Just In
Don't Miss!
- Automobiles
ಮಾರಾಟದಲ್ಲಿ ಹೊಸ ಮೈಲಿಗಲ್ಲು ದಾಟಿದ ಟಾಟಾ ಆಲ್ಟ್ರೋಜ್ ಕಾರು
- News
ಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂ
- Finance
ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಕ್ಷಿತಾ ಪ್ರೇಮ್ ನಿರ್ಮಾಣದ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ
ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ರಚಿತಾ ರಾಮ್ ಸದ್ಯ ಐ ಲವ್ ಯು ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ ಒಂದೆರಡು ಸಿನಿಮಾಗಳ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಚಿತಾ ಕಡೆಯಿಂದ ಮತ್ತೊಂದು ಬ್ರೇಂಕಿಂಗ್ ಸುದ್ದಿ ಹೊರ ಬಿದ್ದಿದೆ.
ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿಯಾಗಿರುವ ಡಿಂಪಲ್ ಕ್ವೀನ್ ಈಗ ನಟಿ ಮತ್ತು ನಿರ್ಮಾಪಕಿ ರಕ್ಷಿತಾ ನಿರ್ಮಾಣದ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಹೌದು, ರಕ್ಷಿತಾ ನಿರ್ಮಾಣದ ಅವರ ಪತಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಏಕ್ ಲವ್ ಯಾ' ಚಿತ್ರೀಕರಣ ಪ್ರಾರಂಭಸಿದ ನಿರ್ದೇಶಕ ಪ್ರೇಮ್
ರಕ್ಷಿತಾ ಪ್ರೇಮ್ ಸಹೋದರ ರಾಣಾ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಏಕ್ ಲವ್ ಯಾ' ಸಿನಿಮಾದಲ್ಲಿ ರಚಿತಾ ರಾಮ್ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ರಚಿತಾ ಮಾಸ್ ಲುಕ್ ನಲ್ಲಿ ಮಿಂಚಲಿದ್ದಾರಂತೆ. ಟಾಮ್ ಬಾಯ್ ಪಾತ್ರದಲ್ಲಿ ರಚಿತಾ ಕಾಣಿಸಿಕೊಳ್ಳುತ್ತಿದ್ದಾರಂತೆ.
ಪ್ರೇಮ್ ಅವರ ನಿರ್ದೇಶನ ಮತ್ತು ರಕ್ಷಿತಾ ಅವರ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸಲು ಸಖತ್ ಎಕ್ಸಾಯಿಟ್ ಆಗಿದ್ದಾರಂತೆ. ಚಿತ್ರದಲ್ಲಿ ರಚಿತಾ ಎಂಟ್ರಿ ದೃಶ್ಯ ತುಂಬಾ ಇಂಟ್ರಸ್ಟಿಂಗ್ ಆಗಿರಲಿದೆಯಂತೆ. ಈ ದೃಶ್ಯಕ್ಕೆ ಚಿತ್ರಾಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವ ಕುತೂಹಲ ಬುಲ್ ಬುಲ್ ಬೆಡಗಿಗಿದೆಯಂತೆ.
ರಚಿತಾ ಅವರನ್ನು ಪ್ರೇಮ್ ಗೌಡ ಎಂದು ಕರೆಯುತ್ತಾರಂತೆ. ರಚಿತಾ ಪ್ರೇಮ್ ಅವರಿಗೆ ಗೌಡ್ರೆ ಸರ್ ಎಂದು ಕರೆಯುತ್ತಾರಂತೆ. ದಿ ವಿಲನ್ ಚಿತ್ರದಲ್ಲಿ ರಚಿತಾ ಒಂದು ಗೆಸ್ಟ್ ಪಾತ್ರದಲ್ಲಿ ಮಿಂಚಿದ್ದಾರೆ. ಪ್ರೇಮ್ ಜೊತೆ ಕೆಲಸ ಮಾಡಿದ ಅನುಭವ ಇದೆಯಂತೆ. ಮತ್ತೆ ಪ್ರೇಮ್ ಸಿನಿಮಾದಲ್ಲಿ ಅಭಿನಯಿಸಲು ಸಂತಸವಾಗಿದೆಯಂತೆ. ಇದೇ ತಿಂಗಳು ಕೊನೆಯಲ್ಲಿ ರಚಿತಾ 'ಏಕ್ ಲವ್ ಯಾ' ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ.