»   » ಸ್ಯಾಂಡಲ್ ವುಡ್ ಗೆ ರಾಜಣ್ಣನ ಕುಟುಂಬದ ಮತ್ತೊಂದು ಕುಡಿ

ಸ್ಯಾಂಡಲ್ ವುಡ್ ಗೆ ರಾಜಣ್ಣನ ಕುಟುಂಬದ ಮತ್ತೊಂದು ಕುಡಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಕುಟುಂಬ 'ದೊಡ್ಮನೆ ಕುಟುಂಬ' ಅಂತಲೇ ಪ್ರಖ್ಯಾತಿ. ಅಣ್ಣಾವ್ರ ತಂದೆಯ ಕಾಲದಿಂದಲೂ, ಅವರ ಕುಟುಂಬ ಬಣ್ಣದ ಬದುಕಿನಲ್ಲಿದೆ. ಅಪ್ಪಾಜಿ ನಂತ್ರ, ಹಿರಿಯ ಮಗ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ರಾಜಣ್ಣನ ಹೆಸರನ್ನ ಬೆಳೆಸುತ್ತಿದ್ದಾರೆ.

ಇದೇ ಪರಂಪರೆಯನ್ನ ಮೂರನೇ ತಲೆಮಾರಿನ ಕುಡಿ ವಿನಯ್ ರಾಜ್ ಕುಮಾರ್ ಕೂಡ ಮುಂದುವರಿಸುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ ಬೆಳ್ಳಿಪರದೆ ಮೇಲೆ ಕಾಲಿಟ್ಟಿರುವ ವಿನಯ್ ರಾಜ್ ಕುಮಾರ್, 'ಅಭಿಮಾನಿ ದೇವರು'ಗಳ ಆಶೀರ್ವಾದವನ್ನ ಪಡೆದಿದ್ದಾರೆ. ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]

Raghavendra Rajkumar's 2nd son Guru Rajkumar

ಇದೀಗ ವಿನಯ್ ಹಾದಿಯಲ್ಲೇ, ಅವರ ತಮ್ಮ ಗುರು ರಾಘವೇಂದ್ರ ರಾಜ್ ಕುಮಾರ್ ಕೂಡ ಬಣ್ಣ ಹಚ್ಚುವ ಮನಸ್ಸು ಮಾಡಿದ್ದಾರೆ. ಹೌದು, ರಾಘಣ್ಣನ ಕಿರಿಯ ಪುತ್ರ ಗುರು ರಾಜ್ ಕುಮಾರ್ ಕೂಡ ಗಾಂಧಿನಗರಕ್ಕೆ ಭರವಸೆಯ ಅಡಿ ಇಡಲಿದ್ದಾರೆ.

ವಿನಯ್ ಎಂಟ್ರಿ ಮತ್ತು 'ಸಿದ್ದಾರ್ಥ' ಚಿತ್ರಕ್ಕೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಯನ್ನ ಕಂಡು ಗುರು, ತಮ್ಮ ತಂದೆಯ ಬಳಿ ಮನದಾಳದ ಇಂಗಿತವನ್ನ ವ್ಯಕ್ತ ಪಡಿಸಿದ್ದಾರಂತೆ. ಬಣ್ಣದ ಬದುಕ್ಕಲ್ಲೇ ಇಡೀ ಕುಟುಂಬ ಇರುವ ಕಾರಣ, ರಾಘಣ್ಣ ಕೂಡ 'ಹೀರೋ' ಆಗುವುದಕ್ಕೆ ಪೂರ್ವ ಸಿದ್ಧತೆಯನ್ನ ನಡೆಸುವಂತೆ ಗುರುಗೆ ಹೇಳಿದ್ದಾರಂತೆ.

ಇದೇ ಖುಷಿಯಲ್ಲಿ ಗುರು ರಾಜ್ ಕುಮಾರ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ''ಹೀರೋ ಆಗುವುದಕ್ಕೆ ನಾನು ರೆಡಿ. ನನಗೆ ಕಾನ್ಫಿಡೆನ್ಸ್ ಬಂದಿದೆ. ಚೆನ್ನಾಗಿ ಆಕ್ಟ್ ಮಾಡುತ್ತೀನಿ'' ಅಂತ ಗುರು ಆತ್ಮವಿಶ್ವಾಸದಿಂದ ಹೇಳಿದಾಗ ಕಥೆಗೆ ಹುಡುಕಾಟ ನಡೆಸುತ್ತಾರಂತೆ ರಾಘಣ್ಣ.

Raghavendra Rajkumar's 2nd son Guru Rajkumar

ಸದ್ಯಕ್ಕೆ ವಿನಯ್ ಗೆ ಪ್ರೇಕ್ಷಕರಿಂದ ಸಿಕ್ಕಿರುವ ಅಪ್ಪುಗೆ ಬಗ್ಗೆ ರಾಘಣ್ಣನ ಮನಸ್ಸು ನೆಮ್ಮದಿಯಾಗಿದೆ. ಅದರ ಬೆನ್ನಲ್ಲೇ ಮತ್ತೊಬ್ಬ ಮಗ ಹೀರೋ ಆಗುವ ಕನಸು ಕಂಡರೆ ಬೇಡ ಅನ್ನುತ್ತಾರೆಯೇ..? ಡಬ್ಕಿ ಡಬಲ್ ದಿಲ್ ಖುಷ್ ಆಗಿದ್ದಾರೆ. [ವಿಮರ್ಶಕರು 'ಸಿದ್ದಾರ್ಥ'ನನ್ನ ಮೆಚ್ಚಿದ್ದಾರಾ? ಇಲ್ಲಿ ಓದಿ..]

ಈಗಾಗಲೇ ರಾಜ್ ಕುಟುಂಬದ ಸಮಾರಂಭಗಳಲ್ಲಿ ಮಿಂಚುತ್ತಿರುವ ಗುರು, ಪೂರ್ವ ತಯಾರಿಯನ್ನ ಅಚ್ಚುಕಟ್ಟಾಗಿ ನಡೆಸಿ, ಆದಷ್ಟು ಬೇಗ ಫಿಟ್ ಆದರೆ, ಸ್ಯಾಂಡಲ್ ವುಡ್ ಗೆ ರಾಜ್ ಕುಟುಂಬದ ಹೊಸ ಕುಡಿ ಆಗಮನವಾಗುವುದು 100% ಖಚಿತ. (ಫಿಲ್ಮಿಬೀಟ್ ಕನ್ನಡ)

English summary
Actor cum Producer Raghavendra Rajkumar's second son Guru Rajkumar has decided to make Sandalwood debut. As of now, Guru is making preparations for Grand Entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada