For Quick Alerts
  ALLOW NOTIFICATIONS  
  For Daily Alerts

  ಕ್ಯಾಮರಾ ಮುಂದೆ ಕ್ಯೂಟ್‌ ಸ್ಮೈಲ್‌ ಕೊಟ್ಟ ಯಶ್ ಮಗಳು ಐರಾ: ಪೋಟೊ ನೋಡಿ ನೆಟ್ಟಿಗರು ಫಿದಾ

  |

  ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸಿನಿಮಾ ಕರೆಯರ್‌ಗೆ ಫುಲ್‌ ಸ್ಟಾಪ್‌ ಇಟ್ಟು ಹಲವು ವರ್ಷಗಳೇ ಕಳೆದು ಹೋಗಿದೆ. ಈಗೇನಿದ್ದರೂ ಮಕ್ಕಳ ಲಾಲನೆ ಪಾಲನೆಯಲ್ಲಿಯೇ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಸಿನಿಮಾದಿಂದ ದೂರ ಇದ್ದರೂ ಸಹ ರಾಧಿಕಾ ಪಂಡಿತ್‌ಗೆ ಈಗಲೂ ದೊಡ್ಡ ಫ್ಯಾನ್ಸ್ ಫಾಲೋವಿಂಗ್ ಇದೆ.

  ರಾಧಿಕಾ ಪಂಡಿತ್ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಷಿವ್ ಆಗಿ ಇರ್ತಾರೆ. ಆಗಾಗ ತಮ್ಮ ಮಕ್ಕಳ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅಭಿಮಾನಿಗಳು ಕೂಡ ರಾಧಿಕಾ ಪಂಡಿತ್ ಪೋಟೊಗಳಿಗೆ ಹೆಚ್ಚು ಲೈಕ್ಸ್, ಕಮೆಂಟ್ಸ್ ಮಾಡುತ್ತಲೇ ಇರುತ್ತಾರೆ.

  ಘರ್ಜಿಸಿ ಮಗನನ್ನ ಹೆದರಿಸಿದ ನಟ ಯಶ್: ವಿಡಿಯೋ ವೈರಲ್!ಘರ್ಜಿಸಿ ಮಗನನ್ನ ಹೆದರಿಸಿದ ನಟ ಯಶ್: ವಿಡಿಯೋ ವೈರಲ್!

  ಯಶ್ ಮತ್ತು ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರೆಟಿಗಳು. ಇನ್ನು ಇವರ ಮಕ್ಕಳು ಕೂಡ ಸ್ಟಾರ್‌ ಕಿಡ್‌ಗಳಾಗಿದ್ದು, ಐರಾ ಹಾಗೂ ಯಥರ್ವ್‌ಗೆ ಈಗಿನಿಂದಲೇ ಫ್ಯಾನ್ಸ್ ಫಾಲೋವಿಂಗ್ ಇದೆ. ಅವರ ಒಂದು ಪೋಟೊ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರೂ ನಿಮಿಷಗಳಲ್ಲೇ ಆ ಪೋಟೊ ವೈರಲ್ ಆಗಿ ಬಿಡುತ್ತವೆ. ಸದ್ಯ ಈಗ ರಾಧಿಕಾ ಪಂಡಿತ್ ಐರಾ ಹಾಗೂ ಯಥರ್ವ್ ಪೋಟೊ ಹಂಚಿಕೊಂಡಿದ್ದು, ಐರಾ ಸ್ಮೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

   ಕ್ಯಾಮರಾಗೆ ಕ್ಯೂಟ್ ಸ್ಮೈಲ್ ಕೊಟ್ಟ ಐರಾ

  ಕ್ಯಾಮರಾಗೆ ಕ್ಯೂಟ್ ಸ್ಮೈಲ್ ಕೊಟ್ಟ ಐರಾ

  ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳ ಪೋಟೊಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಇಂದು (ಮೇ 23) ರಂದು ಇನ್‌ಸ್ಟಾಗ್ರಾಂನಲ್ಲಿ ಮಗಳು ಐರಾ ಹಾಗೂ ಮಗ ಯಥರ್ವ್‌ನ ಪೋಟೊವನ್ನು ಹಂಚಿಕೊಂಡಿದ್ದಾರೆ. ಆ ಪೋಟೊಗೆ 'ಮಂಡೇ ಬ್ಲ್ಯೂಸ್' ಅಂತ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ಪೋಟೊದಲ್ಲಿ ಐರಾ ಕ್ಯಾಮರಾ ಕಣ್ಜಿಗೆ ಕ್ಯೂಟ್‌ ಆಗಿ ಸ್ಮೈಲ್ ಕೊಟ್ಟಿದ್ದಾಳೆ. ಐರಾ ಹಿಂದೆ ಯಥರ್ವ್ ಕಣ್ಣು ಮುಚ್ಚಿಕೊಂಡು ಪೋಟೊಗೆ ಪೋಸ್‌ ಕೊಟ್ಟಿದ್ದಾನೆ. ಸದ್ಯ ಪೋಟೊ ನೋಡಿದ ನೆಟ್ಟಿಗರು ಐರಾ ಕ್ಯೂಟ್‌ನೆಸ್‌ ನಗುವಿಗೆ ಫಿದಾ ಆಗಿದ್ದಾರೆ.

  Radhika Pandit : 'ಕೆಜಿಎಫ್ 2' ಟ್ರೈಲರ್‌ ಲಾಂಚ್‌ನಲ್ಲಿ ರಾಧಿಕಾ ಧರಿಸಿದ ಡ್ರೆಸ್ ಬೆಲೆಯೆಷ್ಟು?Radhika Pandit : 'ಕೆಜಿಎಫ್ 2' ಟ್ರೈಲರ್‌ ಲಾಂಚ್‌ನಲ್ಲಿ ರಾಧಿಕಾ ಧರಿಸಿದ ಡ್ರೆಸ್ ಬೆಲೆಯೆಷ್ಟು?

