»   » 'ಹುಚ್ಚ ವೆಂಕಟ್' ಬಗ್ಗೆ ರಘು ದೀಕ್ಷಿತ್ ಹೇಳಿದ್ದೇನು?

'ಹುಚ್ಚ ವೆಂಕಟ್' ಬಗ್ಗೆ ರಘು ದೀಕ್ಷಿತ್ ಹೇಳಿದ್ದೇನು?

Posted By:
Subscribe to Filmibeat Kannada

ಗಲ್ಲಿಗಲ್ಲಿಗಳಲ್ಲೂ, ಸಾಮಾಜಿಕ ಜಾಲತಾಣಗಳ ಪ್ರತಿ ಅಕೌಂಟ್ ನಲ್ಲೂ ಕೇಳಿ ಬರುತ್ತಿರುವ ಹೆಸರು ಒಂದೇ...ಅದೇ ಹುಚ್ಚ ವೆಂಕಟ್.

ಯಾರ ಬಾಯಲ್ಲಿ ಕೇಳಿ, 'ನನ್ ಮಗಂದ್...' ಡೈಲಾಗ್ ಬಂದೇ ಬರುತ್ತೆ. ಇದು 'ಬಿಗ್ ಬಾಸ್' ಹವಾನೋ, ಇಲ್ಲಾ ಹುಚ್ಚ ವೆಂಕಟ್ ಮೇನಿಯಾನೋ, ಒಟ್ನಲ್ಲಿ ಕನ್ನಡ ಕಿರುತೆರೆ ಪ್ರಿಯರಿಗೆ ಸಖತ್ ಮನರಂಜನೆ ಸಿಕ್ತಿರೋದಂತೂ ಪಕ್ಕಾ.

raghu-dixit-huccha-venkat

ವೀಕ್ಷಕರ ಒತ್ತಾಯದ ಮೇರೆಗೆ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಹುಚ್ಚ ವೆಂಕಟ್ ಎಂಟ್ರಿಕೊಟ್ಟರು. ಹುಚ್ಚ ವೆಂಕಟ್ ಹುಚ್ಚಾಟಗಳು ನಗು ತರಿಸಿದರೂ, ಕೆಲವೊಮ್ಮೆ ಅಧಿಕಪ್ರಸಂಗ ಅಂತ ಅನಿಸೋದು ಸಹಜ.

ಯಾರೂ ಏನೇ ಅನ್ನಲಿ, ಬಿಡಲಿ...ನಮ್ ಸಂಗೀತ ನಿರ್ದೇಶಕ ರಘು ದೀಕ್ಷಿತ್ ರವರಿಗೆ ಮಾತ್ರ ಹುಚ್ಚ ವೆಂಕಟ್ 'ಬಿಗ್ ಬಾಸ್-3' ವಿನ್ನರ್ ಆಗ್ಬೇಕಂತೆ. ಹಾಗಂತ ''ನಿನ್ನ ಪೂಜೆಗೆ ಬಂದೆ ಮಹದೇಶ್ವರ..'' ಖ್ಯಾತಿಯ ರಘು ದೀಕ್ಷಿತ್ ಟ್ವೀಟ್ ಮಾಡಿದ್ದಾರೆ.

''ಬಿಗ್ ಬಾಸ್-3' ಕನ್ನಡ ಶೋನ ಹುಚ್ಚ ವೆಂಕಟ್ ಗೆಲ್ಲಬೇಕು ಅನ್ನೋದು ನನ್ನ ಆಸೆ. ಅವರು ನಾನ್ ಸ್ಟಾಪ್ ಎಂಟರ್ಟೇನರ್. ದೇವರ ಆಶೀರ್ವಾದ ಅವರ ಮೇಲೆ ಇರಲಿ'' ಅಂತ ರಘು ದೀಕ್ಷಿತ್ ಟ್ವೀಟ್ ಮಾಡಿದ್ದಾರೆ. ['ಬಿಗ್ ಬಾಸ್'ಗೆ ಹೋಗಲು ಹುಚ್ಚ ವೆಂಕಟ್ ಹಾಕಿದ ಕಂಡೀಷನ್ ಏನು?]

ಹುಚ್ಚ ವೆಂಕಟ್ ಗೆ ಇದುವರೆಗೂ ಪಾಕಿಸ್ತಾನ, ಅಮೆರಿಕದಲ್ಲಿ ಫ್ಯಾನ್ಸ್ ಇದ್ದಾರೆ ಅಂತ ಅಂದುಕೊಂಡಿದ್ವಿ (ಅವರೇ ಹೇಳಿದ ಪ್ರಕಾರ). ಆದ್ರೆ, ಹುಚ್ಚ ವೆಂಕಟ್ ಗೆ ರಘು ದೀಕ್ಷಿತ್ ಕೂಡ ಮನಸೋತಿದ್ದಾರೆ ಅಂದ್ರೆ ನೀವೇ ಊಹಿಸಿಕೊಳ್ಳಿ, ಹುಚ್ಚ ವೆಂಕಟ್ ಕಮಾಲ್ ಹೇಗಿದೆ ಅಂತ.

English summary
Music Director Raghu Dixit has taken his twitter account to wish YouTube Star Huccha Venkat. Raghu Dixit wants Huccha Venkat to win Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada