Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನನಗೂ ಆ ಅನುಭವ ಆಗಿದೆ: ನೋವಿನ ಸಂಗತಿ ಹಂಚಿಕೊಂಡ ರಘು ದೀಕ್ಷಿತ್
ಗಾಯಕ, ಸಂಗೀತ ಸಂಯೋಜಕ ರಘು ದೀಕ್ಷಿತ್, ಕರ್ನಾಟಕದ ಹೆಸರನ್ನು ಬೇರೆ ಬೇರೆ ರಾಜ್ಯ ಮತ್ತು ದೇಶಗಳಲ್ಲಿ ಪ್ರಚಾರ ಮಾಡಿದ ಹೆಮ್ಮೆಯ ಕಲಾವಿದರಲ್ಲಿ ಒಬ್ಬರು. ಅವರ ಕಂಚಿನ ಕಂಠ ಮತ್ತು ವಿಭಿನ್ನ ಶೈಲಿಯ ಹಾಡುಗಾರಿಕೆಗೆ ಮನಸೋಲದವರಿಲ್ಲ.
Recommended Video
2008ರಲ್ಲಿ 'ಸೈಕೋ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಪರಿಚಯವಾದರು. ಅದರಲ್ಲಿಯೂ 'ನಿನ್ನ ಪೂಜೆಗೆ ಬಂದೆ ಮಾದೇಶ್ವರಾ' ಹಾಡು ಭರ್ಜರಿ ಹಿಟ್ ಆಗಿತ್ತು. ಅವರ ವೇಷಭೂಷಣವೂ ಜನರ ಗಮನ ಸೆಳೆದಿತ್ತು. ಇತ್ತೀಚೆಗೆ 'ಲವ್ ಮಾಕ್ಟೇಲ್ ಚಿತ್ರದಲ್ಲಿಯೂ ಗುನುಗುವ ಹಾಡುಗಳನ್ನು ನೀಡಿದ್ದರು. ಆದರೆ ಹಾಗೆ ನೋಡಿದರೆ ಕನ್ನಡಿಗರಿಗೆ ಅವರ ಪ್ರತಿಭೆ ತಿಳಿದಿದ್ದು ಬಹಳ ತಡವಾಗಿ. ಅದಕ್ಕೂ ಮುನ್ನ ಅವರು ಬೇರೆ ಬೇರೆ ರಾಜ್ಯದ ಜನರಿಗೆ ಪರಿಚಯವಾಗಿದ್ದರು. ಆ ಪ್ರತಿಭೆ ತಿಳಿದ ಬಳಿಕವೂ ಅದಕ್ಕೆ ಸೂಕ್ತ ಮನ್ನಣೆ ಕನ್ನಡದಲ್ಲಿ ಸಿಕ್ಕಿರಲಿಲ್ಲ. ಇದನ್ನು ಸ್ವತಃ ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ
ತಮ್ಮ
ವಿರುದ್ಧ
ಒಂದು
ಗ್ಯಾಂಗ್
ಇದೆ:
ಎ.ಆರ್.
ರೆಹಮಾನ್
ಹೇಳಿದ
ಸ್ಫೋಟಕ
ಸಂಗತಿ
ಖ್ಯಾತ ಸಂಗೀತ ನಿರ್ದೇಶಕ ಎ.ಆರ್, ರೆಹಮಾನ್ ಬಾಲಿವುಡ್‌ನ ಗುಂಪುಗಳ ವಿರುದ್ಧ ಕಿಡಿಕಾರಿದ ಬೆನ್ನಲ್ಲೇ ರಘು ದೀಕ್ಷಿತ್ ತಮಗೆ ಆಗಿದ್ದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ...

ರೆಹಮಾನ್ ಅವರಿಗೂ ಅನುಭವವಾಗಿದೆ
ಅದ್ಭುತ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರಿಗೂ ಇದು ಆಗಿದೆ. ಉತ್ತಮ ಕೆಲಸ ಮಾಡುವುದು ಮಾತ್ರವಲ್ಲ, ಈ ಭಯಾನಕ ಉದ್ಯಮದಲ್ಲಿ ತಮ್ಮ ಕಿವಿಗಳನ್ನು ಭೂಮಿಗೆ ಇರಿಸಿಕೊಂಡಿರುವುದೂ ಅಷ್ಟೇ ಮುಖ್ಯ ಎಂಬುದನ್ನು ಈ ಸಂದರ್ಶನ ವಿವರಿಸಿದೆ ಎಂದು ಎ.ಆರ್ ರೆಹಮಾನ್ ಅವರ ಸಂದರ್ಶನದ ತುಣುಕನ್ನು ಹಂಚಿಕೊಂಡಿದ್ದಾರೆ.

ನನ್ನ ವಿರುದ್ಧ ಕೆಟ್ಟ ರೂಮರ್
ಎರಡು ಬ್ಲಾಕ್ ಬಸ್ಟರ್‌ಗಳಾದ 'ಸೈಕೋ' ಮತ್ತು 'ಜಸ್ಟ್ ಮಾತ್ ಮಾತಲ್ಲಿ' ನೀಡಿದ ಬಳಿಕವೂ ನನಗೆ ಇದೇ ಅನುಭವ ಆಗಿತ್ತು. ನನ್ನ ವಿರುದ್ಧ ಕೆಟ್ಟ ರೂಮರ್‌ಗಳು ಹರಿದಾಡಿದವು ಮತ್ತು ವೃತ್ತಿ ಬದುಕನ್ನು ಹಾನಿ ಮಾಡುವ ಪತ್ರಿಕಾ ಲೇಖನಗಳು ಪ್ರಕಟವಾದವು.
'ಲವ್
ಮಾಕ್
ಟೇಲ್-2'
ಕಥೆ
ಕೇಳಿ
ಸಖತ್
ಥ್ರಿಲ್
ಆದ
ರಘು
ದೀಕ್ಷಿತ್

