For Quick Alerts
  ALLOW NOTIFICATIONS  
  For Daily Alerts

  ಸುಮಲತಾ ಗೆಲುವಿನ ಬಗ್ಗೆ ರಚಿತಾ ರಾಮ್ ಮಾತು

  |
  ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ರಚಿತಾ ರಾಮ್ ಹೇಳಿದ್ದೇನು? | FILMIBEAT KANNADA

  ಮಂಡ್ಯದ ನೂತನ ಎಂ ಪಿ ಯಾಗಿ ನಟಿ ಸುಮಲತಾ ಅಂಬರೀಶ್ ಆಯ್ಕೆ ಆಗಿದ್ದಾರೆ. ಇದು ಚಿತ್ರರಂಗದ ಅವರ ಸ್ನೇಹಿತರಿಗೆ, ಹಿತೈಷಿಗಳಿಗೆ ಸಂತಸ ನೀಡಿದೆ.

  ನಟಿ ರಚಿತಾ ರಾಮ್ ಸುಮಲತಾರಿಗೆ ಶುಭ ಹಾರೈಸಿದ್ದಾರೆ. ಮಂಡ್ಯ ಜನರ ಕಷ್ಟವನ್ನು ಅವರು ನಿವಾರಿಸುತ್ತಾರೆ ಎನ್ನುವ ಭರವಸೆ ಇದೆ ಎಂದಿದ್ದಾರೆ. ರಚಿತಾ ರಾಮ್ 'ಐ ಲವ್ ಯೂ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಮಾತನ್ನು ಹೇಳಿದ್ದಾರೆ.

  ಈ ಫೋಟೋ ನೋಡಿ ಸುಮಲತಾ ಮಾಡಿದ ಕಾಮೆಂಟ್ ಏನು?

  ಅಂಬರೀಶ್ ಕುಟುಂಬದ ಆಪ್ತರಲ್ಲಿ ರಚಿತಾ ರಾಮ್ ಸಹ ಒಬ್ಬರು. ಇನ್ನೊಂದು ಕಡೆ ರಚಿತಾ ರಾಮ್ ಕೆರಿಯರ್ ಶುರು ಆಗಿದ್ದು, ಕೂಡ ಅಂಬರೀಶ್ ಹಾಗೂ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ.

  ಒಬ್ಬ ಹೆಣ್ಣು ಮಗಳಾಗಿ, ಅನೇಕ ಕಷ್ಟಗಳ ನಡುವೆ ಮಂಡ್ಯ ಚುನಾವಣೆ ಗೆದ್ದ ಸುಮಲತಾರ ಧೈರ್ಯವನ್ನು ರಚಿತಾ ರಾಮ್ ಮೆಚ್ಚಿಕೊಂಡಿದ್ದಾರೆ. ಮುಂದೆ ಓದಿ..

  ಎಲ್ಲವನ್ನು ಗೆದ್ದು ಮಂಡ್ಯದ ಎಪಿ ಆಗಿದ್ದಾರೆ

  ಎಲ್ಲವನ್ನು ಗೆದ್ದು ಮಂಡ್ಯದ ಎಪಿ ಆಗಿದ್ದಾರೆ

  ''ಮೊದಲು ಸುಮ ಮೇಡಮ್ ಗೆ ಶುಭಕೋರಲು ಇಷ್ಟ ಪಡುತ್ತೇನೆ. ಒಬ್ಬ ಹೆಣ್ಣು ಮಗಳಾಗಿ ತುಂಬ ಧೈರ್ಯದಿಂದ, ತುಂಬ ತಾಳ್ಮೆ ಇಟ್ಟುಕೊಂಡು ಚುನಾವಣೆ ಗೆದ್ದಿದ್ದಾರೆ. ಒಂದು ಹೆಣ್ಣುಮಗಳು ಎಷ್ಟೇ ಕಷ್ಟ ಬಂದರೂ ಎಲ್ಲವನ್ನು ಗೆದ್ದು ಮಂಡ್ಯದ ಎಪಿ ಆಗಿದ್ದಾರೆ.'' ಎಂದು ಸುಮಲತಾರಿಗೆ ರಚಿತಾ ವಿಶ್ ಮಾಡಿದ್ದಾರೆ.

  ಅವರು ಒಳ್ಳೆಯ ಕೆಲಸ ಮಾಡುತ್ತಾರೆ

  ಅವರು ಒಳ್ಳೆಯ ಕೆಲಸ ಮಾಡುತ್ತಾರೆ

  ''ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಮಂಡ್ಯ ಜನರ ಕಷ್ಟಗಳನ್ನು ಬಗೆಹರಿಸುತ್ತಾರೆ. ಅವರ ಆಸೆಗಳನ್ನು ಈಡೇರಿಸುತ್ತಾರೆ ಎನ್ನುವ ಭರವಸೆ ಇದೆ. ಸುಮ ಮೇಡಮ್ ಗೆ ಒಳ್ಳೆದಾಗಲಿ, ದೇವರ ಆಶೀರ್ವಾದ ಅವರ ಮೇಲೆ ಇರಲಿ.'' ಎಂದು ಸುಮಲತಾ ಮೇಲೆ ಭರವಸೆಯ ಮಾತುಗಳನ್ನು ಆಡಿದ್ದಾರೆ.

  ನಿಖಿಲ್ ಮತ್ತು ಅಭಿಷೇಕ್ ನಡೆಯ ಬಗ್ಗೆ ಸುಮಲತಾ ಹೇಳಿದ್ದೇನು?

  'ಅಮರ್' ಚಿತ್ರದ ಚಿತ್ರೀಕರಣದ ಸೆಟ್

  'ಅಮರ್' ಚಿತ್ರದ ಚಿತ್ರೀಕರಣದ ಸೆಟ್

  ಇದೇ ವೇಳೆ ಅಂಬರೀಶ್ ಅವರ ಬಗ್ಗೆ ಮಾತನಾಡಿದ ರಚಿತಾ ''ನಾನು ಅಂಬಿ ಸರ್ ಅವರ ದೊಡ್ಡ ಅಭಿಮಾನಿ. ಅವರ ಜೊತೆಗೆ ಎರಡು ಸಿನಿಮಾ ಮಾಡಿದ್ದೇನೆ. ನನ್ನ ಮೊದಲ ಚಿತ್ರ ಅವರ ಜೊತೆಗೆ ಮಾಡಿದ್ದೇನೆ. 'ಅಮರ್' ಚಿತ್ರದ ಚಿತ್ರೀಕರಣ ಸೆಟ್ ಹೋದಾಗ ಅವರ ಜೊತೆಗೆ ಕೊನೆಯ ಬಾರಿ ಮಾತನಾಡಿದ್ದೆ'' ಎಂದರು.

  'ಅಮರ್' ಚಿತ್ರದ ಹಾಡಿನಲ್ಲಿ ರಚಿತಾ

  'ಅಮರ್' ಚಿತ್ರದ ಹಾಡಿನಲ್ಲಿ ರಚಿತಾ

  ಅಭಿಷೇಕ್ ಅಂಬರೀಶ್ ನಟನೆಯ 'ಅಮರ್' ಸಿನಿಮಾಧ ಕೊಡವ ಹಾಡಿನಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಹಾಡಿನಲ್ಲಿ ಯಾಕೆ ಬರುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಸಿನಿಮಾ ನೋಡಿದ ಅನೇಕರಿಗೆ ಆ ಪ್ರಶ್ನೆ ಮೂಡುತ್ತದೆ. ಇನ್ನು 'ಅಮರ್' ಚಿತ್ರದ ಯಶಸ್ಸಿಗೆ ರಚಿತಾ ರಾಮ್ ಶುಭ ಕೋರಿದ್ದಾರೆ. ಅಭಿಷೇಕ್ ರನ್ನು ಹೊಗಳಿದ್ದಾರೆ.

  ''ಇದು ನೀವು ಸೃಷ್ಟಿಸಿದ ಇತಿಹಾಸ' : ಗೆಲುವನ್ನು ಜನರಿಗೆ ಅರ್ಪಿಸಿದ ಸುಮಲತಾ

  English summary
  Actor Rachita Ram wishes to Sumalatha for her victory in mandya lok sabha election

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X