For Quick Alerts
  ALLOW NOTIFICATIONS  
  For Daily Alerts

  ತಾಯಿ ಪಾತ್ರ ತಿರಸ್ಕರಿಸಿದ ರಾಧಿಕಾ ಪಂಡಿತ್‌: ಅಭಿನಯಕ್ಕೆ ಗುಡ್ ಬೈ?

  |

  ಕಿರುತೆರೆ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದು ದೊಡ್ಡ ಸ್ಟಾರ್‌ಗಳಾಗಿ ಮಿಂಚಿದವರು ಹಲವರು. ಅದರಲ್ಲಿ ನಟಿ ರಾಧಿಕಾ ಪಂಡಿತ್‌ ಕೂಡ ಒಬ್ಬರು. ಕನ್ನಡ ಚಿತ್ರರಂಗಕ್ಕೆ ನಾಯಕಿ ಆಗಿ ಎಂಟ್ರಿ ಕೊಟ್ಟ ಕೆಲವೇ ಕಡಿಮೆ ಸಮಯದಲ್ಲಿಯೇ ರಾಧಿಕಾ ಪಂಡಿತ್ ಅವರು ಸ್ಟಾರ್ ನಟಿ ಎನಿಸಿಕೊಂಡರು. ಸದ್ಯ ಬಿಗ್ ಸ್ಕ್ರೀನ್‌ನಿಂದ ದೂರ ಉಳಿದಿರುವ ನಟಿ ರಾಧಿಕಾ ಪಂಡಿತ್ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ.

  ರಾಧಿಕಾ ಪಂಡಿತ್‌ ಅವರು ಮದುವೆ ಬಳಿಕ ತಮ್ಮ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ಮನೆ ಮಕ್ಕಳು ಅಂತಾ ಸದಾ ಬ್ಯುಸಿ ಆಗಿ ಇರ್ತಾರೆ. ಅವರು ತಮ್ಮ ನಿತ್ಯ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

  ಸಿನಿಮಾದಿಂದ ರಾಧಿಕಾ ಅವರು ದೂರ ಉಳಿದರೂ ಕೂಡ, ಸಿನಿಮಾ ಅವರನ್ನು ಬಿಡುತ್ತಿಲ್ಲ. ರಾಧಿಕಾ ಅವರಿಗೆ ಈಗಲೂ ಸಾಕಷ್ಟು ಸಿನಿಮಾ ಆಫರ್‌ಗಳು ಬರ್ತಿವೆಯಂತೆ. ಆದರೆ ರಾಧಿಕಾ ಅವರೇ ಆ ಆಫರ್‌ಗಳನ್ನು ತಿರಸ್ಕರಿಸುತ್ತಿದ್ದಾರಂತೆ. ಹಾಗೆ ಅವರು ತಿರಸ್ಕರಿಸಿದ ಪಾತ್ರದ ಮತ್ತು ಸಿನಿಮಾ ಸುದ್ದಿ ಆಗುತ್ತಿದೆ.

  ತಾಯಿಯ ಪಾತ್ರ ಒಪ್ಪಿಕೊಳ್ಳದ ನಟಿ ರಾಧಿಕಾ ಪಂಡಿತ್!

  ತಾಯಿಯ ಪಾತ್ರ ಒಪ್ಪಿಕೊಳ್ಳದ ನಟಿ ರಾಧಿಕಾ ಪಂಡಿತ್!

  ಕನ್ನಡದ 'ಡಿಎನ್ಎ' ಸಿನಿಮಾ ತಂಡ ರಾಧಿಕಾ ಪಂಡಿತ್ ಅವರನ್ನು ಅರಸಿ ಬಂದಿತ್ತು. ಈ ಚಿತ್ರದಲ್ಲಿ ತಾಯಿ ಮಗು ಪಾತ್ರ ಪ್ರಮುಖವಾಗಿದ್ದು. ಹಾಗಾಗಿ ಈ ಸಿನಿಮಾದಲ್ಲಿ ತಾಯಿಯ ಪಾತ್ರ ಮಾಡುವಂತೆ ರಾಧಿಕಾ ಅವರ ಬಳಿ ಕೇಳಲಾಗಿದೆ. ಈ ಕಥೆ ರಾಧಿಕಾ ಪಂಡಿತ್ ಅವರಿಗೆ ತುಂಬಾನೆ ಇಷ್ಟ ಆಗಿತ್ತಂತೆ. ಆದರೆ ತಾಯಿಯ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ರಾಧಿಕಾ ಪಂಡಿತ್ ಅವರು ಹೇಳಿದರು ಎನ್ನುವುದು ಬಹಿರಂಗ ಆಗಿದೆ. ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಮಾಡಬೇಕಿದ್ದ, ತಾಯಿಯ ಪಾತ್ರವನ್ನು ನಟಿ 'ಎಸ್ತರ್ ನರೋನಾ' ಮಾಡಿದ್ದಾರೆ.

  ಆರು ವರ್ಷಗಳಿಂದ ಅಭಿನಯದಿಂದ ದೂರ ಉಳಿದ ರಾಧಿಕಾ!

  ಆರು ವರ್ಷಗಳಿಂದ ಅಭಿನಯದಿಂದ ದೂರ ಉಳಿದ ರಾಧಿಕಾ!

  ರಾಧಿಕಾ ಪಂಡಿತ್ ಸಿನಿಮಾ ಕ್ಷೇತ್ರ ಬಿಟ್ಟು ಸುಮಾರು 6 ವರ್ಷಗಳೇ ಕಳೆದಿದೆ. 2016ರಲ್ಲಿ ಯಶ್ ಅವರನ್ನು ವಿವಾಹವಾದರು. ಬಳಿಕ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಇದುವರೆಗೂ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಬಗ್ಗೆ ರಾಧಿಕಾ ಪಂಡಿತ್ ಅವರು ಹೇಳಿಕೊಂಡಿಲ್ಲ. ಅವರಿಗೆ ಬಂದ ಸಿನಿಮಾಗಳನ್ನು ಕೂಡ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಾ ಇಲ್ಲ. ಹಾಗಾಗಿ ರಾಧಿಕಾ ಪಂಡಿತ್ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ವಾ? ಎನ್ನುವ ಶಂಕೆ ವ್ಯಕ್ತವಾಗಿದೆ.

  ಹತ್ತು ವರ್ಷ ಸ್ಯಾಂಡಲ್‌ವುಡ್ ಆಳಿದ ನಟಿ!

  ಹತ್ತು ವರ್ಷ ಸ್ಯಾಂಡಲ್‌ವುಡ್ ಆಳಿದ ನಟಿ!

  ನಟಿ ರಾಧಿಕಾ ಪಂಡಿತ್ ಹತ್ತು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಸಕ್ರಿಯವಾಗಿ ಇದ್ದರು. ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಪ್ ನಟಿ ಎನಿಸಿಕೊಂಡಿದ್ದರು. ಯಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಧ್ರುವ ಸರ್ಜಾ, ನಿರೂಪ್ ಭಂಡಾರಿ, ಗಣೇಶ್, ಅಜಯ್ ರಾವ್, ಯೋಗಿ ಸೇರಿದಂತೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮದೇ ವಿಭಿನ್ನ ಛಾಪು ಮೂಡಿಸಿದ್ದರು ರಾಧಿಕಾ. ಈ ಸ್ಟಾರ್‌ ನಟಿಯನ್ನು ಅಭಿಮಾನಿಗಳು ಸದ್ಯ ಮಿಸ್‌ ಮಾಡಿಕೊಳ್ಳುತ್ತಾ ಇರುವುದಂತೂ ಹೌದು.

  ಮತ್ಯಾವಾಗ ರಾಧಿಕಾ ಪಂಡಿತ್ ಕಮ್ ಬ್ಯಾಕ್?

  ಮತ್ಯಾವಾಗ ರಾಧಿಕಾ ಪಂಡಿತ್ ಕಮ್ ಬ್ಯಾಕ್?

  ರಾಧಿಕಾ ಪಂಡಿತ್ ಅಭಿನಯದಿಂದ ದೂರ ಉಳಿದಿದ್ದಾರೆ. ಆದರೆ ಸಿನಿಮಾ ಕ್ಷೇತ್ರದಿಂದ ದೂರ ಆಗಿಲ್ಲ. ಪತಿ ಯಶ್ ಕೂಡ ಚಿತ್ರರಂಗದಲ್ಲಿ ಇದ್ದಾರೆ. ಹಾಗಾಗಿ ಸಿನಿಮಾ ರಂಗಕ್ಕೆ ಸಂಬಂಧ ಪಟ್ಟ ಹಲವು ವಿಚಾರಗಳಲ್ಲಿ ರಾಧಿಕಾ ಅವರು ಇರುತ್ತಾರೆ. ಇನ್ನು ಅವರ ತಮ್ಮ ಅಭಿಮಾನಿಗಳಿಂದಲೂ ಕೂಡ ದೂರ ಉಳಿದಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಸದಾ ಅಭಿಮಾನಿಗಳಿಗೆ ಕನೆಕ್ಟ್ ಆಗಿರುತ್ತಾರೆ. ತಮ್ಮ ಮಕ್ಕಳ ವಿಡಿಯೋಗಳನ್ನು, ವಿಶೇಷವಾದ ಸಂದರ್ಭದ ಫೊಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  English summary
  Actor Yash Wife Radhika Pandit Got Film Offers But She Rejecting Fims,
  Friday, February 4, 2022, 16:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X