ಟೀಸರ್: 2 ವರ್ಷದ ಬಳಿಕ ರಾಧಿಕಾ ಪಂಡಿತ್ ರೀ-ಎಂಟ್ರಿ
ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅಭಿನಯದ ಯಾವ ಚಿತ್ರವೂ ಮದುವೆ ಆದ್ಮೇಲೆ ತೆರೆಕಂಡಿರಲಿಲ್ಲ. ಇದೀಗ, 2 ವರ್ಷದ ನಂತರ ಮತ್ತೆ ಬೆಳ್ಳಿತೆರೆ ಮೇಲೆ ಮಿಸಸ್ ರಾಮಾಚಾರಿ ಬರ್ತಿದ್ದಾರೆ.
ರಾಧಿಕಾ ಪಂಡಿತ್ ಮತ್ತು 'ರಂಗಿತರಂಗ' ಖ್ಯಾತಿಯ ನಿರೂಪ್ ಭಂಡಾರಿ ಅಭಿನಯದ 'ಆದಿ ಲಕ್ಷ್ಮಿಪುರಾಣ' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ಮತ್ತೇ ಅದೇ ಜೋಶ್ ನಲ್ಲಿ ರಾಧಿಕಾ ರೀ-ಎಂಟ್ರಿ ಕೊಟ್ಟಿದ್ದಾರೆ.
ಚಿತ್ರದಲ್ಲಿ ನಿರೂಪ್ ಭಂಡಾರಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದು, ಟ್ರೈಲರ್ ಗೆ ರಮೇಶ್ ಅರವಿಂದ್ ಹಿನ್ನಲೆ ಧ್ವನಿ ನೀಡಿದ್ದಾರೆ. ತಾರಾ ಮತ್ತು ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಆಲ್ ಮೋಸ್ಟ್ ಮದ್ವೆ ಆದ್ಮೇಲೆ ಈ ಸಿನಿಮಾ ಮಾಡಿದ್ದರು. ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ವಿಶ್ರಾಂತಿಯಲ್ಲಿದ್ದರು. ಈಗ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಟೀಸರ್ ಪ್ರೇಕ್ಷಕರೆದುರು ಬಂದಿದೆ.
ಇನ್ನುಳಿದಂತೆ ಪ್ರಿಯಾ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ, ಅನೂಪ್ ಭಂಡಾರಿ ಸಂಗೀತ, ಜೋ.ನಿ ಹರ್ಷ ಸಂಕಲನ, ಪ್ರೀತ ಜಯರಾಮನ್ ಅವರ ಛಾಯಗ್ರಹಣವಿದೆ.
ಅಂದ್ಹಾಗೆ, ರಾಧಿಕಾ ಪಂಡಿತ್ ಕೊನೆಯದಾಗಿ ಯಶ್ ಜೊತೆ ಸಂತು ಸ್ಟ್ರೈಡ್ ಫಾರ್ವರ್ಡ್ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ 2016ರಲ್ಲಿ ತೆರೆಕಂಡಿತ್ತು.


Click it and Unblock the Notifications