   ಆಗಾಗ ಮಕ್ಕಳ ಪೋಟೊ ಹಂಚಿಕೊಳ್ಳುವ ರಾಧಿಕಾ

  ಆಗಾಗ ಮಕ್ಕಳ ಪೋಟೊ ಹಂಚಿಕೊಳ್ಳುವ ರಾಧಿಕಾ

  ರಾಧಿಕಾ ಹಾಗೂ ಯಶ್ ದಂಪತಿಗೆ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ರಾಧಿಕಾ ಹಾಗೂ ಯಶ್‌ ದಂಪತಿಗೆ ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಸಮಯ ಸಿಕ್ಕಾಗಲೆಲ್ಲಾ ಮಕ್ಕಳ ಜೊತೆ ಸಮಯ ಕಳೆಯೋಕೆ ಇಷ್ಟ ಪಡುತ್ತಾರೆ. ಅಲ್ಲದೆ ಮಕ್ಕಳ ಕೀಟಲೆ ಪೋಟೊಗಳನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ನೀಲಿ ಬಣ್ಣದ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಐರಾ ಪೋಟೊವನ್ನು ಶೇರ್ ಮಾಡಿದ್ದಾರೆ. ಈ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೋಸ್ಟ್‌ ಆದ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ವೀಕ್ಷಿಸಿದ್ದು, ಲೈಕ್ ಕಮೆಂಟ್ಸ್ ಮಾಡ್ತಿದ್ದಾರೆ.

   ಯಶ್ ಘರ್ಜನೆಗೆ ಓಡಿ ಹೋಗಿದ್ದ ಯಥರ್ವ್

  ಯಶ್ ಘರ್ಜನೆಗೆ ಓಡಿ ಹೋಗಿದ್ದ ಯಥರ್ವ್

  ರಾಕಿಂಗ್ ಸ್ಟಾರ್ ಯಶ್ ಸಮಯ ಸಿಕ್ಕಾಗಲೆಲ್ಲಾ ತಮ್ಮ ಮುದ್ದಾದ ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಇತ್ತೀಚೆಗಷ್ಟೇ ಮಗಳು ಮತ್ತು ಮಗನ ಜೊತೆ ಸಮಯ ಕಳೆಯುತ್ತಿದ್ದ ವಿಡಿಯೋವೊಂದನ್ನು ಯಶ್ ಶೇರ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ಯಥರ್ವ್ ಅಪ್ಪನಿಗೆ ಐ ಲವ್ ಯೂ ಹೇಳಿ ನಾನು ಡೈನೋಸಾರ್ ಎಂದು ಕಿರುಚಿದ್ದ, ಇದಕ್ಕೆ ಯಶ್ ಕೂಡ ನಾನು ಹುಲಿಯಾಗುವುದನ್ನು ನೋಡು ಎಂದು ಹೇಳಿ ಹುಲಿಯ ಘರ್ಜನೆ ಮಾಡಿದಾಗ ಯಥರ್ವ್ ಅಲ್ಲಿಂದ ಓಡಿ ಹೋಗಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

  ಮಗಳಿಗೆ ಅ,ಆ,ಇ,ಈ ಕಲಿಸಿದ ರಾಕಿಂಗ್ ಸ್ಟಾರ್ ಯಶ್: ವಿಡಿಯೋ ವೈರಲ್!ಮಗಳಿಗೆ ಅ,ಆ,ಇ,ಈ ಕಲಿಸಿದ ರಾಕಿಂಗ್ ಸ್ಟಾರ್ ಯಶ್: ವಿಡಿಯೋ ವೈರಲ್!

   'ರಾಧಿಕಾ ಚಿತ್ರರಂಗಕ್ಕೆ ಬರಲಿ': ಅಭಿಮಾನಿಗಳ ಒತ್ತಾಸೆ

  'ರಾಧಿಕಾ ಚಿತ್ರರಂಗಕ್ಕೆ ಬರಲಿ': ಅಭಿಮಾನಿಗಳ ಒತ್ತಾಸೆ

  2016 ರಲ್ಲಿ ರಾಧಿಕಾ ಪಂಡಿತ್ ನಟ ಯಶ್ ಜೊತೆ ಮದುವೆಯಾದರು. ಆದಾದ ಬಳಿಕ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ನಂತರ 2019 ರಲ್ಲಿ ತೆರೆಗೆ ಬಂದ 'ಆದಿ ಲಕ್ಷ್ಮೀ ಪುರಾಣ' ಸಿನಿಮಾದಲ್ಲಿ ನಟಿಸಿದರು. ಆದಾದ ಬಳಿಕ ಸಂಪೂರ್ಣವಾಗಿ ನಟನೆಗೆ ಫುಲ್ ಸ್ಟಾಪ್ ಇಟ್ಟು ಮಕ್ಕಳ ಪೋಷಣೆಯಲ್ಲಿಯೇ ಬ್ಯುಸಿಯಾದರು. ರಾಧಿಕಾ ಪಂಡಿತ್ ಈಗಲಾದರೂ ಮತ್ತೆ ಸಿನಿ ಪ್ರಪಂಚಕ್ಕೆ ವಾಪಾಸ್‌ ಆಗಲಿ ಎಂಬುದು ಅಭಿಮಾನಿಗಳ ಆಶಯ.

  English summary
  Radhika Pandit Shares New Pictures Ayra And Yatharv. Know More.
  Tuesday, May 24, 2022, 9:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X