For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಅಡ್ಡದಲ್ಲಿ ರಾಗಿಣಿ ದ್ವಿವೇದಿ ಐಟಂ ಡಾನ್ಸ್

  By Rajendra
  |

  'ಜೋಗಯ್ಯ' ಚಿತ್ರದ ಸೂತ್ರಧಾರ ಪ್ರೇಮ್ ಕೈಗೆತ್ತಿಕೊಂಡಿರುವ 'ಪ್ರೇಮ್ ಅಡ್ಡ' ಚಿತ್ರದಲ್ಲಿ ಮತ್ತೊಂದು ಮಹತ್ತರ ಬದಲಾವಣೆಯಾಗಿದೆ. ಈ ಚಿತ್ರದ ಐಟಂ ಹಾಡಿಗೆ ಮೋಹಿನಿ ಕಾಮಿನಿ ಭಾಮಿನಿ ಸನ್ನಿ ಲಿಯೋನ್ ರನ್ನು ಕರೆತರುವ ಸುದ್ದಿ ಠುಸ್ ಆದ ಬಳಿಕ, ಈಗ ಈ ಚಿತ್ರಕ್ಕೆ 'ಬಂಗಾರಿ' ರಾಗಿಣಿ ದ್ವಿವೇದಿ ಅವರನ್ನು ಆಯ್ಕೆ ಮಾಡಲಾಗಿದೆ.

  ಈಗಾಗಲೆ ರಾಗಿಣಿ "ತುಪ್ಪ ಬೇಕಾ ತುಪ್ಪಾ..." ಎಂದು 'ಕಳ್ಳ ಮಳ್ಳ ಸುಳ್ಳ 'ಚಿತ್ರದಲ್ಲಿ ಸೊಂಟ ಕುಣಿಸಿ ಪಡ್ಡೆಗಳಿಗೆ ತುಪ್ಪದ ಹೋಳಿಗೆ ಬಡಿಸಿದ್ದರು. ಈಗ ಮತ್ತೊಮ್ಮೆ ಸೊಂಟ ಕುಣಿಸಲು ರಾಗಿಣಿ ಒಪ್ಪಿದ್ದಾರೆ. ಒಟ್ಟಿನಲ್ಲಿ ಪೂಜಾಗಾಂಧಿಗೆ ಚಮಕ್ ನೀಡುತ್ತಿದ್ದಾರೆ ರಾಗಿಣಿ.

  "ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು..." ಎಂಬ ಹಾಡನ್ನು ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದಾರೆ. ಈ ಹಾಡಿಗೆ ರಾಗಿಣಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಸೊಂಟ ಬಳುಕಿಸಲಿದ್ದಾರೆ. ಸೆಪ್ಟೆಂಬರ್ ಮೂರನೇ ವಾರದಲ್ಲಿ 'ಪ್ರೇಮ್ ಅಡ್ಡ' ಆಡಿಯೋ ಕೂಡ ಮಾರುಕಟ್ಟೆಗೆ ಬರಲಿದೆ.

  ಈಗಾಗಲೆ ಬ್ರಿಟಿಷ್ ಹಾಟ್ ಬೆಡಗಿ ಹಾಗೂ ರೂಪದರ್ಶಿ ಸ್ಕಾರ್ಲೆಟ್ ವಿಲ್ಸನ್ ಎಂಬ ತಾರೆ ಪ್ರೇಮ್ ಅಡ್ಡದಲ್ಲಿ ಕುಣಿದು ಹೋಗಿದ್ದಾರೆ. ಈ ಚಿತ್ರದ ಮತ್ತೊಂದು ಐಟಂ ಹಾಡಿಗೆ ಈಗ ರಾಗಿಣಿ ಕುಣಿಯಲು ಸಿದ್ಧವಾಗಿದ್ದಾರೆ. 'ಶಿವ ' ಚಿತ್ರದಲ್ಲಿ ಗ್ಲಾಮರ್ ಪಾತ್ರದಲ್ಲಿ ಮಿಂಚಿದ್ದ ರಾಗಿಣಿ ಈಗ ಮಲಯಾಳಂನ 'ಫೇಸ್ ಟು ಫೇಸ್' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

  'ಅಡ್ಡ' ಚಿತ್ರಕ್ಕಾಗಿ ವಯಸ್ಕರ ಚಿತ್ರಗಳ ತಾರೆ ಸನ್ನಿ ಲಿಯೋನ್ ಅವರನ್ನು ಕರೆತರುತ್ತಿರುವುದಾಗಿ ಈ ಹಿಂದೆ ಕಾಗೆ ಹಾರಿಸಲಾಗಿತ್ತು. ಇನ್ನೇನು ಸನ್ನಿ ಲಿಯೋನ್ ಬಂದೇ ಬಿಟ್ಟರು ಎಂದು ಎಲ್ಲರೂ ಕಣ್ಣು ಬಾಯಿ ಬಿಟ್ಟುಕೊಂಡು ಕೂತಿದ್ದರು. ಆದರೆ ಕಡೆಗೆ ಇದು ಕಾಗಕ್ಕ ಗುಬ್ಬಕ್ಕನ ಕತೆ ಎಂಬುದು ಗೊತ್ತಾಗುವಷ್ಟರಲ್ಲಿ ಚಿತ್ರಕ್ಕೆ ಬೇಕಾದ ಪ್ರಚಾರ ಧಾರಾಳವಾಗಿ ಸಿಕ್ಕಿತ್ತು. ಅಂದಹಾಗೆ ಪ್ರೇಮ್ ಅಡ್ಡ ಚಿತ್ರ ತಮಿಳಿನ ಯಶಸ್ವಿ ಚಿತ್ರ ಸುಬ್ರಮಣಿಪುರಂ ರೀಮೇಕ್. (ಒನ್ ಇಂಡಿಯಾ ಕನ್ನಡ)

  English summary
  "Thuppa Beka Thuppa..." in Kalla Malla Sulla fame girl Ragini Dwivedi to do an item song in Prem Adda. A song penned by Yogaraj Bhat Konkana Suththi Mylarakke Bande Naanu….will be shot soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X