For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ಮದುವೆ: ಹುಡುಗಿ ಕಡೆಯ 'ಆಹ್ವಾನ ಪತ್ರಿಕೆ' ರೆಡಿ

  By Bharathkumar
  |

  ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ನಟ ಯಶ್ ಚಿತ್ರರಂಗದ ಗಣ್ಯರಿಗೆ ತಮ್ಮ ಮದುವೆಗೆ ಬಂದು ಹಾರೈಸಿ ಎಂದು ಆಮಂತ್ರಣ ನೀಡುತ್ತಿದ್ದಾರೆ. ಯಶ್ ನೀಡುತ್ತಿರುವ 'ಆಹ್ವಾನ ಪತ್ರಿಕೆ', ಅತ್ಯಂತ ಸರಳವಾಗಿದ್ದು ಅದರ ಜೊತೆಗೆ ಪತ್ರಕರ್ತ ಜೋಗಿ ಅವರು ಬರೆದಿರುವ ಪುಸ್ತಕ ಹಾಗೂ ಸಸಿಯನ್ನ ಕೊಟ್ಟು ಆಮಂತ್ರಿಸುತ್ತಿದ್ದಾರೆ.

  ಯಶ್-ರಾಧಿಕಾ ಪಂಡಿತ್ ವಿವಾಹ ಮಹೋತ್ಸವಕ್ಕೆ ಬರಿ, ಯಶ್ ಮಾತ್ರ ಇನ್ವಿಟೇಷನ್ ಕೊಡುತ್ತಿದ್ದಾರೆ. ರಾಧಿಕಾ ಎಲ್ಲಿ ಹೋದ್ರು ಅಂತ ಅಭಿಮಾನಿಗಳು ತಲೆಕೆಡಿಸಿಕೊಂಡಿರಬಹುದು. ತುಂಬಾ ಯೋಚನೆ ಮಾಡ್ಬೇಡಿ. ಇದು ಹುಡುಗನ ಕಡೆಯ 'ಆಹ್ವಾನ ಪತ್ರಿಕೆ' ಮಾತ್ರ.[ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ?]

  ಹೌದು, ರಾಕಿಂಗ್ ಸ್ಟಾರ್ ತುಂಬಾ ಸರಳವಾಗಿ ಎಲ್ಲರನ್ನ ಮದುವೆಗೆ ಆಹ್ವಾನಿಸುತ್ತಿದ್ರೆ, ರಾಧಿಕಾ ಕೂಡ ತಮ್ಮ ಕಡೆಯಿಂದ ಮದುವೆಯ ಕರೆಯೋಲೆ ನೀಡಲು ಸಜ್ಜಾಗಿದ್ದಾರೆ. ಹಾಗಾದ್ರೆ, ರಾಧಿಕಾ ಇಚ್ಛೆಯಂತೆ ಮಾಡಿಸಿರುವ ಲಗ್ನ ಪತ್ರಿಕೆ ಹೇಗಿದೆ ಅಂತ ನೋಡಿದ್ದೀರಾ? ಮುಂದೆ ಓದಿ....

  ರಾಧಿಕಾ ಪಂಡಿತ್ ಕಡೆಯ 'ಲಗ್ನಪತ್ರಿಕೆ' ರೆಡಿ

  ರಾಧಿಕಾ ಪಂಡಿತ್ ಕಡೆಯ 'ಲಗ್ನಪತ್ರಿಕೆ' ರೆಡಿ

  ನಟ ಯಶ್ ಕುಟುಂಬದವರು ನೀಡುತ್ತಿರುವ ಆಹ್ವಾನ ಪತ್ರಿಕೆಯನ್ನ ನೀವೆಲ್ಲಾ ನೋಡಿದ್ದೀರಾ. ಈಗ ರಾಧಿಕಾ ಪಂಡಿತ್ ಕುಂಟುಂಬದವರು ನೀಡಲಿರುವ ಆಮಂತ್ರಣ ಪತ್ರಿಕೆಯೂ ಬಹಿರಂಗವಾಗಿದ್ದು, ಸ್ವತಃ ರಾಧಿಕಾ ಪಂಡಿತ್ ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ' ]

