»   » ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ

ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada

'ತುಪ್ಪ ಬೇಕಾ ತುಪ್ಪ' ಅಂತ ಗಾಂಧಿನಗರದಲ್ಲಿ ಪಂಜಾಬಿ ಹುಡುಗಿ ರಾಗಿಣಿ ತುಪ್ಪ ಮಾರೋಕೆ ನಿಂತಿದ್ದೇ ತಡ, ಅಂದಿನಿಂದ ಇಂದಿನವರೆಗೂ ಸ್ಯಾಂಡಲ್ ವುಡ್ ನಲ್ಲಿ 'ತುಪ್ಪದ ಬೆಡಗಿಯ' ಬಿಸಿ ಆರಿಲ್ಲ.

ಪಡ್ಡೆ ಹೈಕ್ಳ ಎದೆಯಲ್ಲಿ ಅವಲಕ್ಕಿ ಕುಟ್ಟೋ ಈ ರಾಗಿಣಿ ಇದೀಗ ಏಕ್ ದಂ ಹೊಸ ಅವತಾರ ತಾಳಿದ್ದಾರೆ. ಅವರ ಈ ರೂಪಾಂತರವನ್ನೇನಾದರೂ ನೋಡಿಬಿಟ್ರೆ, ತುಂಡ್ ಹೈಕ್ಳು ನಿದ್ದೇ ಮಾಡೋದೇ ಡೌಟು. [ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಹೊಸ ಟೈಟಲ್]

Actress Ragini Dwivedi

ಕೊಂಚ ತೆಳ್ಳಗಾಗಿ, ಬಿಕಿನಿ ತೊಟ್ಟು ರಾಗಿಣಿ ಸ್ವಿಮ್ಮಿಂಗ್ ಪೂಲ್ ಗೆ ಇಳಿಯುತ್ತಿರುವ ಈ ದೃಶ್ಯವನ್ನ ನೋಡಿದ್ರೆ, ಎಂಥವ್ರರಿಗೂ ಎದೆಬಡಿತ ಜೋರಾಗದೆ ಇರೋಲ್ಲ. ರಾಗಿಣಿಯನ್ನ ಸೀರೆಯಲ್ಲಿ ನೋಡಿ ಕರೆಂಟ್ ಹೊಡೆಸಿಕೊಳ್ಳುವ ಅಭಿಮಾನಿಗಳಿರುವಾಗ, ಗಾಂಧಿನಗರದ ಈ ಗಿಣಿ ಟೂ ಪೀಸ್ ಹಾಕಿದ್ರೆ ಸುಮ್ನೆನಾ? ಪಡ್ಡೆ ಹೈಕ್ಳ ಹಾರ್ಟಲ್ಲಿ ಥೌಸೆಂಡ್ ವ್ಯಾಟ್ ಬಲ್ಬ್ ಆನ್ ಆದ್ಹಂಗೆ ಲೆಕ್ಕ!

ಇಷ್ಟಕ್ಕೆ ಮತ್ತೇರಿಸಿಕೊಳ್ಳುವ ಮುನ್ನ ರಾಗಿಣಿಯ ಸೊಂಟದ ಮೇಲಿರುವ ನಾಗರಹಾವನ್ನ ಸ್ವಲ್ಪ ನೋಡಿ. ಬಿಕಿನಿ ಹಾಕಿದ್ಮೇಲೆ ಅದಕ್ಕೊಂದು ಸ್ಪೆಷಾಲಿಟಿ ಇರ್ಬೇಕು ಅಂತ ರಾಗಿಣಿ ಹೆಡೆಯೆತ್ತಿದ್ದ ಹಾವನ್ನ ಟ್ಯಾಟೂ ಮಾಡಿಸಿಕೊಂಡಿದ್ದಾರೆ. [ತಣ್ಣಗಾದ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ]

'ಶಿವಂ'ನಲ್ಲಿ ಬಿಕಿನಿ ತೊಟ್ಟ ರಾಗಿಣಿ ವೀಡಿಯೋ

ಇದನ್ನ ನೋಡಿದವರು ಬುಸುಗುಡುತ್ತಾರೋ, ಇಲ್ಲವೋ, ಆದರೆ ಅಲ್ಲೇ ಇರುವ ರವಿಶಂಕರ್ ಮಾತ್ರ ಲಲನೆಯರೊಂದಿಗೆ ಹಾಯಾಗಿದ್ದಾರೆ. ಬಿಕಿನಿಯಲ್ಲಿರುವ ರಾಗಿಣಿಗೂ ರವಿಶಂಕರ್ ಗೂ ಸಂಬಂಧ ಬೆಸೆದಿರುವ ಸಿನಿಮಾ 'ಶಿವಂ'. ಹೆಸರು ಕೇಳಿ ಕಣ್ಣುಬಾಯಿಬಿಡುವ ಮುನ್ನ, ಇದು ಉಪೇಂದ್ರ ಅಭಿನಯದ 'ಬಸವಣ್ಣ' ಚಿತ್ರದ ನೂತನ ಹೆಸರು ಅನ್ನುವುದನ್ನು ನೆನಪಿಸಿಕೊಳ್ಳಿ. [ಪಡ್ಡೆಗಳ ನಿದ್ದೆಗೆಡಿಸಿದ ರಾಗಿಣಿ ಎಂಎಂಎಸ್]

'ಶಿವಂ' ಅನ್ನುವ ಹೆಸರಿಗೂ ರಾಗಿಣಿ ತೊಟ್ಟಿರುವ ಬಿಕಿನಿಗೂ, ಖಾವಿ ಧರಿಸಿರುವ ಉಪೇಂದ್ರಗೂ ಅದೇನು ಲಿಂಕ್ ಶಿವಾ? ಅಂದ್ರೆ 'ಸಿನಿಮಾ ನೋಡಿ' ಅಂತಾರೆ ನಿರ್ದೇಶಕ ಶ್ರೀನಿವಾಸ್ ರಾಜು. 'ಶಿವಂ' ಚಿತ್ರದಲ್ಲಿ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳುವ ರಾಗಿಣಿ, ಪ್ರಮುಖ ಸೀನ್ ವೊಂದಕ್ಕೆ ಬಿಕಿನಿ ತೊಡುವ ಅವಶ್ಯಕತೆಯಿತ್ತಂತೆ. ದೇವರ ಹೆಸ್ರಿಟ್ಟುಕೊಂಡಿರುವ ಸಿನಿಮಾದಲ್ಲಿ ಇದೆಲ್ಲಾ ಬೇಕಿತ್ತಾ? ಅನ್ನುವ ಪ್ರಶ್ನೆ ಮೂಡಿದ್ರೂ, ರಾಗಿಣಿ ಇದ್ದಮೇಲೆ ಬಿಸಿ ಬಿಸಿ ತುಪ್ಪ ಬೇಕೇಬೇಕಲ್ವಾ. (ಫಿಲ್ಮಿಬೀಟ್ ಕನ್ನಡ)

English summary
Kannada Actress Ragini Dwivedi wears Bikini for her upcoming movie 'Shivam'. The Actress is seen in hot avatar by inking snake tattoo on her hips.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada