For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ನನ್ನನ್ನು ಕಾಪಾಡಿತು: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ರಾಘವೇಂದ್ರ ರಾಜ್ ಕುಮಾರ್ ಪ್ರತಿಕ್ರಿಯೆ

  |

  ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಇಂದು (ಫೆಬ್ರವರಿ 18) ಡಿಸ್ಚಾರ್ಜ್ ಆಗಿ ಮನೆಗೆ ತೆರಲಿದ್ದಾರೆ. ಈ ಸಮಯದಲ್ಲಿ ರಾಘಣ್ಣ ಜೊತೆ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪುತ್ರ ವಿನಯ್ ರಾಜ್ ಕುಮಾರ್ ಸೇರಿದಂತೆ ಕುಟುಂಬದವರು ಮತ್ತು ಸ್ನೇಹಿತರು ಜೊತೆಯಲ್ಲಿದ್ದರು

  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಗೆ ಬಂದ ರಾಘಣ್ಣ ಮಾಧ್ಯಮದವರ ಜೊತೆ ಮಾತನಾಡಿ ಶೂಟಿಂಗ್ ನನ್ನನ್ನು ಕಾಪಾಡಿತು ಎಂದು ಹೇಳಿದ್ದಾರೆ. ಶೂಟಿಂಗ್ ನಲ್ಲಿ ಇದ್ದಿದ್ದರಿಂದ ತಕ್ಷಣ ಆಸ್ಪತ್ರೆಗೆ ಬರಲು ಸಾಧ್ಯವಾಯಿತು. ಬೇರೆಲ್ಲೋ ಇದ್ದಿದ್ರೆ ಕಷ್ಟವಾಗುತ್ತಿತ್ತು ಎಂದರು.

  ಹಿರಿಯ ನಟ ರಾಘಣ್ಣ ಕೊಲಂಬಿಯಾ ಆಸ್ಪತ್ರೆಗೆ ದಾಖಲು

  'ಬೆಳಕು ಚಿತ್ರದ ಚಿತ್ರೀಕರಣದಲ್ಲಿದ್ದೆ. ಆಗ ನನಗೆ ಹೃದಯ ಬಡಿತದಲ್ಲಿ ಸ್ವಲ್ಪ ಏರು ಪೇರು ಕಾಣಿಸಿತು. ಹಾಗಾಗಿ ಆಸ್ಪತ್ರೆಗೆ ಬಂದೆ. ಇದೇ ಆಸ್ಪತ್ರೆಯಲ್ಲಿ ನಾನು 7 ವರ್ಷದ ಹಿಂದೆ ಸ್ಟ್ರೋಕ್ ನಿಂದ ದಾಖಲಾಗಿದ್ದೆ. ಆ್ಯಂಜಿಯೋಗ್ರಾಮ್ ಮಾಡಿದ್ದಾರೆ. ವಾರದಲ್ಲಿ ನಾನು ಕೆಲಸಕ್ಕೆ ವಾಪಸ್ ಆಗುತ್ತೇನೆ' ಎಂದಿದ್ದಾರೆ.

  'ಕೆಲಸದಲ್ಲಿ ಇದ್ದಿದ್ದರಿಂದ ತಕ್ಷಣ ಆಸ್ಪತ್ರೆಗೆ ಬರಲು ಸಾಧ್ಯವಾಯಿತು. ಬೇರೆಲ್ಲೋ ಇದ್ದಿದ್ರೆ ಕಷ್ಟವಾಗುತ್ತಿತ್ತು. ಶೂಟಿಂಗ್ ನನ್ನನ್ನು ಕಾಪಾಡಿತು. ನಾನು ಚೆನ್ನಾಗಿದ್ದೀನಿ. ನಿಮ್ಮ ಪ್ರೀತಿ, ಆಶೀರ್ವಾದ ಇರುವವವರೆಗೂ ನನ್ನನ್ನು ಆ ಶಕ್ತಿ ಕಾಪಾಡುತ್ತೆ' ಎಂದು ರಾಘಣ್ಣ ಹೇಳಿದ್ದಾರೆ.

  ರಾಘವೇಂದ್ರ ರಾಜ್ ಕುಮಾರ್ ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾಘಣ್ಣ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಬಳಿಕ ರಾಘಣ್ಣ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಕುಟುಂಬದವರು ನೀಡಿದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು.

  ರಾಧೆ ಶ್ಯಾಮ್ ನಲ್ಲಿ ಪ್ರಭಾಸ್ ಕಾಸ್ಟ್ಯೂಮ್ಸ್’ಗೆ ಖರ್ಚಾಗಿದ್ದು ಅಷ್ಟಿಷ್ಟಲ್ಲ | Filmibeat Kannada

  ಆಸ್ಪತ್ರೆಯಲ್ಲಿದ್ದ ರಾಘಣ್ಣ ನೋಡಲು, ಪುನೀತ್, ಶಿವಣ್ಣ ಶ್ರೀಮುರಳಿ ಸೇರಿದಂತೆ ಇಡೀ ಕುಟುಂಬ ಧಾವಿಸಿತ್ತು. ಸದ್ಯ ಮನೆಗೆ ತೆರಳಿರುವ ರಾಘಣ್ಣ ಒಂದು ವಾರಗಳ ವಿಶ್ರಾಂತಿ ಬಳಿಕ ಕೆಲಸಕ್ಕೆ ಮರಳಿದ್ದಾರೆ.

  English summary
  Actor Raghavendra Rajkumar discharged from hospital.
  -->

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X