For Quick Alerts
  ALLOW NOTIFICATIONS  
  For Daily Alerts

  ಕಾಣೆಯಾಗಿದ್ದಾಳೆ ರಘು ದೀಕ್ಷಿತ್ ಅಚ್ಚುಮೆಚ್ಚಿನ 'ತುಂಟಿ': ಹುಡುಕಿಕೊಡಿ ಪ್ಲೀಸ್.!

  |

  ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ರವರ ಅಚ್ಚುಮೆಚ್ಚಿನ 'ತುಂಟಿ' ಕಾಣೆಯಾಗಿದ್ದಾಳೆ.! ಅರೇ.. ಯಾರೀ ತುಂಟಿ ಅಂತ ಕಣ್ಣು-ಬಾಯಿ ಬಿಡುತ್ತಿದ್ದೀರಾ... ತುಂಟಿ ಬೇರೆ ಯಾರೂ ಅಲ್ಲ ಕಣ್ರೀ. ರಘು ದೀಕ್ಷಿತ್ ರವರ ಮುದ್ದಿನ ನಾಯಿ.

  ತಮ್ಮ ಮುದ್ದಿನ ನಾಯಿಗೆ ರಘು ದೀಕ್ಷಿತ್ 'ತುಂಟಿ' ಅಂತ ನಾಮಕರಣ ಮಾಡಿದ್ದರು. ಹೆಸರಿಗೆ ಆ ಶ್ವಾನ 'ತುಂಟಿ' ಆಗಿದ್ದರೂ, ತುಂಬಾ ಫ್ರೆಂಡ್ಲಿ. ಹೆಚ್ಚಾಗಿ ಬೊಗಳುತ್ತಿರಲಿಲ್ಲ. ಯಾರನ್ನೂ ಕಚ್ಚುತ್ತಿರಲಿಲ್ಲ.

  ಇಂತಿಪ್ಪ ತುಂಟಿ 5 ದಿನಗಳಿಂದ ಕಾಣೆಯಾಗಿದ್ದಾಳೆ. ಮೈಸೂರಿನ ಕೆ.ಆರ್.ಮೊಹಲ್ಲಾದಿಂದ 'ತುಂಟಿ' ನಾಪತ್ತೆಯಾಗಿದ್ದಾಳೆ. 'ತುಂಟಿ' ಅಂತ ಯಾರೇ ಕರೆದರೂ ಆಕೆ ಪ್ರತಿಕ್ರಿಯೆ ನೀಡುತ್ತಾಳೆ. ಹೀಗಾಗಿ, ''ತುಂಟಿ' ಏನಾದರೂ ನಿಮ್ಮ ಕಣ್ಣಿಗೆ ಬಿದ್ದರೆ, ದಯವಿಟ್ಟು ತಿಳಿಸಿ'' ಎಂದು ಫೋನ್ ನಂಬರ್ ಸಮೇತ ರಘು ದೀಕ್ಷಿತ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲರಲ್ಲಿ ಕೇಳಿಕೊಂಡಿದ್ದಾರೆ.

  'ತುಂಟಿ'ಯನ್ನ ಕಂಡು ಹಿಡಿಯಲು ಗುರುತಿಗಾಗಿ ಕುತ್ತಿಗೆಗೆ ಬೆಲ್ಟ್ ಹಾಕಲಾಗಿದ್ಯಾ ಎಂದು ಕೇಳಿದರೆ ರಘು ದೀಕ್ಷಿತ್ ರಿಂದ ಬರುವ ಉತ್ತರ ''ಇಲ್ಲ''. ತುಂಟಿಯನ್ನ ರಘು ದೀಕ್ಷಿತ್ ಯಾವತ್ತೂ ಕಟ್ಟಿ ಹಾಕಿ ಬೆಳೆಸಿರಲಿಲ್ಲ. ರಘು ದೀಕ್ಷಿತ್ ಗೆ ತುಂಟಿ ಸ್ವಾತಂತ್ರ್ಯವಾಗಿ ಓಡಾಡುವುದು ಇಷ್ಟವಿತ್ತು.

  raghu-dixit-pet-thunti-is-missing-since-5-days

  ಇಷ್ಟು ದಿನ ಫ್ರೀಯಾಗಿ ಓಡಾಡಿಕೊಂಡಿದ್ದ ತುಂಟಿ ಈಗ ಕಳೆದು ಹೋಗಿದ್ದಾಳೆ. ತುಂಟಿಯನ್ನ ಮತ್ತೆ ಆಕೆಯ ಒಡೆಯನೊಂದಿಗೆ ಸೇರಿಸಲು ನೀವೂ ಸಹಾಯ ಮಾಡಿ.. ಗೋಲ್ಡನ್ ಬ್ರೌನ್ ಬಣ್ಣದ ಮಿಡಲ್ ಸೈಜ್ ಇಂಡಿಯನ್ ಮಾಂಗ್ರೆಲ್ ಶ್ವಾನ ನಿಮ್ಮ ಕಣ್ಣೆದುರಿಗೆ ಬಂದ್ರೆ, ಕೂಡಲೆ ರಘು ದೀಕ್ಷಿತ್ ಇನ್ಸ್ಟಾಗ್ರಾಮ್ ಅಕೌಂಟ್ ಗೆ ಭೇಟಿ ಕೊಟ್ಟು ಫೋನ್ ಮಾಡಿ...

  English summary
  Raghu Dixit's pet Thunti is missing since 5 days from KR Mohalla, Mysuru.
  Monday, January 13, 2020, 14:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X