಾ ರಾಮ್, ನಟಿ.

ಮಫ್ತಿ ಪೊಲೀಸ್ ಆಗಲಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್!

ಬಿಕಿನಿ ಹಾಕುತ್ತೇನೆ ಅನಿಸುವುದಿಲ್ಲ

''ನನಗೆ ನಾನು ಮುಂದೆಯೂ ಬಿಕಿನಿ ಹಾಕುತ್ತೇನೆ ಎಂದು ಅನಿಸುವುದಿಲ್ಲ. ಅಲ್ಲದೆ ನಾನು ಬಿಕಿನಿ ತೊಟ್ಟು ಸ್ಕ್ರೀನ್ ಮೇಲೆ ಕಮ್ಫರ್ಟ್ ಆಗಿ ಕಾಣುವುದಿಲ್ಲ. ಆದರೆ ನಾನು ತೊಡುವ ಬಟ್ಟೆಗಳಲ್ಲಿಯೇ ಗ್ಲಾಮರ್ ಆಗಿ ಕಾಣಿಸಿಕೊಳ್ಳಬಹುದು'' - ರಚಿತಾ ರಾಮ್, ನಟಿ.

ಕಡೆಗೂ ಮದುವೆ, ಗಾಸಿಪ್ ಬಗ್ಗೆ ಮೌನ ಮುರಿದ ರಚಿತಾ ರಾಮ್.!

ರಕ್ಷಿತಾ, ರಮ್ಯಾ, ರಾಧಿಕಾ

''ನನ್ನ ಪ್ರಕಾರ ಕನ್ನಡದ ನಟಿಯರಲ್ಲಿ ರಕ್ಷಿತಾ ಪ್ರೇಮ್, ರಮ್ಯಾ, ರಾಧಿಕಾ ಕುಮಾರಸ್ವಾಮಿ ಈ ಮೂವರು ತುಂಬ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ನಟಿಯರು'' - ರಚಿತಾ ರಾಮ್, ನಟಿ.

English summary
Kannada actress Rachita Ram spoke about Bikini. ನಟಿ ರಚಿತಾ ರಾಮ್ ಇದೀಗ ಬಿಕಿನಿ ಬಗ್ಗೆ ಮಾತನಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada