»   » ರಾಧಿಕಾ ಕುಮಾರಸ್ವಾಮಿ ಬೇರೆಲ್ಲೂ ಸಿಗದ ಚಿತ್ರಗಳು!

ರಾಧಿಕಾ ಕುಮಾರಸ್ವಾಮಿ ಬೇರೆಲ್ಲೂ ಸಿಗದ ಚಿತ್ರಗಳು!

Posted By:
Subscribe to Filmibeat Kannada

ಆಗಿನ ರಾಧಿಕಾ ಅವರನ್ನು ಈಗಿನ ರಾಧಿಕಾ ಕುಮಾರಸ್ವಾಮಿ ಅವರನ್ನು ನೋಡಿದರೆ...ಮದುವೆಯಾಗಿದೆ, ಒಂದು ಮಗೂನೂ ಆಗಿದೆ ಎಂಬುದನ್ನು ಬಿಟ್ಟರೆ ಉಳಿದಂತೆ ಯಾವುದೇ ವ್ಯತ್ಯಾಸ ಕಾಣಸಿಗುವುದಿಲ್ಲ. ಅವರೇನಾದರೂ ಸಂತೂರ್ ಸೋಪು ಬಳಸುತ್ತಾರೋ ಏನೋ ಗೊತ್ತಿಲ್ಲ.

ಬಹುಶಃ ಅವರ ವಯಸ್ಸು ಒಂದೇ ಕಡೆ 20ಕ್ಕೆ ನಿಂತು ಹೋಗಿದೆ ಅನ್ನಿಸುತ್ತದೆ. ಈಗ ಅವರ ವಯಸ್ಸು ಇನ್ನೂ 26ರ ಪ್ರಾಯ. ಸದ್ಯಕ್ಕೆ ಅವರು ಸ್ವೀಟಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಅಡಿಬರಹ ನನ್ನ ಜೋಡಿ ಎಂಬುದು.

ಅಂಬರೀಶ್ ಹಾಗೂ ಶಂಕರ್ ನಾಗ್ ಮುಖ್ಯಭೂಮಿಕೆಯಲ್ಲಿದ್ದ 'ಭರ್ಜರಿ ಬೇಟೆ' ಚಿತ್ರದ ಸ್ವೀಟಿ ನನ್ನ ಜೋಡಿ ಎಂಬ ಹಾಡನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಒಂದು ಹಂತಕ್ಕೆ ಬಂದು ನಿಂತಿದೆ.

ಚಕಿತಗೊಳಿಸುವ ರಾಧಿಕಾ ಫೋಟೋಗಳು

ಈ ಚಿತ್ರದ ಹೊಚ್ಚ ಹೊಸ ಫೋಟೋಗಳು ನಿಮ್ಮ ನೆಚ್ಚಿನ ಜಾಲತಾಣ ಒನ್ಇಂಡಿಯಾ ಕನ್ನಡಕ್ಕೆ ಲಭ್ಯವಾಗಿವೆ. ರಾಧಿಕಾ ಕುಮಾರಸ್ವಾಮಿ ಅವರ ಒಂದೊಂದೇ ಫೋಟೋಗಳನ್ನು ಸರಿಸುತ್ತಾ ಸಾಗಿದರೆ ಖಂಡಿತ ಚಕಿತರಾಗುತ್ತೀರಾ. ರಾಧಿಕಾ ಹಿಂದಿಗಿಂತಲೂ ಈಗ ಇನ್ನಷ್ಟು ಸೊಗಸಾಗಿ ಕಾಣಿಸುತ್ತಿದ್ದಾರೆ.

ಮನವೇ ತೆರೆಸು ಎದೆಯಾ ಕದವಾ

ಎಚ್.ಡಿ.ಕುಮಾರಸ್ವಾಮಿ ಅರ್ಪಿಸುವ, ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ `ಸ್ವೀಟಿ' ಚಿತ್ರಕ್ಕಾಗಿ ಕವಿರಾಜ್ ಬರೆದಿರುವ "ಮನವೇ ತೆರೆಸು ಎದೆಯಾ ಕದವಾ ಮರಳಿ ಕೊಡಿಸು ಕಳೆದಾ ಒಲವಾ" ಎಂಬ ಹಾಡಿನ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ.

ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಚಿತ್ರ

ರಾಧಿಕಾ ಹಾಗೂ ಆದಿತ್ಯ ಅವರು ಅಭಿನಯಿಸಿದ ಈ ಹಾಡಿಗೆ ಮದನ್-ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಜಯಲಕ್ಷ್ಮಿಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುಜ್ ಜನ್ಯ ಸಂಗೀತ ನೀಡಿದ್ದಾರೆ.

ಸ್ವೀಟಿ ತಾಂತ್ರಿಕ ಬಳಗದ ವಿವರಗಳು

ಅಜಯ್ ವಿನ್ಸಂಟ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಇಮ್ರಾನ್, ಮುರಳಿ ನೃತ್ಯ ನಿರ್ದೇಶನ `ಸ್ವೀಟಿ ನನ್ನ ಜೋಡಿ' ಚಿತ್ರಕ್ಕಿದೆ.