ನನಗೆ ಅದರ ಅರಿವೇ ಇರಲಿಲ್ಲ
2009-2015ರ ಅವಧಿಯಲ್ಲಿ ನನಗೆ ಯಾವುದೇ ಸಿನಿಮಾಗಳು ಸಿಕ್ಕಿರಲಿಲ್ಲ. ಒಳ್ಳೆಯ ಸಂಗತಿಯೆಂದರೆ ಈ ರೂಮರ್‌ಗಳ ಬಗ್ಗೆ ನನಗೆ ತಿಳಿದೇ ಇರಲಿಲ್ಲ. ಕೆಟ್ಟ ಸಂಗತಿಯೆಂದರೆ-ನನಗೆ ಏಕೆ ಯಾವುದೇ ಕೆಲಸಗಳು ಸಿಗುತ್ತಿರಲಿಲ್ಲ ಎಂದು ನಾನು ಎಂದೂ ತಿಳಿಯಲೂ ಬಯಸಿರಲಿಲ್ಲ. ಹೀಗಾಗಿ ಈ ವಿಚಾರದಲ್ಲಿ ಏನನ್ನೂ ಮಾಡಿರಲಿಲ್ಲ.

ಫೀನಿಕ್ಸ್‌ನಂತೆ ಏಳುತ್ತೇನೆ ನೋಡಿ
ನನ್ನನ್ನು ತಡೆಯಲು ತೀವ್ರ ಪ್ರಮಾಣದಲ್ಲಿ ಕಠಿಣವಾಗಿ ಶ್ರಮಿಸಿದವರಿಗೆ- ನೀವು ಏನು ಬಯಸಿದ್ದೀರೋ ಎಲ್ಲವನ್ನೂ ಪ್ರಯತ್ನಿಸಬಹುದು. ಆದರೆ ಉತ್ತಮ ವ್ಯಕ್ತಿಯನ್ನು ಎಂದಿಗೂ ಕೆಳಮಟ್ಟದಲ್ಲಿ ಇರಿಸುವಂತೆ ಮಾಡಲಾಗದು. ಇಂದಿನಿಂದ ನನ್ನ ಫೀನಿಕ್ಸ್‌ನಂತಹ ಬೆಳವಣಿಗೆಯನ್ನು ನೋಡಿ. ಪ್ರತಿಯೊಬ್ಬರಿಗೂ ರಮಣೀಯವಾದ ಸೂರ್ಯೋದಯದ ಭರವಸೆ ನೀಡುತ್ತೇನೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ.
ಕಾಣೆಯಾಗಿದ್ದಾಳೆ
ರಘು
ದೀಕ್ಷಿತ್
ಅಚ್ಚುಮೆಚ್ಚಿನ
'ತುಂಟಿ':
ಹುಡುಕಿಕೊಡಿ
ಪ್ಲೀಸ್.!

ಬಾಲಿವುಡ್‌ನಲ್ಲಿ ಸ್ವಾಗತವಿದೆ
ಇದಕ್ಕೆ ಅವರ ಅಭಿಮಾನಿಯೊಬ್ಬರು, ದಕ್ಷಿಣ ಭಾರತದ ಪ್ರತಿಭೆಗಳನ್ನು ಅವರು ಮೆಚ್ಚಿಕೊಳ್ಳುವುದಿಲ್ಲ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಘು ದೀಕ್ಷಿತ್, 'ನನಗೆ ಬಾಲಿವುಡ್‌ನಲ್ಲಿ ಈ ಅನುಭವ ಆಗಿರುವುದಲ್ಲ. ಇದು ನನ್ನ ತವರು ರಾಜ್ಯದಲ್ಲಿಯೇ ಆಗಿದೆ. ವಿಷಯವೆಂದರೆ ಬಾಲಿವುಡ್ ನನಗೆ ಸ್ವಾಗತ ನೀಡುತ್ತಿದೆ' ಎಂದು ಹೇಳಿದ್ದಾರೆ.

ರೆಹಮಾನ್ ಹೇಳಿದ ಸಂಗತಿ
'ಬಾಲಿವುಡ್‌ನಲ್ಲಿ ನನ್ನ ವಿರುದ್ಧ ಗುಂಪೊಂದು ಕೆಲಸ ಮಾಡುತ್ತಿದೆ. ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಾ ಅವಕಾಶಗಳನ್ನು ತಪ್ಪಿಸುತ್ತಿದೆ. ಒಳ್ಳೆಯ ಸಿನಿಮಾಗಳಿಗೆ ನಾನು ಇಲ್ಲ ಎನ್ನುವುದೇ ಇಲ್ಲ. ಆದರೆ ಬಾಲಿವುಡ್‌ನಲ್ಲಿ ನನಗೆ ಅವಕಾಶಗಳು ಕಡಿಮೆಯಾಗುತ್ತಿದ್ದವು. ಇದು ಏಕೆ ಎಂದು 'ದಿಲ್ ಬೇಚಾರಾ' ನಿರ್ದೇಶಕ ಮುಕೇಶ್ ಛಾಬ್ರಾ ಹೇಳಿದ ಮಾತಿನ ಬಳಿಕ ಅರಿವಾಯಿತು' ಎಂದು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿರುವುದು ಬಾಲಿವುಡ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ.