For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ಸಂಬರ್ಗಿ ಬಗ್ಗೆ ನಟಿ ರಾಗಿಣಿ ದ್ವಿವೇದಿ ಹೇಳಿದ್ದು ಹೀಗೆ

  |

  ಬಹಳ ದಿನಗಳ ನಂತರ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ''ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಉದ್ದೇಶಪೂರ್ವಕವಾಗಿ ಸಿಕ್ಕಿ ಹಾಕಿಸಲಾಗಿದೆ'' ಎಂದಿದ್ದಾರೆ.

  Recommended Video

  ಪ್ರಶಾಂತ್ ಸಂಬರಗಿ ಯಾರು ಅನ್ನೋದೇ ಗೊತ್ತಿಲ್ಲ ಅವರ ಪರಿಚಯವೇ ಇಲ್ಲ ಎಂದ ರಾಗಿಣಿ

  ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಗಿಣಿ, ''ಡ್ರಗ್ಸ್ ಪ್ರಕರಣದಲ್ಲಿ 100% ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಬರೀ ಈ ಒಂದು ಪ್ರಕರಣದಲ್ಲಿ ಮಾತ್ರವೇ ಅಲ್ಲ ಹೆಣ್ಣು ಮಕ್ಕಳು ಎಂದರೆ ಪ್ರತಿಯೊಂದು ವಿಷಯದಲ್ಲಿಯೂ ಟಾರ್ಗೆಟ್ ಮಾಡಲಾಗುತ್ತದೆ'' ಎಂದಿದ್ದಾರೆ.

  ಡ್ರಗ್ಸ್ ಪ್ರಕರಣದಲ್ಲಿ ನಟಿಯರ ಮೇಲೆ ಹಲವು ಆರೋಪಗಳನ್ನು ಮಾಡಿದ್ದ ಪ್ರಶಾಂತ್ ಸಂಬರ್ಗಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಟಿ ರಾಗಿಣಿ, ''ಅವರು ಏನು ಮಾತನಾಡುತ್ತಾರೋ ಮಾತನಾಡಲಿ. ಅವರನ್ನು ನಾನು ನಿಯಂತ್ರಿಸಲು ಆಗುವುದಿಲ್ಲ. ಅವರವರ ಅಭಿಪ್ರಾಯ ಅವರದ್ದು'' ಎಂದಿದ್ದಾರೆ.


  ''ಪ್ರಶಾಂತ್ ಸಂಬರ್ಗಿಯನ್ನು ನಾನು ನೋಡಿಲ್ಲ. ಭೇಟಿಯಾಗಿಲ್ಲ ಅವರ ಪರಿಚಯ ಸಹ ನನಗೆ ಇಲ್ಲ. ಅವರೇನು ಮಾತನಾಡಿದ್ದಾರೆ ಎಂಬುದು ನನಗೆ ಮುಖ್ಯವಲ್ಲ. ನಾನು ಮಾತನಾಡುವುದು, ನಡೆದುಕೊಳ್ಳುವುದಷ್ಟೆ ನನಗೆ ಮುಖ್ಯ'' ಎಂದಿದ್ದಾರೆ ನಟಿ ರಾಗಿಣಿ.

  ''ಯಾವುದೇ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುವುದು ಹಲವರಿಗೆ ಸುಲಭವಾಗಿಬಿಟ್ಟಿದೆ. ಇನ್ನೊಬ್ಬರ ಮೇಲೆ ಆರೋಪಗಳನ್ನು ಮಾಡುವ ಬದಲಿಗೆ ನಮ್ಮ ಜೀವನದಲ್ಲಿ ನಾವು ಸರಿಯಾಗಿದ್ದರೆ ಸಾಕು'' ಎಂದಿದ್ದಾರೆ ರಾಗಿಣಿ.

  ಕಳೆದ ವರ್ಷ ಬೆಳಕಿಗೆ ಬಂದಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ನೂರಕ್ಕೂ ಹೆಚ್ಚು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರಾಗಿಣಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.

  ನಟಿ ರಾಗಿಣಿ ಮಾತ್ರವಲ್ಲದೆ ನಟಿ ಸಂಜನಾ ಗಲ್ರಾನಿಯನ್ನೂ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಹಲವು ಜನಪ್ರಿಯ ನಟ-ನಟಿಯರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು.

  English summary
  Actress Ragini Dwivedi said she did not know who is Prashanth Sambargi she also said she have been targeted in drugs case.
  Wednesday, June 16, 2021, 18:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X