For Quick Alerts
  ALLOW NOTIFICATIONS  
  For Daily Alerts

  ಮತ್ತೆ ರಾಧಿಕಾ ನಟನೆ ಸಿನಿಮಾಗೆ ಗ್ರೀನ್ ಸಿಗ್ನಲ್

  |

  ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬುದು ಈಗ ಹಳೆಯ ಸುದ್ದಿಯಾಗಿದೆ. ಲೇಟೆಸ್ಟ್ ಸುದ್ದಿ ಏನೆಂದರೆ, ರಾಧಿಕಾ ನಟಿಸಲಿರುವ ಚಿತ್ರ ಇನ್ನೇನು ಎರಡೇ ತಿಂಗಳುಗಳೊಳಗೆ ಲಾಂಚ್ ಆಗಲಿದೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ನಿರ್ದೇಶಕರು ವಿಜಯಲಕ್ಷ್ಮೀ ಸಿಂಗ್. ಅವರ ಕಥೆ ರಾಧಿಕಾಗೆ ಆಲ್ಮೋಸ್ಟ್ ಒಪ್ಪಿಗೆಯಾಗಿದ್ದು ಇನ್ನಷ್ಟು ತಿದ್ದುಪಡಿಗೆ ಸೂಚಿಸಲಾಗಿದೆ.

  ಈ ವಿಷಯವನ್ನು ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಕೂಡ ಹೌದೆಂದು ಒಪ್ಪಿದ್ದಾರೆ. "ನಾನು ಹೇಳಿದ ಕಥೆ ರಾಧಿಕಾ ಅವರಿಗೆ ಒಪ್ಪಿಗೆಯಾಗಿದ್ದು ಹೌದು. ನಿರ್ದೇಶಿಸುವ ಕುರಿತು ಮಾತುಕತೆ ಕೂಡ ಆಗಿದೆ. ಆದರೆ ಅದಿನ್ನೂ ಕನ್ಫರ್ಮ್ ಆಗಿಲ್ಲ. ಹೀಗಾಗಿ ಈಗಲೇ ಹೌದು ಎಂದು ಹೇಳಲು ಸಾಧ್ಯವಿಲ್ಲ. ಅದಿನ್ನೂ ಪಕ್ಕಾ ಆಗಬೇಕಿದೆ" ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ ವಿಜಯಲಕ್ಷ್ಮೀ ಸಿಂಗ್.

  ರಾಧಿಕಾ ನಟನೆಯ ಚಿತ್ರ ಬರುವ ಬಗ್ಗೆ ಸ್ವತಃ ರಾಧಿಕಾ ಹಾಗೂ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಒಪ್ಪಿಕೊಳ್ಳುತ್ತಾರಾದರೂ ಅದಿನ್ನೂ ದೂರವಿದೆ ಎಂದು ಹೇಳಿರುವುದು ಪಕ್ಕಾ ಆದಂತಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಆದರೆ ಇತ್ತ ರಾಧಿಕಾ ಮಗಳು ಶಮಿಕಾ ಎಂಟರ್ ಪ್ರೈಸಸ್ ಬ್ಯಾನರ್ ಅಡಿ ನಿರ್ಮಾಪಕಿಯಾಗಿ ರಾಧಿಕಾ ಇನ್ನೊಂದು ಚಿತ್ರವನ್ನು ಸದ್ಯದಲ್ಲೇ ಶುರುಮಾಡಲಿದ್ದಾರೆ.

  ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಶುರುವಾಗಲಿರುವ ಚಿತ್ರಕ್ಕೂ 'ಲಕ್ಕಿ' ನಟ ಯಶ್ ಅವರೇ ನಾಯಕರು. ನಾಯಕ ಯಶ್ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಮುಗಿದಿದೆ ಎಂಬ ಮಾಹಿತಿ ಬಂದಿದೆ. ಆದರೆ ಯಶ್ ಜೊತೆ ನಾಯಕಿಯಾಗಿ ರಾಧಿಕಾ ನಟಿಸುತ್ತಿಲ್ಲವಂತೆ. ಅದಕ್ಕೆ ಬೇರೊಬ್ಬ ನಾಯಕಿ ಹುಡುಕಾಟ ನಡೆದಿದೆ. ಒಟ್ಟಿನಲ್ಲಿ ನಟನೆ ಹಾಗೂ ನಿರ್ಮಾಣದ ಮೂಲಕ ಮತ್ತೆ ರಾಧಿಕಾ ಚಿತ್ರರಂಗದಲ್ಲಿ ಸಕ್ರಿಯರಾಗಲಿದ್ದಾರೆ. ಅವರ ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actress Radhika Kumaraswamy upcoming movie news again buzz in Sandalwood. According to the sources, Director Vijayalakshmi Singh to direct this movie after Two Months. One more news that, after Lucky movie, another movie of Yash to produce by Radhika under Shamika Enterprises Banner. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X