»   » ರಾಧಿಕಾ ಕುಮಾರಸ್ವಾಮಿಗೆ ಹ್ಯಾಪಿ ಬರ್ತ್ ಡೇ

ರಾಧಿಕಾ ಕುಮಾರಸ್ವಾಮಿಗೆ ಹ್ಯಾಪಿ ಬರ್ತ್ ಡೇ

Posted By:
Subscribe to Filmibeat Kannada

'ಸ್ವೀಟಿ' ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿರುವ ರಾಧಿಕಾ ಕುಮಾರಸ್ವಾಮಿ ಪಾಲಿಗಿಂದು (ನ. 12) ಮರೆಯಲಾಗದ ದಿನ. ಒಂದೆಡೆ ನವೆಂಬರ್ 12ರಂದು ಆಕೆಯ ಬರ್ತಡೇ ಆದರೆ ಇನ್ನೊಂದೆಡೆ ನರಕ ಚತುರ್ದಶಿ ಜತೆಗೆ ಹುಟ್ಟುಹಬ್ಬವನ್ನು 'ಸ್ವೀಟಿ' ಚಿತ್ರತಂಡದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಕಳೆದ ಬಾರಿ ಮಗಳು ಶಮಿಕಾ ಚಿಕ್ಕವಳಾಗಿದ್ದರಿಂದ ಪಟಾಕಿ ಹೊಡೆದು ದೀಪಾವಳಿ ಹಬ್ಬ ಆಚರಿಸಲು ಆಗಿರಲಿಲ್ಲ. ಈ ಬಾರಿ ಅವಳ ಜೊತೆ ಸೇರಿ ದೀಪಾವಳಿ ಹಬ್ಬವನ್ನು ಖುಷಿಯಿಂದ ಆಚರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನವೆಂಬರ್ 12, 1986ರಲ್ಲಿ ಜನಿಸಿರುವ ರಾಧಿಕಾಗೆ ಇಂದು 26ನೇ ಹುಟ್ಟಿದ ಹಬ್ಬ.

ನನ್ನ ಹುಟ್ಟು ಹಬ್ಬಕ್ಕೆ ಸರಿಯಾಗಿ ಈ ಬಾರಿ ದೀಪಾವಳಿ ಹಬ್ಬ ಬಂದಿದೆ, ಇದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದೂ ರಾಧಿಕಾ ಹೇಳಿದರು.

ಸ್ವೀಟಿ ಚಿತ್ರತಂಡದೊಂದಿಗೆ ಹಬ್ಬ ಮತ್ತು ಬರ್ತಡೇ ಆಚರಿಸಿಕೊಳ್ಳಲು ಕಾತುರನಾಗಿದ್ದೇನೆ. ಹಾಗಾಗಿ ಈ ಬಾರಿಯ ಬರ್ತಡೇ ನನಗೆ ಮರೆಯಲಾಗದ ದಿನ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

ಬಹಳ ದಿನಗಳ ಅಂತರದ ನಂತರ ರಾಧಿಕಾ 'ಲಕ್ಕಿ' ಚಿತ್ರ ನಿರ್ಮಿಸಿದ್ದರು. ಯಶ್, ರಮ್ಯಾ ಜೋಡಿಯ ಆ ಚಿತ್ರ ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು. ಅದಾದ ನಂತರ ಈಗ ರಾಧಿಕಾ 'ಸ್ವೀಟಿ' ಚಿತ್ರದಲ್ಲಿ ನಟ ಆದಿತ್ಯಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸ್ವೀಟಿ ಚಿತ್ರದಲ್ಲಿ ಸಾಕ್ಷಾತ್ ಅಪ್ಸರೆಯಂತೆ ಕಂಗೊಳಿಸುತ್ತಿರುವ ರಾಧಿಕಾಗೆ ಹುಟ್ಟುಹಬ್ಬದ ಶುಭಾಶಯಗಳು.

English summary
Actress Radhika Kumaraswamy celebrates her 26th Birth day on November 12th. She is celebrating birth day with Kannada movie 'Sweety' team. Fans of Radhika wish her a great birth day.
Please Wait while comments are loading...