»   » ತುಪ್ಪದ ಬೆಡಗಿ ರಾಗಿಣಿ..ಗುದ್ದಿದ್ರೆ ಗೂಳಿ..! ಹುಷಾರ್

ತುಪ್ಪದ ಬೆಡಗಿ ರಾಗಿಣಿ..ಗುದ್ದಿದ್ರೆ ಗೂಳಿ..! ಹುಷಾರ್

Posted By:
Subscribe to Filmibeat Kannada

'ತುಪ್ಪದ ಬೆಡಗಿ' ರಾಗಿಣಿ ಹರೆಯದ ಹುಡುಗರ ಕೆನ್ನೆಗೆ ತುಪ್ಪ ಸವರುವ ಕಾಲ ಮುಗಿದ್ಹೋಯ್ತು. ರಾಗಿಣಿ ಮೊದಲಿನ ಹಾಗೆ, ಕನಸಿನ ರಾಣಿ ಅಲ್ಲ. ಅವರ ಲೆವೆಲ್ ಬದಲಾಗಿದೆ. ರಾಗಿಣಿ ಈಗೇನಿದ್ದರೂ 'ಮಾಸ್ ಕ್ವೀನ್'.

ಐ.ಪಿ.ಎಸ್ ಓದಿ, ದುಷ್ಟರ ಎದೆ ಸೀಳಿದ ರಾಗಿಣಿ, ಅದೇ ಆಕ್ಷನ್ ಕ್ವೀನ್ ಇಮೇಜ್ ನಲ್ಲಿ ಮುಂದುವರಿಯುತ್ತಿದ್ದಾರೆ. ಇತ್ತೀಚೆಗಷ್ಟೆ 'ಶಿವಂ' ಚಿತ್ರದಲ್ಲಿ 'ನಾಗಿಣಿ'ಯಾಗಿ ಪಡ್ಡೆ ಹೈಕ್ಳ ಎದೆಗೆ ಕನ್ನ ಹಾಕಿದ್ದ ರಾಗಿಣಿ ಈಗ ಏಕಾಏಕಿ 'ರಣಚಂಡಿ'ಯಾಗ್ಬಿಟ್ಟಿದ್ದಾರೆ.

Ragini Dwivedi as Veera Ranachandi2

ಹೌದು, ರಾಗಿಣಿ ತಾಳಿರುವ ಹೊಚ್ಚ ಹೊಸ ಅವತಾರವೇ 'ರಣಚಂಡಿ'. ಹೆಣ್ ಚಿರತೆ ಮಾಲಾಶ್ರೀಗೆ ಮಾತ್ರ ಮೀಸಲಾಗಿದ್ದ 'ಚಂಡಿ', 'ಚಾಮುಂಡಿ' ಯಂತಹ ಟೈಟಲ್ ಗಳು ಇದೀಗ ರಾಗಿಣಿಗೂ ಒಲಿದು ಬರುತ್ತಿದೆ. ಹಾಗೆ, ರಾಗಿಣಿ ಒಪ್ಪಿಕೊಂಡಿರುವ ಹೊಸ ಸಿನಿಮಾ 'ವೀರ ರಣಚಂಡಿ'.

ಈಗಷ್ಟೆ ಅನೌನ್ಸ್ ಆಗಿರುವ 'ವೀರ ರಣಚಂಡಿ' ಚಿತ್ರದ ಪೋಸ್ಟರ್ ಗಳು ಕೂಡ ರಿಲೀಸ್ ಆಗಿವೆ. 'ಲೇಡಿ ಡಾನ್' ಆಗಿ ಪೋಸ್ಟರ್ ನಲ್ಲಿ ಪೋಸ್ ಕೊಟ್ಟಿರುವ 'ರಾಗಿಣಿ' ಕೈಲಿ ಗನ್ ಕೂಡ ಹಿಡಿದಿದ್ದಾರೆ. ಸಾಲದ್ದಕ್ಕೆ 'ಹೆಸರು ನಂದಿನಿ....ಗುದ್ದಿದ್ರೇ ಗೂಳಿ' ಅನ್ನುವ ಅಡಿಬರಹ ಬೇರೆ ಇದೆ. [ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ]

Ragini Dwivedi as Veera Ranachandi

ರಾಗಿಣೆ ಸ್ಟೈಲು, ಟೈಟಲ್ಲು, ಸಬ್ ಟೈಟಲ್ಲು ನೋಡಿದ್ಮೇಲೆ, ಇದು ಆಕ್ಷನ್ ಸಿನಿಮಾ ಅಂತ ನಿಮಗೆ ನಾವು ಬಿಡಿಸಿ ಹೇಳಬೇಕಾಗಿಲ್ಲ. 'ವೀರ ರಣಚಂಡಿ' ಚಿತ್ರದ ಮೂಲಕ 'ಮಾಸ್ ಕ್ವೀನ್' ಅಂತ ಬಿರುದು ಪಡೆದಿರುವ ರಾಗಿಣಿ, ಚಿತ್ರದಲ್ಲಿ 'ಗೂಂಡಾ'.

ಲೇಡಿ ಡಾನ್ ಆಗಿ ಚಿತ್ರದಲ್ಲಿ ಡಕಾಯಿತಿ ಮಾಡುವ ರಾಗಿಣಿ, 'ವೀರ ರಣಚಂಡಿ' ಚಿತ್ರದಲ್ಲಿ ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ''ಸಿನಿಮಾದಲ್ಲಿ ಹಳ್ಳಿ ಬ್ಯಾಕ್ ಡ್ರಾಪ್ ಇದೆ. ಮೊದಲು ರಾಗಿಣಿ ಗೂಂಡಾ ತರಹ ಕಾಣಿಸಿಕೊಳ್ಳುತ್ತಾರೆ. ಆಮೇಲೆ ಹಳ್ಳಿ ಸ್ಟೋರಿ ಶುರುವಾಗುತ್ತೆ. ರಾಗಿಣಿಯನ್ನ ಎರಡು ಬೇರೆ ಬೇರೆ ರೂಪಗಳಲ್ಲಿ ನೋಡಬಹುದು'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದ್ದಾರೆ ನಿರ್ದೇಶಕ ಆನಂದ್.ಪಿ.ರಾಜು. ['ನಾಟಿ ಕೋಳಿ' ಸಾರಿಗೆ 'ರಾಗಿಣಿ'ಯ ಮಿರ್ಚಿ ಮಸಾಲೆ]

Ragini Dwivedi as Veera Ranachandi3

ರಾಗಿಣಿಗೆ ಮೊದಲು ಐ.ಪಿ.ಎಸ್ ಓದಿಸಿದ ಆನಂದ್.ಪಿ.ರಾಜು, ಇದೀಗ ಅದೇ ರಾಗಿಣಿಯನ್ನ 'ಗೂಳಿ' ಮಾಡ್ತಿದ್ದಾರೆ. ಈಗಾಗಲೇ ಚಿತ್ರದ ಪ್ರೀಪ್ರೊಡಕ್ಷನ್ ಹಂತಕ್ಕೆ ಚಾಲನೆ ನೀಡಲಾಗಿದ್ದು, ಸದ್ಯದಲ್ಲೇ 'ವೀರ ರಣಚಂಡಿ'ಗೆ ಅಧಿಕೃತ ಚಾಲನೆ ಸಿಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Hot Actress Ragini Dwivedi gears up for her next movie Veera Ranachandi. Ragini will be seen as a Lady Don in the movie, which is all set to go on floors shortly. Veera Ranachandi is directed by Anand.P.Raju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada