For Quick Alerts
  ALLOW NOTIFICATIONS  
  For Daily Alerts

  ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?

  |

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನ ಕಂಠೀರವ ಸ್ಟುಡಿಯೋದಲ್ಲಿ ನಡೆಸಲು ಸರ್ಕಾರ ಮತ್ತು ಕುಟುಂಬದವರು ತೀರ್ಮಾನಿಸಿದ್ದಾರೆ. ಅಲ್ಲಿಗೆ ಡಾ ರಾಜ್ ಕುಮಾರ್ ಪಕ್ಕದಲ್ಲೇ ಅಂಬಿಯ ಸಮಾಧಿಯೂ ಆಗಲಿದೆ.

  ಇದರ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲ, ಚರ್ಚೆ ಆರಂಭವಾಗಿದೆ. ರಾಜ್ ಸಮಾಧಿ ಬಳಿ ಅಂಬಿ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿರುವ ಬಗ್ಗೆ ಅಣ್ಣಾವ್ರ ಕುಟುಂಬದವರು ಏನು ಹೇಳ್ತಾರೆ, ಅದಕ್ಕೆ ಅವರ ಒಪ್ಪಿಗೆ ಇದ್ಯಾ ಎಂಬ ಅನುಮಾನ ಕಾಡುತ್ತಿತ್ತು.

  ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?

  ಇದೀಗ, ಈ ಕುತೂಹಲಕ್ಕೆ ಡಾ ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದ್ದಾರೆ.

  ಇದು ದೈವ ನಿರ್ಣಯ

  ಇದು ದೈವ ನಿರ್ಣಯ

  ರಾಜ್ ಸಮಾಧಿ ಪಕ್ಕದಲ್ಲಿ ಅಂಬರೀಶ್ ಸಮಾಧಿ ಮಾಡುವುದು ದೈವ ನಿರ್ಣಯ, ಅದನ್ನು ನಿರ್ಧಾರ ಮಾಡಲು ನಾವು ಯಾರು, ಸರ್ಕಾರ ಹೇಗೆ ನಿರ್ಧಾರ ಮಾಡುತ್ತೋ ಅದಕ್ಕೆ ನಾವು ಬದ್ಧ ಎಂದು ರಾಘವೇಂದ್ರ ರಾಜ್ ಕುಮಾರ್ ತಿಳಿಸಿದರು.

  ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

  ನಾವೆಲ್ಲರೂ ಅಂಬಿ ಜೊತೆ ನಟಿಸಿದ್ದೇವೆ

  ನಾವೆಲ್ಲರೂ ಅಂಬಿ ಜೊತೆ ನಟಿಸಿದ್ದೇವೆ

  ನಾನೂ ಸೇರಿದಂತೆ ನಮ್ಮ ತಮ್ಮಂದಿರು ಕೂಡ ಅಂಬರೀಶ್ ಜೊತೆ ನಟಿಸಿದ್ದಾರೆ. ಅಂಬರೀಶ್ ದೇಹ ಬಿಟ್ಟು ಹೋದರೂ ಆವರ ಆತ್ಮ ನಮ್ಮ ನಡುವೆಯೇ ಇರುತ್ತದೆ. ಎಲ್ಲಿ ಅಂತ್ಯಕ್ರಿಯೆ ಮಾಡಬೇಕು ಎನ್ನುವುದನ್ನು ಸರ್ಕಾರ ನಿರ್ಧರಿಸಲಿ ಎಂದರು.

  ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?

  ಚಿತ್ರರಂಗದ ತಂದೆಯನ್ನ ಕಳೆದುಕೊಂಡೆವು

  ಚಿತ್ರರಂಗದ ತಂದೆಯನ್ನ ಕಳೆದುಕೊಂಡೆವು

  ಅಂಬರೀಶ್ ಮಾಮ ನಮ್ಮೊಂದಿಗಿಲ್ಲ, 24 ಗಂಟೆಯೂ ಅವರು ಚಿತ್ರರಂಗದ ಬಗ್ಗೆ ಯೋಚಿಸಿದ್ದರು, ಅವರು ಸ್ನೇಹಜೀವಿ ಆಗಿದ್ದರು, ಯಾರೇ ಬಂದರೂ ಸಹಾಯ ಮಾಡುತ್ತಿದ್ದರು, ಚಿತ್ರರಂಗ ತಂದೆಯನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.

  ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

   ಡಾ ರಾಜ್ ಪುತ್ರರು ಸಂತಾಪ

  ಡಾ ರಾಜ್ ಪುತ್ರರು ಸಂತಾಪ

  ಡಾ ರಾಜ್ ಕುಮಾರ್ ಪುತ್ರರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು.

  ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

  English summary
  Elder son Dr. Rajkumar, Raghavendra Rajkumar has said that they don't have any objections to constructing a memoir of Rebel star Ambareesh at Kanthirava studio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X