ಪಾತ್ರವರ್ಗದಲ್ಲಿ ಯಾರ್‍ಯಾರಿದ್ದಾರೆ?

ರವಿರಾಜ್ ಹಾಗೂ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಆದಿತ್ಯ, ರಾಧಿಕಾ, ರಮ್ಯಕೃಷ್ಣ, ಗಿರೀಶ್ ಕಾರ್ನಾಡ್, ಸಾಧುಕೋಕಿಲಾ, ಉಮಾಶ್ರೀ, ತಬಲನಾಣಿ, ಶರತ್‍ಲೋಹಿತಾಶ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಧಿಕಾ ಸೆಕೆಂಡ್ ಇನ್ನಿಂಗ್ಸ್ ಚಿತ್ರ

ಈ ಚಿತ್ರದ ರಾಧಿಕಾ ಅವರ ಪಾಲಿಗೆ ಎರಡನೇ ಇನ್ನಿಂಗ್ಸ್ ಎಂದೇ ಹೇಳಬೇಕು. ಹಾಗಾಗಿಯೇ ಅವರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೇ ಮತ್ತೆ ಬಣ್ಣ ಹಚ್ಚಿದ್ದಾರೆ. ಪ್ರತಿಯೊಂದು ಹಂತದಲ್ಲೂ ಜಾಗ್ರತೆ ವಹಿಸಿರುವುದನ್ನು ಫೋಟೋಗಳಲ್ಲೇ ಕಾಣಬಹುದು.

ಚಿತ್ರದ ಬಗ್ಗೆ ಸುಳಿವು ಬಿಡದ ರಾಧಿಕಾ

ಚಿತ್ರದ ಶೀರ್ಷಿಕೆ ನೋಡಿದರೆ ಇದೊಂದು ಹೀರೋಯಿನ್ ಓರಿಯಂಟೆಡ್ ಸಿನಿಮಾ ಎಂಬ ಅನುಮಾನ ಬರುತ್ತದೆ. ಆದರೆ ಚಿತ್ರದ ನಾಯಕ ನಟ ಆದಿತ್ಯ ಅವರಿಗೂ ಜಾಸ್ತಿ ಸ್ಕೋಪ್ ಕೊಟ್ಟಿರುವುದು ನಾಯಕಿ ಪ್ರಧಾನ ಚಿತ್ರ ಎಂಬ ಅನುಮಾನಕ್ಕೆ ಬ್ರೇಕ್ ಬೀಳುತ್ತದೆ.

ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ

ಅಂದಹಾಗೆ ಇದು ಯಾವ ರೀತಿ ಸಿನಿಮಾ. ರಾಧಿಕಾ ಅವರೇ ಹೇಳುವಂತೆ ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ. ಕಥೆ ಏನು ಎಂದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆಯವರೆಗೂ ಕಾಯಲೇಬೇಕು.

ಮಾಡ್ ಅಂಡ್ ಗ್ಲಾಮರಸ್ ರಾಧಿಕಾ

ತುಂಬಾ ಮಾಡ್ ಹಾಗೂ ಗ್ಲಾಮರಸ್ ಕಾಸ್ಟ್ಯೂಮ್ ಗಳಲ್ಲಿ ರಾಧಿಕಾ ಕಾಣಿಸಿಕೊಳ್ಳುವ ಮೂಲಕ ಅವರ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದ್ದಾರೆ. ಅವರು ಮತ್ತೆ ಬಣ್ಣ ಹಚ್ಚಬೇಕು ಎಂದು ಆಕೆಯ ಕೋಟ್ಯಾಂತರ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಈಗ ಸ್ವೀಟಿ ಮೂಲಕ ಅವರಿಗೆ ಉತ್ತರ ನೀಡುತ್ತಿದ್ದಾರೆ.

ಅಭಿಮಾನಿಗಳ ಪ್ರೀತಿಗೆ ರಾಧಿಕಾ ಕಾಣಿಕೆ

ಸ್ವೀಟಿ ಪಾತ್ರದ ಬಗ್ಗೆ ಎಲ್ಲರಿಗೂ ಬಹಳಷ್ಟು ನಿರೀಕ್ಷೆಗಳಿವೆ. ಅಭಿಮಾನಿಗಳು ಯಾವ ಪಾತ್ರದಲ್ಲಿ ನನ್ನನ್ನು ಕಾಣಬಯಸುತ್ತಾರೆ ಎಂದು ನನಗೆ ಗೊತ್ತು. ಅಂಥದ್ದೇ ಪಾತ್ರದಲ್ಲಿ ಕಾಣಿಸುತ್ತಿದ್ದೇನೆ. ಮತ್ತೆ ಬಣ್ಣ ಹಚ್ಚುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅಭಿಮಾನಿಗಳ ಪ್ರೀತಿಗೆ ಇದು ನನ್ನ ಕಾಣಿಕೆ ಎನ್ನುತ್ತಾರೆ ರಾಧಿಕಾ.

English summary
Actress Radhika Kumaraswamy's exclusive photos from her forthcoming film 'Sweety' directed by Vijayalakshmi Singh. Starring Adithya and Radhika in the lead roles. The title and caption have been taken from the popular track, 'Sweety nanna jodi...' from the film, Bharjari Bete.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada