For Quick Alerts
  ALLOW NOTIFICATIONS  
  For Daily Alerts

  ಸಿಸಿಬಿ ವಿಚಾರಣೆಗೆ ಗೈರಾದ ನಟಿ ರಾಗಿಣಿ

  |

  ಡ್ರಗ್ಸ್ ಮಾಫಿಯಾ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ. ಸ್ಯಾಂಡಲ್ ವುಡ್ ನ ಕೆಲವು ನಟ-ನಟಿಯರು ಮಾದಕ ವಸ್ತು ಜಾಲದೊಡನೆ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪದಡಿ, ಸಿಸಿಬಿ ತನಿಖೆ ಆರಂಭಿಸಿದೆ. ಈ ಸಂಬಂಧ ನಟಿ ರಾಗಿಣಿ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ರಾಗಿಣಿ ವಿಚಾರಣೆಗೆ ಗೈರಾಗಿದ್ದಾರೆ.

  Sandalwood Narcotics Mafia ಬಗ್ಗೆ ಹಿರಿಯ ನಟ ದೊಡ್ಡಣ್ಣ ಬೇಸರ ವ್ಯಕ್ತಪಡಿಸಿದರು | Filmibeat Kannada

  ಆನಾರೋಗ್ಯ ಹಿನ್ನಲೆ ವಿಚಾರಣೆಗೆ ಗೈರಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಎರಡು ದಿನಗಳು ಕಾಲಾವಕಾಶ ಕೊಡುವಂತೆ ರಾಗಿಣಿ ಪರ ವಕೀಲರು ಮನವಿ ಮಾಡಿಕೊಂಡಿದ್ದಾರಂತೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ರಾಗಿಣಿಗೆ ನೋಟಿಸ್ ನೀಡಿತ್ತು.

  ಚಿತ್ರರಂಗಕ್ಕೆ ಡ್ರಗ್ಸ್ ನಂಟು: ನಟಿ ರಾಗಿಣಿಗೆ ಸಿಸಿಬಿ ನೊಟೀಸ್

  ಡ್ರಗ್ ಜಾಲ ಬೇಧಿಸಲು ಹೊರಟಿರುವ ಸಿಸಿಬಿ ಬಲೆಗೆ ಮೊದಲು ರಾಗಿಣಿ ಆಪ್ತ ರವಿಶಂಕರ್ ಸಿಕ್ಕಿಬಿದ್ದಾರೆ. ರವಿಶಂಕರ್ ವಿಚಾರಣೆ ಮಾಡಿದ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರವಿಶಂಕರ್ ಅನ್ನು ವಿಚಾರಣೆ ಒಳಪಡಿಸಿದ್ದು, ಆತನ ಹೇಳಿಕೆ ಮೇರೆಗೆ ನಟಿ ರಾಗಿಣಿಗೆ ಸಿಸಿಬಿ ನೊಟೀಸ್ ನೀಡಲಾಗಿತ್ತು. ಇಂದು ಬೆಳಿಗ್ಗೆ ರಾಗಿಣಿ ವಿಚಾರಣೆ ಎದುರಿಸಬೇಕಿತ್ತು.

  ಈಗಾಗಲೇ ಅಧಿಕಾರಿಗಳು ಕೆಲವರಿಗೆ ನೋಟಿಸ್ ನೀಡಿದ್ದು, ಗಾಂಜಾ ನಶೆಯಲ್ಲಿ ತೇಲುತ್ತಿದ್ದವರಿಗೆ ಸಂಕಷ್ಟ ಎದುರಾಗಿದೆ. ಯಾರ್ಯಾರು ಡ್ರಗ್ ಮಾಫಿಯಾದ ಜೊತೆ ಸಂಪರ್ಕ ಹೊಂದಿದ್ದಾರೆ ಅವರನ್ನು ಎರಡು ದಿನದೊಳಗೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಯಾವ ನಟಿ-ನಟಿಯರು ನಶೆಯ ಜಾಲದಲ್ಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

  English summary
  Actress Ragini has not attended the CCB hearing due to health issues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X