»   » ಮೊಟ್ಟಮೊದಲ ಬಾರಿ ಬೆಳ್ಳಿತೆರೆ ಮೇಲೆ 'ಅಣ್ಣಾವ್ರ' ಸೊಸೆ..!

ಮೊಟ್ಟಮೊದಲ ಬಾರಿ ಬೆಳ್ಳಿತೆರೆ ಮೇಲೆ 'ಅಣ್ಣಾವ್ರ' ಸೊಸೆ..!

Posted By:
Subscribe to Filmibeat Kannada

ನಿಮಗಿದು ಆಶ್ಚರ್ಯ ಅನಿಸಿದ್ದರೂ 100% ನಿಜ. 'ಅಣ್ಣಾವ್ರ' ಸೊಸೆ ಬಣ್ಣ ಹಚ್ಚಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ದೊಡ್ಮನೆ ಕುಟುಂಬ ಅಂತ ಕರೆಸಿಕೊಳ್ಳುವ 'ಅಣ್ಣಾವ್ರ' ಕುಟುಂಬದ ಸೊಸೆ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.

ಹಾಗೆ, ದೊಡ್ಡ ಪರದೆ ಮೇಲೆ ಮಿಂಚಿರುವವರು, ಮಂಗಳ ರಾಘವೇಂದ್ರ ರಾಜ್ ಕುಮಾರ್. ಚಿಕ್ಕ ಪರದೆಗಳಲ್ಲಿ ಮಾತನಾಡುವುದಕ್ಕೆ ಸಂಕೋಚ ಪಡುತ್ತಿದ್ದ ರಾಘಣ್ಣನ ಪ್ರೀತಿಯ ಮಡದಿ ಮಂಗಳ ಇದೀಗ ಸಿಲ್ವರ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ.


Kannada movie Siddhartha

ಅದು ಯಾವ ಚಿತ್ರದಲ್ಲಿ ಗೊತ್ತಾ, ಅಣ್ಣಾವ್ರ ಮುದ್ದಿನ ಮೊಮ್ಮಗ, ರಾಘಣ್ಣನ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಸಿದ್ದಾರ್ಥ'ದಲ್ಲಿ. ಹೌದು, ಮಗನ ಚಿತ್ರದಲ್ಲಿ ಅಮ್ಮ ಮಂಗಳ ಮಿಂಚಿದ್ದಾರೆ. [ಪೋಲಿ ಹುಡುಗನಾಗಿ ಎಂಟ್ರಿ ಕೊಟ್ಟ ವಿನಯ್ ರಾಜ್]


Kannada movie Siddhartha4

ಹಾಗಂತ, ಅವರು ವಿನಯ್ ಗೆ ಅಮ್ಮನ ಪಾತ್ರ ಮಾಡಿಲ್ಲ. ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿಲ್ಲ. ಬದಲಾಗಿ, ಹಾಡೊಂದರಲ್ಲಿ ಸೆರೆಯಾಗಿದ್ದಾರೆ ಅಷ್ಟೆ. ಅದು ಅವರ ಪತಿ ರಾಘಣ್ಣ ಮತ್ತು ಎರಡನೆಯ ಮಗ ಗುರು ರಾಘವೇಂದ್ರ ಜೊತೆ ಅನ್ನುವುದು ಅಷ್ಟೇ ಸ್ಪೆಷಲ್.


ನಿನ್ನೆಯಷ್ಟೇ, ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ 'ಸಿದ್ದಾರ್ಥ'ನ ''ಆಕಾಶವೇ.....'' ಹಾಡಲ್ಲಿ ರಾಘಣ್ಣನ ಇಡೀ ಕುಟುಂಬ ಮಿಂಚಿದೆ. 'ಪಕ್ಕದ್ಮನೆ ಹುಡುಗಿ' ಸಿನಿಮಾ ಆದ್ಮೇಲೆ ಬಹುತೇಕ ತೆರೆಹಿಂದಕ್ಕೆ ಮೀಸಲಾಗಿದ್ದ ರಾಘಣ್ಣ, ಮಗನ ಚಿತ್ರಕ್ಕಾಗಿ, ಮಗನಿಗೆ ಸಪೋರ್ಟ್ ಸಿಗಲಿ ಅಂತ ಮಡದಿ ಮತ್ತು ಮಗನೊಂದಿಗೆ ಹೀಗೆ ಬಂದು ಹಾಗೆ ಹೋಗಿದ್ದಾರೆ. [ಯೂಟ್ಯೂಬಲ್ಲಿ ಝೇಂಕರಿಸಿದ 'ಸಿದ್ದಾರ್ಥ' ಟ್ರೇಲರ್]


Raghavendra Rajkumar and Family in Kannada movie Siddhartha

ಅಣ್ಣಾವ್ರ ನಾಲ್ಕನೇ ತಲೆಮಾರು ದೊಡ್ಡ ಪರದೆಗೆ ಅಡಿ ಇಡುವುದಕ್ಕೆ ದಿನಗಣನೆ ಶುರುವಾಗಿದೆ. ವಿನಯ್ ರಾಜ್ ಕುಮಾರ್ ನ ತೆರೆಮೇಲೆ ನೋಡುವುದರ ಜೊತೆಗೆ ಅನಾರೋಗ್ಯದಿಂದ ಚೇತರಿಸಿಕೊಂಡು ಈಗ ಫಿಟ್ ಅಂಡ್ ಫೈನ್ ಆಗಿರುವ ರಾಘಣ್ಣ ಮತ್ತು ಕುಟುಂಬವನ್ನ 'ಸಿದ್ದಾರ್ಥ'ನ ಮೂಲಕ ನೋಡುವ ಚಾನ್ಸ್ ನಿಮಗೆ ಸಿಕ್ಕಿದೆ. (ಫಿಲ್ಮಿಬೀಟ್ ಕನ್ನಡ)

English summary
Raghavendra Rajkumar's son Vinay Rajkumar starrer 'Siddhartha' is all set to release this month. Prior to release here is the surprise package. Raghavendra Rajkumar along with his wife Mangala and second son Guru are seen together in one of the songs of Siddhartha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada