ಶಾನ್ ಮದುವೆಯಲ್ಲಿ ರಾಜ್ ಕುಟುಂಬದ ಸಂಭ್ರಮ
ಡಾ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮೀ ಅವರ ಪುತ್ರನ ಮದುವೆ ಇಂದು(ಮಾರ್ಚ್ 26) ಶಿವಮೊಗ್ಗದಲ್ಲಿ ಅದ್ಧೂರಿ ಆಗಿ ನಡೆದಿದೆ. ಲಕ್ಷ್ಮೀ ಹಾಗೂ ಗೋವಿಂದ್ ರಾಜು ಅವರ ಪುತ್ರ ಶಾನ್ ಹಾಗೂ ಸಿಂಧೂ ಅವರ ಕಲ್ಯಾಣದಲ್ಲಿ ಎರಡು ಕುಟುಂಬದ ಗಣ್ಯರು ಹಾಗೂ ಡಾ ರಾಜ್ ಕುಮಾರ್ ಕುಟುಂಬದ ಪ್ರತಿಯೊಬ್ಬರು ಕಾಣಿಸಿಕೊಂಡಿದ್ದಾರೆ.
ಶಾನ್ ರಾಜ್ ಕುಟುಂಬದ ಹಿರಿಯ ಮೊಮ್ಮಗ ಆಗಿರುವುದರಿಂದ ಮಾವಂದಿರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಸಮೇತರಾಗಿ ಹೋಗಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

ರಾಮ್ ಕುಮಾರ್ ಮತ್ತು ಪೂರ್ಣಿಮಾ ಅವರ ಮನೆಯವರೆಲ್ಲರೂ ಮದುವೆ ಹೋಗಿದ್ದಾರೆ. ಇನ್ನು ಅಣ್ಣಾವ್ರ ಮೊಮ್ಮಕ್ಕಳಾದ ಧನ್ಯರಾಮ್ ಕುಮಾರ್, ಧೀರೇನ್ ರಾಮ್ ಕುಮಾರ್, ನಿವೇದಿತಾ ಶಿವರಾಜ್ ಕುಮಾರ್, ವಂದಿತಾ ಹಾಗೂ ಧೃತಿ ಪುನೀತ್ ರಾಜ್ ಕುಮಾರ್ ಮದುವೆಯಲ್ಲಿ ಮಿಂಚಿದ್ರು.

ಶಾನ್ ಅವರ ಕೈ ಹಿಡಿದ ಸಿಂಧೂ ಸಾಗರ ನಗರದಲ್ಲಿ ವಕೀಲರಾಗಿ ಗುರುತಿಸಿಕೊಂಡಿರುವ ಬರೂರು ನಾಗರಾಜ್ ರವರ ಮಗಳು. ಶಿವಮೊಗ್ಗದ ಸರ್ಜಿ ಕಲ್ಯಾಣ ಮಂಟಪದಲ್ಲಿ ನಡೆದ ಅದ್ದೂರು ಮದುವೆ ಸಮಾರಂಭದಲ್ಲಿ ಅಣ್ಣಾವ್ರ ಮಕ್ಕಳು ಮತ್ತು ಮೊಮ್ಮಕ್ಕಳು ಸಾಕ್ಷಿ ಆದರು.


Click it and Unblock the Notifications











