For Quick Alerts
  ALLOW NOTIFICATIONS  
  For Daily Alerts

  'ಲವ್ ಮಾಕ್ಟೇಲ್-2'ನಲ್ಲಿ ದೊಡ್ಡ ಬದಲಾವಣೆ; ಚಿತ್ರದಿಂದ ಹೊರನಡೆದ ರಘು ದೀಕ್ಷಿತ್

  |

  ಈ ವರ್ಷ 2020ರ ಪ್ರಾರಂಭದಲ್ಲಿ ತೆರೆಗೆ ಬಂದ 'ಲವ್ ಮಾಕ್ಟೇಲ್' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡಿದೆ. ಚಿತ್ರಪ್ರಿಯರ ಹೃದಯ ಗೆದ್ದಿರುವ 'ಲವ್ ಮಾಕ್ಟೇಲ್'ನ ಪಾತ್ರಗಳು ಇಂದಿಗೂ ಸಿನಿರಸಿಕರನ್ನು ಕಾಡುತ್ತಿವೆ. ಆದಿ ಮತ್ತು ನಿಧಿಮಾ ಪಾತ್ರಗಳು ಹಿಟ್ ಆಗುವ ಜೊತೆಗೆ ಚಿತ್ರದ ಸಂಗೀತ ಸಹ ಅಭಿಮಾನಿಗಳ ಮನಗೆದ್ದಿದೆ.

  ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದರು. ಲವ್ ಮಾಕ್ಟೇಲ್ ಹಾಡುಗಳು ಇಂದಿಗೂ ಗಾಯಪ್ರಿಯರ ಕಿವಿಯಲ್ಲಿ ಗುನುಗುಟ್ಟುತ್ತಿದೆ. ಇದೀಗ 'ಲವ್ ಮಾಕ್ಟೇಲ್' ಸೀಕ್ವೆಲ್ ಪ್ರಾರಂಭವಾಗಿದೆ. ಈಗಾಗಲೇ ಶೇ 60 ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಪಾರ್ಟ್-2ಗೂ ರಘು ದೀಕ್ಷಿತ್ ಸಂಗೀತ ನೀಡುತ್ತಾರೆ ಎಂದು ಹೇಳಲಾಗಿತ್ತು. ಆದರೀಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಚಿತ್ರದಿಂದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಔಟ್ ಆಗಿದ್ದಾರಂತೆ. ಪಾರ್ಟ್-2 ಕಥೆ ಕೇಳಿ ಸಖತ್ ಥ್ರಿಲ್ ಆಗಿದ್ದ ರಘು ದೀಕ್ಷಿತ್ ಇದೀಗ ಸಿನಿಮಾದಿಂದನೆ ಹೊರ ನಡೆದಿರುವುದು ಅಚ್ಚರಿ ಮೂಡಿಸಿದೆ. ಮುಂದೆ ಓದಿ..

  ಆತ್ಮಹತ್ಯೆ ಯೋಚನೆ ಮಾಡಿದ್ದ ರಘು ದೀಕ್ಷಿತ್: ಅಂತರಂಗ ಬಿಚ್ಚಿಟ್ಟ ಗಾಯಕಆತ್ಮಹತ್ಯೆ ಯೋಚನೆ ಮಾಡಿದ್ದ ರಘು ದೀಕ್ಷಿತ್: ಅಂತರಂಗ ಬಿಚ್ಚಿಟ್ಟ ಗಾಯಕ

  ಸಿನಿಮಾದಿಂದ ಹೊರ ನಡೆದ ರಘು ದೀಕ್ಷಿತ್

  ಸಿನಿಮಾದಿಂದ ಹೊರ ನಡೆದ ರಘು ದೀಕ್ಷಿತ್

  ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಲವ್ ಮಾಕ್ಟೇಲ್-2 ಸಿನಿಮಾದಿಂದ ಹೊರ ಹೋಗಿದ್ದಾರಂತೆ. ಕೆಲವು ಕಾರಣಗಳಿಂದ ರಘು ದೀಕ್ಷಿತ್ ಸಿನಿಮಾದ ಭಾಗವಾಗಿಲ್ಲ ಎಂದು ಹೇಳಲಾಗುತ್ತಿದೆ. ಮೊದಲ ಭಾಗದಲ್ಲಿ ಸಂಗೀತದಿಂದ ಮೋಡಿ ಮಾಡಿದ್ದ ರಘು ದೀಕ್ಷಿತ್, ಪಾರ್ಟ್-2ನಿಂದ ಹೊರ ನಡೆದಿರುವುದು ಅಭಿಮಾನಿಗಳಿಗೆ ಕೊಂಚ ನಿರಾಸೆ ಮಾಡಿಸಿದೆ.

  ರಘು ದೀಕ್ಷಿತ್ ಜಾಗಕ್ಕೆ ನಕುಲ್ ಎಂಟ್ರಿ

  ರಘು ದೀಕ್ಷಿತ್ ಜಾಗಕ್ಕೆ ನಕುಲ್ ಎಂಟ್ರಿ

  ರಘು ದೀಕ್ಷಿತ್ ಜಾಗಕ್ಕೆ ಖ್ಯಾತ ಗಾಯಕ ನಕುಲ್ ಅಭ್ಯಂಕರ್ ಎಂಟ್ರಿ ಕೊಟ್ಟಿದ್ದಾರೆ. ಹೌದು, ಲವ್ ಮಾಕ್ಟೇಲ್ ಭಾಗ- 2ರಲ್ಲಿ ನಕುಲ್ ಸಂಗೀತ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಪಾರ್ಟ್-1ರಲ್ಲಿ ಸಿನಿಮಾದ ಭಾಗವಾಗಿದ್ದ ನಕುಲ್, ಪಾರ್ಟ್-2ನಲ್ಲಿ ಸಂಗೀತ ಸಂಯೋಜನೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಲವ್ ಮಾಕ್ಟೇಲ್ ಸಿನಿಮಾದಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆದ 'ಲವ್ ಯು ಚಿನ್ನ...' ಮತ್ತು 'ಜನುಮಗಳೇ ಕಾಯುವೆ...' ಹಾಡನ್ನು ನಕುಲ್ ಹಾಡಿದ್ದಾರೆ.

  'ಲವ್ ಮಾಕ್ ಟೇಲ್-2' ಕಥೆ ಕೇಳಿ ಸಖತ್ ಥ್ರಿಲ್ ಆದ ರಘು ದೀಕ್ಷಿತ್'ಲವ್ ಮಾಕ್ ಟೇಲ್-2' ಕಥೆ ಕೇಳಿ ಸಖತ್ ಥ್ರಿಲ್ ಆದ ರಘು ದೀಕ್ಷಿತ್

  ಚಿತ್ರೀಕರಣ ಮುಗಿದ ಬಳಿಕ ಸಂಗೀತದ ಬಗ್ಗೆ ಚರ್ಚೆ

  ಚಿತ್ರೀಕರಣ ಮುಗಿದ ಬಳಿಕ ಸಂಗೀತದ ಬಗ್ಗೆ ಚರ್ಚೆ

  ಲವ್ ಮಾಕ್ಟೇಲ್ ಮೊದಲ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ಮುಗಿಸಿದ ಬಳಿಕ ಹಾಡುಗಳನ್ನು ಸೇರಿಸಲಾಗಿತ್ತು. ಇದೀಗ ಪಾರ್ಟ್-2ಗೂ ಅದೇ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಮತ್ತು ನಿರ್ಮಾಪಕ ಕೃಷ್ಣ. ಸದ್ಯ 60 ರಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸಂಪೂರ್ಣ ಶೂಟಿಂಗ್ ಮುಗಿದ ಬಳಿಕ ಸಂಗೀತದ ಬಗ್ಗೆ ಚರ್ಚೆ ಮಾಡಿ, ಹಾಡುಗಳನ್ನು ಸೇರಿಸಲಿದ್ದಾರಂತೆ.

  Recommended Video

  ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada
  ಕುತೂಹಲ ಹೆಚ್ಚಿಸಿದ ಪಾರ್ಟ್-2

  ಕುತೂಹಲ ಹೆಚ್ಚಿಸಿದ ಪಾರ್ಟ್-2

  ಲವ್ ಮಾಕ್ಟೇಲ್-2 ಸಿನಿಮಾ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಿದ್ದಾರೆ ಡಾರ್ಲಿಂಗ್ ಕೃಷ್ಣ. ಎರಡನೇ ಭಾಗಕ್ಕೆ ಹೊಸ ನಾಯಕಿಯರ ಎಂಟ್ರಿಯಾಗಿದೆ. ಬೆಂಗಳೂರು ಮೂಲದ ಮಲಯಾಳಂ ನಟಿ ರೇಚಲ್ ಡೇವಿಡ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇನ್ನೂ ಸುಶ್ಮಿತಾ ಎನ್ನುವ ಮತ್ತೋರ್ವ ಯುವ ನಟಿ ಸಹ ಲವ್ ಮಾಕ್ಟೇಲ್-2ನಲ್ಲಿ ನಟಿಸುತ್ತಿದ್ದಾರೆ. ಒಟ್ನಲ್ಲಿ ಸಾಕಷ್ಟು ನಿರೀಕ್ಷೆಯೊಂದಿಗೆ ಸಿನಿಮಾ ತೆರೆಗೆ ಬರುತ್ತಿದೆ. ಇದೀಗ ಸಂಗೀತ ನಿರ್ದೇಶಕರು ಬದಲಾಗಿರುವುದರಿಂದ ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಸಹ ಅಭಿಮಾನಿಗಳಲ್ಲಿ ಮನೆ ಮಾಡಿದೆ.

  English summary
  Music Director Raghu Dixit walks out from love mocktail-2. Music Director and Singer Nakul Abhayankar was a part of Love mocktail-2.
  Monday, November 9, 2020, 16:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X