  ಕಲರ್ ಫುಲ್ ಆಗಿದೆ ಇನ್ವಿಟೇಷನ್

  ಕಲರ್ ಫುಲ್ ಆಗಿದೆ ಇನ್ವಿಟೇಷನ್

  ಒಂದ್ಕಡೆ ಯಶ್, ಸಿಂಪಲ್ ಆಗಿ ಇನ್ವೀಟೇಷನ್ ಮಾಡಿಸಿ ಜೊತೆಗೆ ಸಸಿ ಹಾಗೂ ಪುಸ್ತಕವನ್ನ ಕೊಟ್ಟು ಗಮನ ಸೆಳೆಯುತ್ತಿದ್ದರೇ, ಮತ್ತೊಂದೆಡೆ ರಾಧಿಕಾ ಪಂಡಿತ್ ಕಲರ್ ಫುಲ್ ಆಗಿ, ತುಂಬಾ ಅದ್ದೂರಿಯಾಗಿ ಆಹ್ವಾನ ಪತ್ರಿಕೆಯನ್ನ ಮಾಡಿಸಿದ್ದಾರೆ.[ಆಡಂಬರ, ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು 'ಮದುವೆಗೆ ಬನ್ನಿ' ಎಂದ ಯಶ್]

  ವುಡನ್ ಫ್ರೇಮ್ ಇನ್ವಿಟೇಷನ್

  ವುಡನ್ ಫ್ರೇಮ್ ಇನ್ವಿಟೇಷನ್

  ರಾಧಿಕಾ ಹಾಗೂ ಯಶ್ ವಿವಹಾಕ್ಕೆ, ರಾಧಿಕಾ ಕುಟುಂಬದವರು ಭರ್ಜರಿಯಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತುಂಬಾ ವಿಭಿನ್ನವಾಗಿ, ವಿಶೇಷವಾಗಿರುವ ಲಗ್ನಪತ್ರಿಕೆಯನ್ನ ವುಡೆನ್ ಫ್ರೇಮ್ ನಲ್ಲಿ ಮಾಡಿಸಿದ್ದಾರೆ.[ಯಶ್-ರಾಧಿಕಾ 'ಲಗ್ನ ಪತ್ರಿಕೆ'ಗೆ ಕವನ ಬರೆದ್ದಿದ್ದು ಇವರೇ!]

  ಶಿವ ಪಾರ್ವತಿ ಥೀಮ್

  ಶಿವ ಪಾರ್ವತಿ ಥೀಮ್

  ರಾಧಿಕಾ ಪಂಡಿತ್ ಅವರಿಗೆ 'ಶಿವ-ಪಾರ್ವತಿ' ದೇವರು ಅಂದ್ರೆ ತುಂಬಾ ಇಷ್ಟವಂತೆ. ಹೀಗಾಗಿ ಮದುವೆ ಕೂಡ 'ಶಿವ-ಪಾರ್ವತಿ'ಯ ಥೀಮ್ ನಲ್ಲಿ ನೆರವೇರಲಿದೆಯಂತೆ. 'ಶಿವ-ಪಾರ್ವತಿ' ಥೀಮ್ ಅಂದ್ರೆ, ಮದುವೆಯ ಸಂಪ್ರದಾಯ ಹೇಗಿರುತ್ತೆ, ಮದುವೆ ದಿನ ವಧು-ವರರು ಧರಿಸುವ ಕಾಸ್ಟ್ಯೂಮ್ ಹೇಗಿರುತ್ತೆ ಎಂಬ ಕುತೂಹಲ ಈಗಲೇ ಹುಟ್ಟಿಕೊಂಡಿದೆ.

  ಹುಡುಗಿ ಕಡೆಯ ಆಮಂತ್ರಣ ಯಾವಾಗ?

  ಹುಡುಗಿ ಕಡೆಯ ಆಮಂತ್ರಣ ಯಾವಾಗ?

  ಈಗಾಗಲೇ ರಾಕಿಂಗ್ ಸ್ಟಾರ್ ಯಶ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅನಂತ್ ನಾಗ್, ಕುಮಾರ್‌ ಬಂಗಾರಪ್ಪ ಸೇರಿದಂತೆ ಹಲವರಿಗೆ ಆಹ್ವಾನ ಪತ್ರಿಕೆಯ ಕೊಟ್ಟಿದ್ದಾರೆ. ಹೀಗಾಗಿ, ರಾಧಿಕಾ ಪಂಡಿತ್ ಯಾವಾಗ, ಯಾರ್ಯಾರಿಗೆ ಆಮಂತ್ರ ನೀಡಿಲಿದ್ದಾರೆ ಎಂಬ ಕುತೂಹಲ ಕೂಡ ಹೆಚ್ಚಾಗಿದೆ.

  English summary
  Kannada Actress Radhika Pandit is ready to invite Sandalwood Stars for her marriage with Kannada Actor Rocking Star Yash. The wedding is scheduled on December 10th and 11th at Tripura Vasini, Bengaluru Palace Ground.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X