For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಪಂಡಿತ್ ಅಭಿನಯದ 'ಆದಿ ಲಕ್ಷ್ಮಿ ಪುರಾಣ' ಚಿತ್ರದ ಆಡಿಯೋ ರಿಲೀಸ್ ಡೇಟ್ ಫಿಕ್ಸ್

  |

  ಸ್ಯಾಂಡಲ್ ವುಡ್ ನ ಪ್ರಿನ್ಸೆಸ್ ರಾಧಿಕಾ ಪಂಡಿತ್ ಅನೇಕ ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಮಿಂಚುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮದುವೆಯಾದ ಬಳಿಕ ರಾಧಿಕಾ ಅಭಿನಯದ 'ಆದಿ ಲಕ್ಷ್ಮಿ ಪುರಾಣ' ಚಿತ್ರ ರಿಲೀಸ್ ಗೆ ಸಿದ್ದವಾಗಿದೆ. ಈಗಾಗಲೆ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ 'ಆದಿ ಲಕ್ಷ್ಮಿ ಪುರಾಣ' ತಂಡ ಸದ್ಯ ಆಡಿಯೋ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ.

  ರಾಧಿಕಾ ಪಂಡಿತ್ ಅವರನ್ನು ತೆರೆಮೇಲೆ ನೋಡದೆ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದ್ದರು. 2016ರಲ್ಲಿ 'ಸಂತು ಸ್ಟ್ರೈಟ್ ಫಾರ್ವಡ್' ಚಿತ್ರದ ನಂತರ ರಾಧಿಕಾ ಮತ್ತೆ ತೆರೆಮೇಲೆ ಬಂದಿರಲಿಲ್ಲ. ಆದ್ರೀಗ ಸುಮಾರು ಎರಡೂವರೆ ವರ್ಷದ ಬಳಿಕ 'ಆದಿ ಲಕ್ಷ್ಮಿ ಪುರಾಣ' ಹೇಳುತ್ತ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ.

  ರಾಧಿಕಾ ಪಂಡಿತ್ ಕಂಬ್ಯಾಕ್ ಗೆ ಚಿರು ಸರ್ಜಾ ಎದುರಾಳಿ.!

  ಸದ್ಯ ಚಿತ್ರದ ಆಡಿಯೋ ಇದೆ ತಿಂಗಳು 26ಕ್ಕೆ ರಿಲೀಸ್ ಆಗುತ್ತಿದೆ. ಅಂದ್ಹಾಗೆ ಚಿತ್ರ ಮುಂದಿನ ತಿಂಗಳು 19ಕ್ಕೆ ತೆರೆಗೆ ಬರುತ್ತಿದೆ. 'ಆದಿ ಲಕ್ಷ್ಮಿ ಪುರಾಣ' ಚಿತ್ರದಲ್ಲಿ ನಾಯಕನಾಗಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಿರೂಪ್ ಮತ್ತು ರಾಧಿಕಾ ಪಂಡಿತ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

  ಈಗಾಗಲೆ ಫೋಸ್ಟರ್ ಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ 'ಆದಿ ಲಕ್ಷ್ಮಿ ಪುರಾಣ' ಚಿತ್ರದ ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲಕ್ಕೆ ಇದೆ ತಿಂಗಳು 26ಕ್ಕೆ ತೆರೆ ಬೀಳಲಿದೆ. ಅಂದ್ಹಾಗೆ ಚಿತ್ರಕ್ಕೆ ತಮಿಳಿನ ನಿರ್ದೇಶಕಿ ಪ್ರಿಯಾ ಆಕ್ಷನ್ ಕಟ್ ಹೇಳಿದ್ದಾರೆ.

  ಇನ್ನು ಚಿತ್ರದಲ್ಲಿ ತಾರಾ, ಸುಚೇಂದ್ರ ಪ್ರಸಾದ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಇದೆ. ರಾಧಿಕಾ ಮದುವೆ ನಂತರ ಅಭಿನಯಿಸಿದ ಸಿನಿಮಾ ಈಗ ಮಗುಳು ಆಯ್ರಾ ಹುಟ್ಟಿದ ಮೇಲೆ ತೆರೆಗೆ ಬರುತ್ತಿದೆ. ವರ್ಷಗಳ ಬಳಿಕ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ರಾಧಿಕಾ ಅವರನ್ನು ನೋಡಲು ಅಭಿಮಾನಿಗಳ ಕಾತುರ ಹೆಚ್ಚಾಗಿದೆ.

  English summary
  Kannada actress Radhika Pandith and actor Nirup Bhandari starrer 'Aadi Lakshmi Purana' film Audio will release on June 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X